ಚಂದನ್ ಶೆಟ್ಟಿ, ನಿವೇದಿತಾ ಗೌಡ ಸಂಭ್ರಮದ ಡಿವೋರ್ಸ್; ಕೈಕೈ ಹಿಡಿದೇ ಕೋರ್ಟ್ಗೆ ಬಂದರು!
ಬೆಂಗಳೂರು; ಬಿಗ್ಬಾಸ್ನಲ್ಲಿ ಪರಿಚಯವಾಗಿ, ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿ ಧಾಂ ಧೂಂ ಅಂತ ಮದುವೆಯಾಗಿದ್ದ ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ಡಿವೋರ್ಸ್ ಪಡೆದುಕೊಂಡಿದ್ದಾರೆ.. ಅಂತಾದ್ದೇನೂ ಬಲವಾದ ಕಾರಣ ಇಲ್ಲ, ಇಬ್ಬರೂ ಒಪ್ಪಿಯೇ ಖುಷಿ ಖುಷಿಯಾಗಿ ಡಿವೋರ್ಸ್ ಪಡೆದಿದ್ದಾರೆ.. ಇಬ್ಬರು ತೃಪ್ತಿಯಿಂದ ಒಪ್ಪಿಕೊಂಡಿದ್ದರಿಂದ ಕೋರ್ಟ್ ಕೂಡಾ ಡಿವೋರ್ಸ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ..
ಜೂನ್ 6ಂದು ಶಾಂತಿನಗರದಲ್ಲಿರುವ ಫ್ಯಾಮಿಲಿ ಕೋರ್ಟ್ನಲ್ಲಿ ಚಂದನ್ ಶೆಟ್ಟಿ ದಂಪತಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿತ್ತು.. ಇಬ್ಬರ ವಿಚ್ಛೇದನಕ್ಕೆ ಕೋರ್ಟ್ ಅನುಮತಿ ಕೊಟ್ಟಿದೆ.. ಆದೇಶದ ಪ್ರತಿ ಇನ್ನೂ ಬಂಧಿಲ್ಲ ಎಂದು ತಿಳಿದುಬಂದಿದೆ..ಅಂದಹಾಗೆ ಫ್ಯಾಮಿಲಿ ಕೋರ್ಟ್ಗೆ ಇಬ್ಬರೂ ಕೂಡಾ ಒಟ್ಟಿಗೆ ಕೈ, ಕೈ ಹಿಡಿದು ಬಂದಿದ್ದರು.. ಕೋರ್ಟ್ ಹಾಲ್ನಲ್ಲಿ ಕೂಡಾ ಖುಷಿ ಖುಷಿಯಿಂದ ಕುಳಿತಿದ್ದರು.. ವಿಚಾರಣೆ ಸಮಯದಲ್ಲಿ ಕೂಡಾ ಇಬ್ಬರ ನಡುವೆ ಯಾವುದೇ ದುಃಖವಾಗಲಿ, ಆಕ್ರೋಶವಾಗಲೀ ಇರಲಿಲ್ಲ.. ಬದಲಾಗಿ ಇಬ್ಬರೂ ನಗನಗುತ್ತಲೇ ಇದ್ದರು ಎಂದು ತಿಳಿದುಬಂದಿದೆ..
ಇಬ್ಬರೂ ಮಕ್ಕಳಂತೆ ಪ್ರಪೋಸ್ ಮಾಡಿಕೊಂಡರು, ಮಕ್ಕಳಂತೆ ಮದುವೆಯಾದರು, ಇದೀಗ ಮಕ್ಕಳ ರೀತಿಯಲ್ಲೇ ಖುಷಿ ಖಷಿಯಾಗಿ ಡಿವೋರ್ಸ್ ಪಡೆದಿದ್ದಾರೆ.. ಇದನ್ನು ನೋಡ್ತಿದ್ರೆ, ಇವರ ನಾಲ್ಕು ವರ್ಷದ ದಾಂಪತ್ಯ ಮಕ್ಕಳ ಮದುವೆ ರೀತಿ ಇದ್ದಂತೆ ಭಾಸವಾಗ್ತಿದೆ..