ಅರವಿಂದ್ ಕೇಜ್ರಿವಾಲ್ ಗೆ ಬಿಗ್ ರಿಲೀಫ್ ; ರೆಗ್ಯುಲರ್ ಬೇಲ್ ಮಂಜೂರು
ದೆಹಲಿ; ದೆಹಲಿ ಮದ್ಯ ಹಗರಣದಲ್ಲಿ ಆಪ್ ನಾಯಕ ಹಾಗೂ ಸಿಎಂ ಕೇಜ್ರಿವಾಲ್ ಗೆ ಭಾರೀ ರಿಲೀಫ್ ಸಿಕ್ಕಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ಗೆ ರೂಸ್ ಅವೆನ್ಯೂ ನ್ಯಾಯಾಲಯ ಸಾಮಾನ್ಯ ಜಾಮೀನು ಮಂಜೂರು ಮಾಡಿದೆ.
ದೆಹಲಿ ಮದ್ಯ ನೀತಿ ಹಗರಣದಲ್ಲಿ ಇಡಿ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು.. ಕೋರ್ಟ್ ಅವರಗೆ ಒಂದು ಲಕ್ಷ ರೂಪಾಯಿಗಳ ಬಾಂಡ್ ಶೂರಿಟಿ ಮೇಲೆ ನ್ಯಾಯಾಲಯವು ಜಾಮೀನು ನೀಡಿತು.
ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಮೇ 10ರಿಂದ ಜೂನ್ 1ರವರೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಹೀಗಾಗಿ ಅವರು ಜೂನ್ 2 ರಂದು ತಿಹಾರ್ ಜೈಲು ಅಧಿಕಾರಿಗಳ ಮುಂದೆ ಶರಣಾಗಿದ್ದರು. ಕೇಜ್ರಿವಾಲ್ ನಾಳೆ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಕೇಜ್ರಿವಾಲ್ ಜಾಮೀನಿಗೆ ಎಎಪಿ ಪ್ರತಿಕ್ರಿಯಿಸಿದೆ. ಸತ್ಯಮೇವ ಜಯತೇ ಎಂದು ಆಪ್ ಸಚಿವ ಅತಿಶಿ ಟ್ವೀಟ್ ಮಾಡಿದ್ದಾರೆ.
ಸಿಎಂ ಅರವಿಂದ್ ಕೇಜ್ರಿವಾಲ್ಗೆ ಸಾಮಾನ್ಯ ಜಾಮೀನು ಮಂಜೂರು ಮಾಡುವುದರ ವಿರುದ್ಧ ಅರ್ಜಿ ಸಲ್ಲಿಸಲು ಇಡಿ (ಜಾರಿ ನಿರ್ದೇಶನಾಲಯ) 48 ಗಂಟೆಗಳ ಕಾಲಾವಕಾಶ ಕೋರಿದೆ ಎಂದು ವರದಿಯಾಗಿದೆ.