ದರ್ಶನ್ ಸುದ್ದಿ ಕೇಳಿ ಕೇಳಿ ನಟಿ ಸಂಜನಾ ಕಿವಿಯಲ್ಲಿ ರಕ್ತ ಬರ್ತಿದೆಯಂತೆ!
ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದ್ದಾರೆ.. ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.. ಈ ಸುದ್ದಿಯನ್ನು ಕೇಳೋಕೆ ಆಗ್ತಿಲ್ಲ.. ನನಗೆ ಕಿವಿಯಲ್ಲಿ ರಕ್ತಬರುತ್ತಿದೆ ಎಂದು ನಟಿ ಸಂಜನಾ ಗರ್ಲಾನಿ ಹೇಳಿಕೊಂಡಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ದರ್ಶನ್ ಮೇಲಿನ ಈ ಆರೋಪವನ್ನು ನನಗೆ ನಂಬಲಾಗುತ್ತಿಲ್ಲ ಎಂದು ಹೇಳಿದ್ದಾರೆ..
ನಟ ದರ್ಶನ್ ಅವರ ವಿರುದ್ಧ ಕೊಲೆ ಆರೋಪ ಬಂದಿದೆ.. ಆದ್ರೆ ಇದನ್ನು ನಂಬೋದಕ್ಕೆ ನನ್ನ ಕೈಯಲ್ಲಿ ಆಗುತ್ತಿಲ್ಲ.. ಯಾಕಂದ್ರೆ ದರ್ಶನ್ ಅವರಿಗೆ ನಾನು ಅಷ್ಟೊಂದು ಗೌರವ ಕೊಡುತ್ತೇನೆ.. ಕೋರ್ಟ್ನಿಂದ ತೀರ್ಪು ಬರುವುದಕ್ಕೆ ಮೊದಲೇ ನಾವು ಅವರೇ ಕೊಲೆಗಾರರು ಅಂತ ಹೇಳೊದಕ್ಕೆ ಆಗೋದಿಲ್ಲ.. ಆದಷ್ಟು ಬೇಗ ದರ್ಶನ್ ಅವರು ಹೊರಗೆ ಬರಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂಜನಾ ಹೇಳಿಕೊಂಡಿದ್ದಾರೆ..
ದರ್ಶನ್ ಅವರು ಇಲ್ಲದಿದ್ದರೆ ಅವರ ಜೊತೆಗೆಯಲ್ಲಿ ಕೆಲಸ ಮಾಡುವ ಅವರನ್ನು ನಂಬಿಕೊಂಡಿರುವ ಎಷ್ಟೋ ಮಂದಿ ಸಂಕಷ್ಟಕ್ಕೆ ಸಿಲುಕುತ್ತಾರೆ.. ಜೊತೆಗೆ ಇದರಿಂದಾಗಿ ಸಿನಿಮಾ ಇಂಡಸ್ಟ್ರೀಗೆ ದೊಡ್ಡ ಹೊಡೆತ ಕೂಡಾ ಬೀಳಲಿದೆ ಎಂದು ಸಂಜನಾ ಹೇಳಿಕೊಂಡಿದ್ದಾರೆ..