ಗಂಡನ ಎದುರೇ ಕಟ್ಟಡದ ಮೇಲಿಂದ ಬಿದ್ದ ಪತ್ನಿ; ಮುಂದೇನಾಯ್ತು ಗೊತ್ತಾ..?
ಬೆಂಗಳೂರು; ಗಂಡ-ಹೆಂಡತಿ ಮನೆ ಟೆರೇಸ್ ಮೇಲಿದ್ದರು.. ಈ ವೇಳೆ ಪತ್ನಿ ಜಾರಿ ಕೆಳಗೆ ಬೀಳುತ್ತಿದ್ದರು..ಆಗ ಗಂಡ ಆಕೆಯ ಕೈಹಿಡಿದು ರಕ್ಷಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ.. ಪತ್ನಿ ಗಂಡ ಕೈಯಿಂದ ನೇತಾಡುತ್ತಿದ್ದರೆ, ಕೆಳಗೆ ನಿಂತಿದ್ದ ಜನ ರಕ್ಷಣೆ ಮಾಡೋಕೆ ಸಿದ್ಧತೆ ಮಾಡ್ತಿದ್ದರು.. ಆದ್ರೆ, ಆಕೆ ಗಂಡನ ಕೈಜಾರಿ ಕೆಳಗೆ ಬಿದ್ದಿದ್ದಾಳೆ.. ಕೆಳಗೆ ಬೈಕ್‌ಗಳು ಪಾರ್ಕ್ ಮಾಡಿದ್ದರಿಂದ ಅದರ ಮೇಲೆ ಬಿದ್ದು ತೀವ್ರ ಗಾಯಗೊಂಡಿದ್ದಾಳೆ.. ಕೋಮಾಗೆ ಜಾರಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ..
ಈ ಘಟನೆ ನಡೆದದ್ದು ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಕನಕನಗರದ ಬಡಾವಣೆಯಲ್ಲಿ.. 27 ವರ್ಷದ ಮಹಿಳೆ ರುಬಾಯ್ ಎಂಬಾಕೆಯೇ ಮನೆ ಮೇಲಿಂದ ಕಾಲುಜಾರಿ ಬಿದ್ದಾಕೆ.. ಸದ್ಯ ಆಕೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ತನ್ನ ಪತಿಯ ಜೊತೆ ಕಟ್ಟಡದದ ಮೇಲೆ ಆಕೆ ಕೆಲಸ ಮಾಡ್ತಿದ್ದಳು. ಕೆಲಸ ಮಾಡುವ ವೇಳೆ ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾಳೆ.. ನೀರಿನ ಮೇಲೆ ಕಾಲಿಟ್ಟಿದ್ದರಿಂದ ಕಾಲು ಜಾರಿ ಕೆಳಗೆ ಬಿದ್ದಿದ್ದಾಳೆ ಎಂದು ತಿಳಿದುಬಂದಿದೆ..