CrimeNational

ಸ್ವಂತ ಮಗಳ ಮೇಲೆ ಅತ್ಯಾಚಾರವೆಸಗಿದ್ದ ಪಾಪಿಗೆ 101 ವರ್ಷ ಜೈಲು!

ಕೊಚ್ಚಿ; ಸ್ವಂತ ಮಗಳ ಮೇಲೆಯೇ ಆರು ವರ್ಷಗಳಿಂದ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿ ಮಾಡಿದ್ದ ವ್ಯಕ್ತಿಗೆ ಈಗ 101 ವರ್ಷಗಳ ಜೈಲು ಶಿಕ್ಷೆಯಾಗಿದೆ.. ಕೇರಳದ ಮಲಪ್ಪುರಂನ ಕೋರ್ಟ್‌ ಇಂತಹದ್ದೊಂದು ಮಹತ್ವದ ತೀರ್ಪು ನೀಡಿದೆ.. 

ಹೆಚ್​. ಮುಹಮ್ಮದ್ ಎಂಬಾತನೇ 101 ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ.. ಈತ ತನ್ನ ಮಗಳನ್ನು 10ನೇ ವರ್ಷದಿಂದ 16ನೇ ವರ್ಷದವರೆಗೆ ನಿರಂತರವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದ.. ಇದರಿಂದಾಗಿ ಆಕೆ ಗರ್ಭಿಣಿ ಕೂಡಾ ಆಗಿದ್ದಳು.. ಮಗಳನ್ನು ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಈ ವಿಷಯ ಬಯಲಾಗಿತ್ತು.

ವಿಚಾರಣೆ ವೇಳೆ ಆರೋಪಿ ಮಹಮದ್‌, ತನ್ನ ಕೃತ್ಯವನ್ನು ಸಮರ್ಥನೆ ಮಾಡಿಕೊಂಡಿದ್ದ.. ಎಲ್ಲಾ ತಂದೆಯರೂ ತಮ್ಮ ಹೆಣ್ಣುಮಕ್ಕಳಿಗೆ ಹೀಗೆಯೇ ಮಾಡುತ್ತಾರೆ ಎಂದು ಹೇಳಿದ್ದ.. ಕೋರ್ಟ್‌ ಇಂತಹ ಪಾಪಿಗೆ ತಕ್ಕ ಶಿಕ್ಷೆ ವಿಧಿಸಿದೆ.. ಇದು ಇಂತಹ ಕೃತ್ಯ ಎಸಗುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ..

 

Share Post