LifestyleTechTechnologyUncategorized

ನಿಮ್ಮ ಲ್ಯಾಪ್‌ಟಾಪ್‌ ಸ್ಲೋ ಆಗ್ತಿದೆಯಾ..?; ಹಾಗಾದ್ರೆ ಇಲ್ಲಿದೆ ಪರಿಹಾರ!

ಲ್ಯಾಪ್‌ ಟಾಪ್‌, ಡೆಸ್ಕ್‌ ಟಾಪ್‌ ಕಂಪ್ಯೂಟರ್‌ಗಳು ಇದ್ದಕ್ಕಿದ್ದಂತೆ ಸ್ಲೋ ಆಗುತ್ತಿರುತ್ತವೆ.. ಅದೂ ಕೂಡಾ ಅವು ಹಳೆಯದಾಗುತ್ತಿರುವಂತೆ ಈ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತೆ.. ಸ್ಲೋ ಆಗಿ ರನ್‌ ಆಗುವುದರಿಂದ ಅದರಲ್ಲಿ ಏನು ಕೆಲಸ ಕೂಡಾ ಮಾಡೋದಕ್ಕೆ ಆಗೋದಿಲ್ಲ.. ಹೀಗಾಗಿ, ಅವುಗಳನ್ನು ರಿಪೇರಿಗೆ ಕೊಟ್ಟರೆ ಸಾವಿರಾರು ರೂಪಾಯಿ ಚಾರ್ಜ್‌ ಮಾಡುತ್ತಾರೆ.. ಆದ್ರೆ, ಈ ಸಲಹೆಗಳನ್ನು ನೀವು ಅನುಸರಿಸಿದರೆ ಮನೆಯಲ್ಲೇ ನಿಮ್ಮ ಲ್ಯಾಪ್‌ ಟಾಪ್‌ ಅಥವಾ ಡೆಸ್ಕ್‌ ಟಾಪ್‌ ಕಂಪ್ಯೂಟರ್‌ ವೇಗವನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು.. ಅದು ಹೇಗೆ ಅನ್ನೋದನ್ನು ನೋಡೋಣ ಬನ್ನಿ..

ಲ್ಯಾಪ್‌ ಟಾಪ್‌ ಅಥವಾ ಡೆಸ್ಕ್‌ ಟಾಪ್‌ ಕ್ರಮೇಣ ಸ್ಲೋ ಆಗೋದಕ್ಕೆ ಪ್ರಮುಖ ಕಾರಣ ಕ್ಯಾಚಿ ಮೆಮೊರಿ.. ಲ್ಯಾಪ್ ಟಾಪ್ ಹಾಗೂ ಡೆಸ್ಕ್‌ ಟಾಪ್‌ ಎಷ್ಟೇ ದುಬಾರಿಯದ್ದಾಗಿದ್ದರೂ ಕೂಡಾ ಕೂಡಾ ಕಾಲಪ್ರಮೇಣ ಅದು ರನ್‌ ಆಗುವುದು ಸ್ಲೋ ಆಗುತ್ತದೆ.. ಈ ಕ್ಯಾಚಿ ಮೆಮೊರಿಯಿಂದಲೇ ಈ ಸಮಸ್ಯೆ ಆಗೋದು.. ಅದನ್ನು ಪರಿಶೀಲಿಸಿ ಆಗಿಂದಾಗ್ಗೆ ಕ್ಯಾಚಿ ಮೆಮೊರಿ ಡಿಲೀಟ್‌ ಮಾಡುತ್ತಾ ಹೋದರೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ..

ಈ ಕ್ಯಾಚ್‌ ಮೆಮೊರಿಯನ್ನು ಮೊದಲು ತೆರವುಗೊಳಿಸಬೇಕು.. ಆ ಮೂಲಕ ನಿಮ್ಮ  ಕಂಪ್ಯೂಟರ್‌ ವೇಗ ಹೆಚ್ಚಿಸಿಕೊಳ್ಳಬಹುದು.. ಇದಕ್ಕಾಗಿ ಮೊದಲು ನೀವು START ಮೆನು ಓಪನ್‌ ಮಾಡಿ, ಅದರಲ್ಲಿ ಡಿಸ್ಕ್ ಕ್ಲೀನಪ್ ಓಪನ್‌ ಮಾಡಬೇಕು. ನಂತರ ಡ್ರೈವ್ ಆಯ್ಕೆಮಾಡಿ , ಓಕೆ ಬಟನ್‌ ಮೇಲೆ ಕ್ಲಿಕ್‌ ಮಾಡಿ.. ನಂತರ ಆ ಫೈಲ್‌ನಲ್ಲಿ ತಾತ್ಕಾಲಿಕ ಫೈಲ್‌ಗಳು ಮತ್ತು ಇತರ ಕ್ಯಾಚಿ ಫೈಲ್‌ಗಳನ್ನು ಆಯ್ಕೆಮಾಡಿ. ಅಂತಿಮವಾಗಿ ಓಕೆ ಕ್ಲಿಕ್ ಮಾಡಿ, ಡಿಲೀಟ್‌ ಬಟನ್ ಕ್ಲಿಕ್ ಮಾಡಿ ಎಲ್ಲಾ ಫೈಲ್‌ಗಳನ್ನೂ ಡಿಲೀಟ್‌ ಮಾಡಬಹುದು.

ಮೈಕ್ರೋಸಾಫ್ಟ್ ಎಡ್ಜ್‌ನಲ್ಲಾದರೆ ಕ್ಯಾಚಿ ಮೆಮೊರಿಯನ್ನು ಅಳಿಸುವ ಮೂಲಕ ವೇಗವನ್ನು ಹೆಚ್ಚಿಸಬಹುದು. ಇದಕ್ಕಾಗಿ ಮೊದಲ  ಎಡ್ಜ್ ನ್ನು ತೆರೆಯಬೇಕು. ನಂತರ ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ, ಸೆಟ್ಟಿಂಗ್‌ ಆಯ್ಕೆ ಮಾಡಬೇಕು. ಅನಂತರ ಪ್ರೈವಸಿ ಆಯ್ಕೆ ಮಾಡಬೇಕು. ನಂತರ ಕ್ಲಿಯರ್ ಬ್ರೌಸಿಂಗ್ ಡೇಟಾ ವಿಭಾಗದಲ್ಲಿ ನೀವು ಏನನ್ನು ಡಿಲೀಟ್‌ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ. ಸಮಯ ವ್ಯಾಪ್ತಿಯಲ್ಲಿ ಎಲ್ಲಾ ಸಮಯವನ್ನು ಆಯ್ಕೆ ಮಾಡಿ ಮತ್ತು ಕ್ಯಾಶ್ ಮಾಡಿದ ಚಿತ್ರಗಳು ಮತ್ತು ಫೈಲ್‌ಗಳ ಆಯ್ಕೆಯನ್ನು ಟಿಕ್ ಮಾಡಿ. ಅಂತಿಮವಾಗಿ ‘Clear Now’ ಬಟನ್ ಮೇಲೆ ಕ್ಲಿಕ್ ಮಾಡಿ.

ರನ್ ಕಮಾಂಡ್ ಮೂಲಕ ಕೂಡಾ ಕ್ಯಾಚಿ ಮೆಮೊರಿಯನ್ನು ತೆರವುಗೊಳಿಸಬಹುದು. ಇದಕ್ಕಾಗಿ ಮೊದಲು ರನ್ ಡೈಲಾಗ್ ಬಾಕ್ಸ್ ತೆರೆಯಲು ವಿಂಡೋಸ್ + ಆರ್ ಒತ್ತಿರಿ. ನಂತರ TEMP ಎಂದು ಟೈಪ್ ಮಾಡಿ ಎಂಟರ್ ಒತ್ತಿರಿ. ನಂತರ ಅದರಲ್ಲಿ ಕಾಣಿಸುವ ಎಲ್ಲಾ ಫೈಲ್‌ಗಳನ್ನು ಆಯ್ಕೆಮಾಡಿ ಮತ್ತು ಡಿಲೀಟ್‌ ಮಾಡಿ. ಅದರ ನಂತರ ಮತ್ತೆ ರನ್ ತೆರೆಯಿರಿ, %temp% ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿರಿ. ಕಾಣಿಸುವ ಎಲ್ಲಾ ಫೈಲ್‌ಗಳನ್ನು ಆಯ್ಕೆಮಾಡಿ, ಅವುಗಳನ್ನು ಕೂಡಾ ಡಿಲೀಟ್‌ ಮಾಡಿ. ಮತ್ತೆ ರನ್ ತೆರೆಯಿರಿ,Prefetch ಎಂದು ಟೈಪ್ ಮಾಡಿ, ತದನಂತರ ಎಂಟರ್ ಒತ್ತಿರಿ. ಎಲ್ಲಾ ಫೈಲ್‌ಗಳನ್ನು ಆಯ್ಕೆಮಾಡಿ ಮತ್ತು ಅವುಗಳನ್ನು ಕೂಡಾ ಡಿಲೀಸ್‌ ಮಾಡುವುದು.

ಗೂಗಲ್ ಕ್ರೋಮ್‌ನಲ್ಲಿ ಸಂಗ್ರಹವಾಗಿರುವ ಮೆಮೊರಿ ಕೂಡಾ ಲ್ಯಾಪ್‌ಟಾಪ್ ಹಾಗೂ ಡೆಸ್ಕ್‌ ಟಾಪ್‌ ನಿಧಾನವಾಗಲು ಕಾರಣವಾಗುತ್ತದೆ. ಅದನ್ನು ತೆರವುಗೊಳಿಸಲು, Chrome ಓಪನ್‌ ಮಾಡಿ ಮೇಲ್ಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. ಕ್ಲಿಯರ್ ಬ್ರೌಸಿಂಗ್ ಡೇಟಾ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ ಸಮಯ ವಿಭಾಗದಲ್ಲಿ ಸಾರ್ವಕಾಲಿಕ ಆಯ್ಕೆಮಾಡಿ. ಅದರ ನಂತರ, ಸಂಗ್ರಹ ಮೆಮೊರಿಯೊಂದಿಗೆ ಫೋಟೋಗಳು ಮತ್ತು ಫೈಲ್ಗಳನ್ನು ಆಯ್ಕೆ ಮಾಡಿ ಮತ್ತು ಕ್ಲಿಯರ್ ಡೇಟಾ ಬಟನ್ ಕ್ಲಿಕ್ ಮಾಡಿದರೆ ಸಾಕು. ಹೀಗೆ ಆಗಾಗ ಮಾಡುವುದರಿಂದ ನಿಮ್ಮ ಲ್ಯಾಪ್‌ ಟಾಪ್‌ ಹಾಗೂ ಡೆಸ್ಕ್‌ ಟಾಪ್‌ ವೇಗವಾಗಿ ರನ್‌ ಆಗುತ್ತದೆ.. ಯಾವುದೇ ಕಿರಿಕಿರಿ ಇರೋದಿಲ್ಲ..

Share Post