ಭಾರತದಲ್ಲಿ ನೆಟ್ಫ್ಲಿಕ್ಸ್ ಈಗ ಅಗ್ಗ
ನವದೆಹಲಿ : ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿಯೂ ಓಟಿಟಿ ಪ್ಲಾಟ್ಫಾರ್ಮ್ಗೆ ಬೇಡಿಕೆ ಹೆಚ್ಚಾಗಿದೆ. ಹಾಗೆಯೇ ಕಾಂಪಿಟೇಷನ್ ಕೂಡ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ನೆಟ್ಫ್ಲಿಕ್ಸ್ ಸಂಸ್ಥೆಯು ಭಾರತೀಯರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ಭಾರತದಲ್ಲಿ ತನ್ನ ಚಂದಾದಾರರನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಿಂದ ತಿಂಗಳ ದರಗಳನ್ನು ಕಡಿತಗೊಳಿಸಿದೆ.
ಒಂದೆಡೆ ಅಮೆಜಾನ್ ಪ್ರೈಮ್ ತನ್ನ ದರಗಳನ್ನು ಹೆಚ್ಚಿಸಿಕೊಂಡಿದೆ. ಇತ್ತ ನೆಟ್ ಫ್ಲಿಕ್ಸ್ ದರಗಳನ್ನು ಇಳಿಸಿ ಹೆಚ್ಚು ಬಳಕೆದಾರರನ್ನು ಗಳಿಸುವ ಆಶಯ ಹೊಂದಿದೆ.
ಮೊಬೈಲ್ ಪ್ಲ್ಯಾನ್ಗಳ ದರವನ್ನು 199ರಿಂದ 149ಕ್ಕೆ ಇಳಿಸಿದೆ.
ಇನ್ನು 499ರೂ ಬೆಲೆಯಿದ್ದ ಪ್ಲ್ಯಾನ್ ಅನ್ನು 199ರೂ ಗೆ ಇಳಿಸಿದೆ.