CrimePolitics

ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರೆಂಟ್

ಬೆಂಗಳೂರು; ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅರೆಸ್ಟ್ ಆಗೋದು ಬಹುತೇಕ ಪಕ್ಕಾ ಆಗಿದೆ.. ಯಾಕಂದ್ರೆ , ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.. ಪೊಲೀಸ್ ವಿಚಾರಣೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹಾಜರಾಗದ ಹಿನ್ನೆಲೆಯಲ್ಲಿ ವಾರಂಟ್ ಹೊರಡಿಸಲು ಪೊಲೀಸರು ಜೂನ್ 12 ರಂದು ತ್ವರಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯ ವಾರಂಟ್​ ಜಾರಿ ಮಾಡಿದೆ.

ಲೋಕಸಭಾ ಚುನಾವಣೆಗೂ ಮುಂಚೆ ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣವೊಂದು ದಾಖಲಾಗಿತ್ತು.. ಮಹಿಳೆಯೊಬ್ಬರು ತನ್ನ ಮಗಳ ಜೊತೆ ಸಹಾಯ ಕೇಳಿಕೊಂಡು ಯಡಿಯೂರಪ್ಪ ನಿವಾಸಕ್ಕೆ ಹೋಗಿದ್ದೆ.. ಈ ವೇಳೆ ನನ್ನ ಮಗಳಿಗೆ ಯಡಿಯೂರಪ್ಪ ಅವರು ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಆ ಮಹಿಳೆ ಆರೋಪ ಮಾಡಿ ಕೇಸ್‌ ದಾಖಲು ಮಾಡಿದ್ದಳು.. ಈ ಕೇಸ್‌ ನ ತನಿಖೆ ಈಗ ಚುರುಕು ಪಡೆದುಕೊಂಡಿದೆ.. ಪೊಲೀಸರು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಬಂಧಿಸಲು ಸಿದ್ಧತೆ ನಡೆಸುತ್ತಿದ್ದಾರೆ.. ಆದ್ರೆ, ಯಡಿಯೂರಪ್ಪ ಅವರು ಬೆಂಗಳೂರಿನಲ್ಲೂ ಇಲ್ಲ, ದೆಹಲಿಯಲ್ಲೂ ಇಲ್ಲ.. ವಿಚಾರಣೆಗೆ ಹಾಜರಾಗಬೇಕಿದ್ದ ಯಡಿಯೂರಪ್ಪ, ಪೊಲೀಸ್‌ ನೋಟಿಸ್‌ಗೆ ಉತ್ತರವೊಂದು ಬರೆದು, ನಾನು ಜೂನ್‌ 17ಕ್ಕೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.. ಅನಂತರ ಅವರ ಪತ್ತೆ ಇಲ್ಲ..

 

Share Post