Cinema

ಅಪ್ಪು ಮಾವನ ಕನಸನ್ನು ನಾನು ನೆರವೇರಿಸುತ್ತೇನೆ: ಗೋಪಾಲ್‌

ಬೆಂಗಳೂರು: ಪುನೀತ್‌ ರಾಜ್‌ಕುಮಾರ್‌ ಕನಸನ್ನು ನನಸು ಮಾಡಲು ಸೋದರಳಿಯ ಗೋಪಾಲ್‌ ಮುಂದಾಗಿದ್ದಾರೆ. ಗಾಜನೂರಿನ ಮನೆಯನ್ನು ಮ್ಯೂಸಿಯಂ ಮಾಡುವ ಕನಸನ್ನು ಅಪ್ಪು ಹೊಂದಿದ್ರು. ಆದ್ರೆ ಆ ಕನಸು ಈಡೇರದೆಯೇ ಕೊನೆಯುಸಿರೆಳೆದ್ರು. ಈಗ ಅವರ ಕನಸಿಗೆ ಚೇತನವಾಗಿ ಅಳಿಯ ಗೋಪಾಲ್‌ ಬಂದಿದ್ದಾರೆ. ತಮ್ಮ ಪೂರ್ವಜರು ಬಾಳಿ ಬದುಕಿದ ಮನೆಯನ್ನು ವಸ್ತು ಸಂಗ್ರಹಾಲಯವಾಗಿ ಮಾರ್ಪಾಡು ಮಾಡುವುದಾಗಿ ತಿಳಿಸಿದ್ರು. ಆ ಮನೆಯಲ್ಲಿ ಡಾ.ರಾಜ್‌ಕುಮಾರ್‌ ನೆನಪುಗಳಿವೆ. ಹಾಗೆಯೇ ನನ್ನ ಮಾವ ಬಾಲ ನಟನಾಗಿ ಸಿನಿಮಾ ಎಂಟ್ರಿ ಕೊಟ್ಟಿದ್ದು ಕೂಡಾ ಇದೇ ಮನೆಯಿಂದ ಅವರ ನೆನಪುಗಳು ಚಿರಕಾಲ ಹಾಗೆ ಉಳಿಯುವುದಕ್ಕಾಗಿ ಅದನ್ನು ಮ್ಯೂಸಿಯಂ ಮಾಡಲು ರಾಜ್‌ಕುಮಾರ್‌ ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಮೊನ್ನೆ ಸುರಿದ ಭಾರೀ ಮಳೆಯಿಂದಾಗಿ ಗಾಜನೂರುನ ಮನೆ ತೀರಾ ಶೀಥಿಲಾವಸ್ಥೆ ತಲುಪಿದೆ. ಶೀಘ್ರದಲ್ಲೇ ಮ್ಯೂಸಿಯಂ ನಿರ್ಮಾಣಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತದೆ. ರಾಜ್‌ಕುಮಾರ್‌ ಹಾಗೂ ಪುನೀತ್‌ ಅವರ ಗತಕಾಲದ ನೆನಪುಗಳು ಗಾಜನೂರಿನ ಮನೆಯಲ್ಲಿ ಮತ್ತೆ ಮರು ಸೃಷ್ಟಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ.

Share Post