CrimeNational

ಲಟ್ಟಣಿಗೆಯಿಂದ ಹೊಡೆದು ತಂದೆಯನ್ನೇ ಕೊಂದ ಮಗಳು

ಆಂಧ್ರಪ್ರದೇಶ; ಅನ್ನಮಯ್ಯ ಜಿಲ್ಲೆಯಲ್ಲಿ ಅಮಾನುಷ ಕೊಲೆಯೊಂದು ನಡೆದಿದೆ. ಮದನಪಲ್ಲಿಯ ಜಿಆರ್‌ಟಿ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ದೊರಸ್ವಾಮಿ ಎಂಬುವವರನ್ನು ಅವರ ಮಗಳೇ ಕೊಲೆ ಮಾಡಿದ್ದಾಳೆ.

ದೊರೆಸ್ವಾಮಿ ಅವರು ತಮ್ಮ ಮಗಳ ಮದುವೆ ನಿಶ್ಚಯ ಮಾಡಿದ್ದರು.. ಆದರೆ ಈ ಸಂಬಂಧ ತನಗೆ ಇಷ್ಟವಿಲ್ಲ ಎಂದು ಮಗಳು ಹೇಳಿದರೂ ತಂದೆ ಒಪ್ಪಿರಲಿಲ್ಲ. ಇದರಿಂದ ರೊಚಿಗೆದ್ದ ಮಗಳು ಚಪಾತಿ ಲಟ್ಟಣಿಗೆ ಹಾಗೂ ಕಬ್ಬಿಣದ ರಾಡ್ ನಿಂದ ಹೊಡೆದು ತಂದೆಯನ್ನು ಬರ್ಬರವಾಗಿ ಕೊಂದಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share Post