CrimeDistricts

ಬೇರೆ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ಶವ ಬಿಸಾಡೋದು ಯಾಕೆ..?; ರಾಜ್ಯದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿತ್ತು!

ಮಂಡ್ಯ; ರೇಣುಕಾಸ್ವಾಮಿಯನ್ನು ಆರ್‌ಆರ್‌ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಮಾಡಲಾಗಿತ್ತು.. ಆದ್ರೆ ದೇಹವನ್ನು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ತಂದು ಬಿಸಾಕಲಾಗಿತ್ತು.. ಹೀಗಾಗಿ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರ ಜೊತೆ ಡೀಲ್‌ ಮಾಡಿಕೊಂಡು ಹೀಗೆ ಮಾಡಿರಬಹುದಾ ಎಂಬ ಅನುಮಾನಗಳು ಮೂಡಿದ್ದವು.. ಇದಕ್ಕೆ ಕಾರಣ, ಕೊಲೆ ನಡೆದ ನಂತರ ಹೀಗಾಗಿದೆ ಏನು ಮಾಡೋದು ಎಂದು ನಟ ದರ್ಶನ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ ಒಬ್ಬರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.. ಅಂದಹಾಗೆ, ಇದೇ ರೀತಿಯಾಗಿ ಎರಡು ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯಲ್ಲೂ ಇಂತಹದ್ದೊಂದು ಘಟನೆ ನಡೆದಿತ್ತು.. ವ್ಯಕ್ತಿಯೊಬ್ಬನ ಸಾವಿಗೆ ಕಾರಣನಾಗಿದ್ದ ರಾಜಕಾರಣಿಯೊಬ್ಬರ ಪುತ್ರ, ಕೊಲೆಯಾದ ವ್ಯಕ್ತಿಯ ಶವವನ್ನು ಬೇರೊಂದು ಪೊಲೀಸ್‌ ಠಾಣಾ ವ್ಯಾಪ್ತಿಗೆ ತಂದು ಹಾಕಲಾಗಿತ್ತು.. ಅದರ ಮಾಹಿತಿ ತಿಳಿಯೋಣ ಬನ್ನಿ..

2022ಎ ಫೆಬ್ರವರಿಯಲ್ಲಿ ಮಂಡ್ಯ ಜಿಲ್ಲೆ ಪಂಡಿತಹಳ್ಳಿ ಸಮೀಪದ ರಸ್ತೆ ಪಕ್ಕ ಒಂದು ಮೃತದೇಹ ಪತ್ತೆಯಾಗಿತ್ತು.. ಅದು ಕೊಳ್ಳೇಗಾಲ ಮೂಲದ 40 ವರ್ಷದ ಸಲೀಂ ಎಂಬಾತ ಮೃತದೇಹವಾಗಿತ್ತು.. ಪೊಲೀಸರು ತನಿಖೆ ಕೈಗೊಂಡಾಗ, ಅದರಲ್ಲಿ ಮಾಜಿ ಶಾಸಕರೊಬ್ಬರ ಪುತ್ರನ ಕೈವಾಡ ಇದೆ ಅನ್ನೋದು ಬಯಲಾಗಿತ್ತು.. ಜೊತೆಗೆ ಪ್ರಕರಣ ಮುಚ್ಚಿ ಹಾಕಲು ಪೊಲೀಸ್‌ ಅಧಿಕಾರಿಯೊಬ್ಬರ ಜೊತೆ ಡೀಲ್‌ ಆಗಿತ್ತು ಅನ್ನೋ ವಿಚಾರ ಕೂಡಾ ಬಯಲಾಗಿತ್ತು..

ಕೊಲೆಯಾದ ಆರೋಪಿ ಸಲೀಂ ರೈಸ್‌ಪುಲ್ಲಿಂಗ್‌ ಹೆಸರಲ್ಲಿ ಕೆಆರ್ ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪುತ್ರ ಡಾ.ಶ್ರೀಕಾಂತ್ ಜೊತೆ ಡೀಲ್‌ ಮಾಡಿದ್ದ.. ಆ ತಾಮ್ರದ ಚೊಂಬು ಕೊಡಲು 50 ಲಕ್ಷ ರೂಪಾಯಿಗೆ ಡೀಲ್‌ ಮಾಡಲಾಗಿತ್ತು.. ಅಡ್ವಾನ್ಸ್‌ ಆಗಿ ಡಾ.ಶ್ರೀಕಾಂತ್‌ 5 ಲಕ್ಷ ರೂಪಾಯಿ ಮುಂಗಡ ಹಣ ನೀಡಿದ್ದ.. ಆದ್ರೆ ಈ ಡೀಲ್‌ನಲ್ಲಿ ಅದೇನು ವ್ಯತ್ಯಾಸ ಆಯ್ತೋ ಏನೋ, ಮಾಜಿ ಶಾಸಕರ ಪುತ್ರ,  ಸಲೀಂನನ್ನು ಮೈಸೂರಿನ ಇಲವಾಲ ಸಮೀಪಕ್ಕೆ ಕರೆಸಿಕೊಂಡು ಇಬ್ಬರೂ ಜಗಳ ಮಾಡಿದ್ದಾರೆ.. ಈ ವೇಳೆ ಜೋರಾಗಿ ಹೊಡೆದಾಗ ಸಲೀಂ ಸಾವನ್ನಪ್ಪಿದ್ದಾನೆ.. ಅನಂತರ ಏನು ಮಾಡೋದು ಅನ್ನೋದು ಗೊತ್ತಾಗದೇ, ಕೊನೆಗೆ ತನಗೆ ಪರಿಚಯವಿದ್ದ ಪೊಲೀಸ್‌ ಅಧಿಕಾರಿಯನ್ನು ಸಂಪರ್ಕಿಸಿ ನಡೆದ ಘಟನೆಯನ್ನು ವಿವರಿಸಿ, ಈ ಪ್ರಕರಣದಲ್ಲಿ ತನ್ನನ್ನು ಬಚಾವ್‌ ಮಾಡುವಂತೆ ಮಾಜಿ ಶಾಸಕರ ಪುತ್ರ ಶ್ರೀಕಾಂತ್‌ ಮನವಿ ಮಾಡಿಕೊಂಡಿದ್ದನಂತೆ.. ಬಚಾವ್‌ ಮಾಡಿದರೆ 10 ಲಕ್ಷ ರೂಪಾಯಿ ಹಣ ಹಾಗೂ ಒಂದು ಐಶಾರಾಮಿ ಕಾರು ಕೊಡಿಸುವ ಡೀಲ್‌ ನಡೆದಿತ್ತು ಎನ್ನಲಾಗಿದೆ..

ಡೀಲ್‌ ಮುಗಿದ ಮೇಲೆ ಮೃತದೇಹವನ್ನು ತನ್ನ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ತಂದು ಹಾಕಿ, ನಂತರ ಯಾರಾದರೂ  ನಿಮ್ಮ ಬೆಂಬಲಿಗರನ್ನು ಒಪ್ಪಿಸಿ ಠಾಣೆಗೆ ಶರಣಾಗುವಂತೆ ಮಾಡಿ. ಆಗ ನಿಮ್ಮನ್ನು ನಾನು ಬಚಾವ್‌ ಮಾಡುತ್ತೇನೆ ಎಂದು ಆ ಪೊಲೀಸ್‌ ಅಧಿಕಾರಿ, ಮಾಜಿ ಶಾಸಕರ ಪುತ್ರನಿಗೆ ತಿಳಿಸಿದ್ದರಂತೆ.. ಅದರಂತೆ ಪೃತದೇಹವನ್ನು ಟಾರ್ಪಲ್‌ನಲ್ಲಿ ಸುತ್ತಿತಂದು ಪಂಡಿತಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬಿಸಾಡಲಾಗಿತ್ತು.. ನಂತರ ಕೆಆರ್‌ ಪೇಟೆ ಮೂಲದ ಮೂವರು ವ್ಯಕ್ತಿಗಳು ಪೊಲೀಸ್‌ ಠಾಣೆಗೆ ತೆರಳಿ ಶರಣಾಗಿದ್ದರು.. ಈ ಮೂವರಿಗೂ ಲಕ್ಷಾಂತರ ರೂಪಾಯಿ ಹಣ ನೀಡುವುದಲ್ಲದೆ ಬಹುಬೇಗ ಬೇಲ್‌ ಕೊಡಿಸುವ ಮಾತುಕತೆಯೂ ನಡೆದಿತ್ತು..

ಆದ್ರೆ, ಮೃತದೇಹ ಬಿಸಾಡುವ ಸಮಯದಲ್ಲಿ ಆತುರದಲ್ಲಿ ಆರೋಪಿಗಳು ತಪ್ಪು ಮಾಡಿದ್ದರು.. ಡೀಲ್‌ ಮಾಡಿದ ಅಧಿಕಾರಿ ಕೆಲಸ ಮಾಡುವ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮೃತದೇಹವನ್ನು ಬಿಸಾಡದೇ ಬಾರ್ಡರ್‌ನಲ್ಲಿ ಬಿಸಾಕಲಾಗಿತ್ತು.. ಆ ಸ್ಥಳ ಬೇರೊಂದು ಪೊಲೀಸ್‌ ಠಾಣಾ ವ್ಯಾಪ್ತಿಗೆ ಸೇರುತ್ತಿತ್ತು.. ಅಂದರೆ ಮಳವಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಗೆ ಬರುತ್ತಿತ್ತು.. ಹೀಗಾಗಿ ಪ್ರಕರಣದ ವಿಚಾರಣೆಯನ್ನು ಮಳವಳ್ಳಿ ಪೊಲೀಸರು ಕೈಗೆತ್ತಿಕೊಂಡಿದ್ದಾರೆ.. ಇದರಿಂದಾಗಿ ಪ್ಲ್ಯಾನ್‌ ಎಲ್ಲಾ ಉಲ್ಟಾ ಆಗಿದ್ದು, ಮಾಜಿ ಶಾಸಕರ ಪುತ್ರ ಕೂಡಾ ವಿಚಾರಣೆ ವೇಳೆ ಸಿಕ್ಕಿಬಿದ್ದಿದ್ದ..

ಈಗ ಪ್ರಕರಣ ಯಾವ ಹಂತಕ್ಕೆ ಬಂದಿದೆಯೋ ಗೊತ್ತಿಲ್ಲ.. ಆದ್ರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೂಡಾ ಇದೇ ರೀತಿಯ ಪ್ಲ್ಯಾನ್‌ ಆಗಿತ್ತಾ ಎಂಬ ಅನುಮಾನ ಮೂಡಿದೆ..

 

Share Post