International

ಒಮಿಕ್ರಾನ್‌ ಸೋಂಕಿತ ಆಫ್ರಿಕಾಗೆ ಪರಾರಿ

ಬೆಂಗಳೂರು : ದ.ಆಫ್ರಿಕಾದ ಪ್ರಜೆಯೊಬ್ಬರು ಕೋವಿಡ್‌ ನೆಗೆಟಿವ್ ನಕಲಿ ಸರ್ಟಿಫಿಕೇಟ್ ಪಡೆದು ಬೆಂಗಳೂರಿನಿಂದ ಪರಾರಿಯಾಗಿದ್ದಾರೆ. ನಕಲಿ ಪ್ರಮಾಣಪತ್ರ ಪಡೆಯಲು ಸಹಾಯ ಮಾಡಿದ ನಾಲ್ವರನ್ನು ಬೆಂಗಳೂರಿನ ಹೈಗ್ರೌಂಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಾಫ್ಟವೇರ್‌ ಕಂಪನಿ ಮಾಲೀಕನಾಗಿರುವ ಸೋಂಕಿತ ಬೆಂಗಳೂರಿನ ಬ್ರ್ಯಾಂಚ್‌ ಆಫೀಸ್‌ಗೆ ಬಂದಿದ್ದ. ವಾಪಸ್‌ ಹೊರಡಲು ಕೋವಿಡ್‌ ಟೆಸ್ಟ್‌ ಮಾಡಿಸಿದಾಗ ಪಾಸಿಟೀವ್‌ ಬಂದಿದೆ ಆದರೆ ಅವನ ಆಫೀಸಿನ ಕೆಲಸಗಾರರ ಸಹಾಯ ಪಡೆದು ನೆಗೆಟೀವ್‌ ಪ್ರಮಾಣ ಪತ್ರ ಪಡೆದಿದ್ದಾನೆ.

ನಕಲಿ ಕೊವಿಡ್ ನೆಗೆಟಿವ್ ರಿಪೋರ್ಟ್​ ತೋರಿಸಿ ದುಬೈ ಮೂಲಕ ಅವರು ದಕ್ಷಿಣ ಆಫ್ರಿಕಾಗೆ ತೆರಳಿದ್ದರು. ನಂತರ ಡಿಸೆಂಬರ್ 2ರಂದು ಜಿನೋಮ್ ಸೀಕ್ವೆನ್ಸ್​ ಪರೀಕ್ಷೆಯ ವರದಿ ಬಂದಾಗ ಆ ವ್ಯಕ್ತಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ಖಚಿತವಾಗಿತ್ತು.

 

Share Post