80ರಲ್ಲಿ INDIA ಒಕ್ಕೂಟಕ್ಕೆ 43ರಲ್ಲಿ ಮುನ್ನಡೆ; ದೇಶದ ರಾಜಕೀಯ ಚಿತ್ರಣ ಬದಲಿಸುತ್ತಾ ಉತ್ತರ ಪ್ರದೇಶದ ಫಲಿತಾಂಶ..?
ನವದೆಹಲಿ; ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ರಾಜ್ಯ ದೇಶದಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆ ಎಂಬುದನ್ನು ನಿರ್ಧಾರ ಮಾಡುತ್ತದೆ.. ಇಲ್ಲಿನ 80 ಲೋಕಸಭಾ ಕ್ಷೇತ್ರಗಳಿದ್ದು, ಇಲ್ಲಿ ಯಾರು ಹೆಚ್ಚು ಸ್ಥಾನಗಳನ್ನು ಗಳಿಸುತ್ತಾರೋ ಅವರು ಅಧಿಕಾರ ಹಿಡಿಯುತ್ತಾರೆ ಎಂಬ ಮಾತಿದೆ.. ಕಳೆದ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 74 ಕ್ಷೇತ್ರಗಳಲ್ಲಿ ಗೆದ್ದಿತ್ತು.. ಈ ಬಾರಿಯೂ ಕೂಡಾ ಅಷ್ಟೇ ಪ್ರಮಾಣದ ಸೀಟುಗಳು ಬರಲಿವೆ ಅಂತ ಸಮೀಕ್ಷೆಗಳು ಹೇಳಿದ್ದವು.. ಆದ್ರೆ ಅದು ಉಲ್ಟಾ ಆಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ..
ಉತ್ತರ ಪ್ರದೇಶದಲ್ಲಿ 80 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ 43 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.. ಇದರಲ್ಲಿ ಸಮಾಜವಾದಿ ಪಾರ್ಟಿ 37 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಮುನ್ನೆಡೆ ಸಾಧಿಸಿದೆ.. ಇಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 37 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.. ಬಿಜೆಪಿಯ ಸಚಿವ ಸ್ಮೃತಿ ಇರಾನಿ ಸೇರಿ ಹಲವು ಪ್ರಮುಖರು ಹಿನ್ನಡೆ ಸಾಧಿಸಿದ್ದಾರೆ..
ಇನ್ನು ಗುಜರಾತ್, ಹರಿಯಾಣ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆಯತ್ತ ಮುನ್ನಡಿ ಇಡುತ್ತಿದೆ.. ಕಾಂಗ್ರೆಸ್ ಒಂದು ಪಕ್ಷವೇ 94 ಸ್ಥಾನಗಳಲ್ಲಿ ಮುಂದಿದ್ದು, 100 ಸೀಟುಗಳು ತಲುಪುವ ಸಾಧ್ಯತೆ ಇದೆ..