ರಾಜ್ಯದಲ್ಲಿ 6 ಹಾಲಿ ಸಂಸದರು ಹೀನಾಯವಾಗಿ ಸೋಲು; ಸೋತ ಸಂಸದರು ಯಾರು..?
ಬೆಂಗಳೂರು; ರಾಜ್ಯದ ಆರು ಮಂದಿ ಹಾಲಿ ಸಂಸದರು ಹೀನಾಯವಾಗಿ ಸೋತಿದ್ದಾರೆ.. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸಂಸದರು ಕೂಡಾ ಇದರಲ್ಲಿ ಸೇರಿದ್ದಾರೆ.. ಕಳೆದ ಬಾರಿ ಜೆಡಿಎಸ್ ಹಾಗೂ ಕಾಂಗ್ರೆಸ್ ಒಂದೊಂದು ಕ್ಷೇತ್ರದಲ್ಲಿ ಗೆದ್ದಿದ್ದರು.. ಆದ್ರೆ ಈ ಇಬ್ಬರೂ ಸೋಲನುಭವಿಸಿದ್ದಾರೆ..
ಡಿ.ಕೆ.ಸುರೇಶ್, ಬೆಂಗಳೂರು ಗ್ರಾಮಾಂತರ
ಬೆಂಗಳೂರು ಗ್ರಾಮಾಂತರದಲ್ಲಿ ಮೂರು ಬಾರಿ ಗೆದ್ದಿದ್ದ ಕಾಂಗ್ರೆಸ್ ನ ಡಿ.ಕೆ.ಸುರೇಶ್ ಅವರು ಈ ಬಾರಿ ಭಾರಿ ಅಂತರದಿಂದ ಸೋಲನುಭವಿಸಿದ್ದಾರೆ.. ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು 2,56,185 ಮತಗಳ ಅಂತರದಿಂದ ಡಿ.ಕೆ.ಸುರೇಶ್ ವಿರುದ್ಧ ಗೆಲುವು ಸಾಧಿಸಿದ್ದಾರೆ..
ಭಗವಂತ ಖೂಬಾ, ಬೀದರ್
ಎರಡು ಬಾರಿ ಗೆದ್ದು ಕೇಂದ್ರ ಸಚಿವರಾಗಿದ್ದ ಭಗವಂತ ಖೂಬಾ ಅವರು ಈ ಬಾರಿ ಸೋಲನುಭವಿಸಿದ್ದಾರೆ.. ಸಚಿವ ಈಶ್ವರ ಖಂಡ್ರೆ ಪುತ್ರ 26 ವರ್ಷದ ಸಾಗರ ಖಂಡ್ರೆ ವಿರುದ್ಧ ಸೋಲನುಭವಿಸಿದ್ದಾರೆ.. ಈ ಮೂಲಕ ಭಗವಂತ ಖೂಭಾ ಹ್ಯಾಟ್ರಿಕ್ ಕನಸು ನುಚ್ಚುನೂರಾಗಿದೆ..
ಪ್ರಜ್ವಲ್ ರೇವಣ್ಣ, ಹಾಸನ
ಕಳೆದ ಚುನಾವಣೆಯಲ್ಲಿ ದೇವೇಗೌಡರು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು.. ಕಳೆದ ಬಾರಿ ಭರ್ಜರಿ ಮತಗಳಿಂದ ಗೆದ್ದಿದ್ದ ಪ್ರಜ್ವಲ್ ರೇವಣ್ಣ ಈ ಬಾರಿ ಸೋತಿದ್ದಾರೆ.. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ..
ಡಾ.ಉಮೇಶ್ ಜಾದವ್, ಕಲಬುರಗಿ
ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಡಾ.ಉಮೇಶ್ ಜಾದವ್ ಸೋಲನುಭವಿಸಿದ್ದಾರೆ.. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಈ ಬಾರಿ ಗೆಲುವು ಸಾಧಿಸಿದ್ದಾರೆ.. ಕಳೆದ ಬಾರಿ ಅಭೂತಪೂರ್ವ ಗೆಲುವು ಸಾಧಿಸಿದ್ದ ಉಮೇಶ್ ಜಾದವ್ ಈ ಬಾರಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ..
ಅಣ್ಣಾ ಸಾಹೇಬ್ ಜೊಲ್ಲೆ, ಚಿಕ್ಕೋಡಿ
ಇನ್ನು ಚಿಕ್ಕೋಡಿಯಲ್ಲಿ ಬಿಜೆಪಿ ಅಣ್ಣಾ ಸಾಹೇಬ್ ಜೊಲ್ಲೆ ಅವರು ಸೋಲನುಭವಿಸಿದ್ದಾರೆ.. ಇಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ..
ರಾಜಾ ಅಮರೇಶ್ವರ ನಾಯಕ, ರಾಯಚೂರು
ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಈ ಬಾರಿಯೂ ಬಿಜೆಪಿಯಿಂದ ಸ್ಪರ್ಧಿಸಿದ್ದರು.. ಆದ್ರೆ ಅವರಿಗೆ ವಿಜಯದ ಮಾಲೆ ದಕ್ಕಿಲ್ಲ.. ಕಾಂಗ್ರೆಸ್ ನಿವೃತ್ತ ಐಎಎಸ್ ಅಧಿಕಾರಿ ಜಿ ಕುಮಾರ್ ನಾಯ್ಕ್ ಅವರನ್ನು ಚುನಾವಣಾ ಕಣಕ್ಕೆ ಇಳಿಸಿತ್ತು. ಅದೃಷ್ಟವಶಾತ್ ರಾಜಾ ಅಮರೇಶ್ವರ ನಾಯಕ್ ಅವರನ್ನು ಸೋಲಿಸಿ ಜಿ ಕುಮಾರ್ ನಾಯ್ಕ್ ಗೆದ್ದು ಬೀಗಿದ್ದಾರೆ.