ಬ್ಯಾಡ್ಮಿಂಟನ್ ಆಡುವಾಗ ಹೃದಯಸ್ತಂಭನ!; ಕುಸಿದುಬಿದ್ದು ಚೀನಾ ಆಟಗಾರ ಸಾವು!
ಬ್ಯಾಡ್ಮಿಂಟನ್ ಆಡುವಾಗ ಹೃದಯಸ್ತಂಭನವಾಗಿ ಆಟಗಾರ ಅಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ.. ಇಂಡೋನೇಷ್ಯಾದಲ್ಲಿ ನಡೆದ ಇಂಟರ್ನ್ಯಾಷನಲ್ ಟೂರ್ನ್ಮೆಂಟ್ನಲ್ಲಿ ಈ ದುರ್ಘಟನೆ ನಡೆದಿದ್ದು, ಚೀನಾದ ಬ್ಯಾಡ್ಮಿಂಟನ್ ಆಟಗಾರ ಜಾಂಗ್ ಝಿಜಿ (17) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ..
ಚೀನಾ ಹಾಗೂ ಜಪಾನ್ ನಡುವೆ ಪಂದ್ಯ ನಡೆಯುತ್ತಿತ್ತು.. ಜಪಾನ್ನ ಕುಸುಮ ಕವಾನೊ ವಿರುದ್ಧ ಚೀನಾದ ಜಾಂಗ್ ಝಿಜಿ ಆಡುತ್ತಿದ್ದರು.. ಇಬ್ಬರೂ 1-1 ಸಮ ಅಂಕಗಳನ್ನು ಪಡೆದಿದ್ದರು.. ಇದೇ ವೇಳೆ ಜಾಂಗ್ ಝಿಜಿಗೆ ಹೃದಯಸ್ತಂಭನವಾಗಿದೆ.. ನೆಲಕ್ಕುರುಳಿದ ಅವರನ್ನು ವೈದ್ಯರು ಬಂದು ಹೊತ್ತುಕೊಂಡು ಹೋದರು. ಆದ್ರೆ ಅಷ್ಟೊತ್ತಿಗಾಗಲೇ ಆಟಗಾರನ ಜೀವ ಹೋಗಿತ್ತು ಎಂದು ತಿಳಿದುಬಂದಿದೆ..