ಮುಂಬೈ ಬಾಂಬ್ ಸ್ಫೋಟದ ಅಪರಾಧಿಯ ಕೊಲೆ; ಜೈಲಿನಲ್ಲೇ ತಲೆ ಕತ್ತರಿಸಿ ಬರ್ಬರ ಹತ್ಯೆ!
ಕೊಲ್ಲಾಪುರ; ಮಹಾರಾಷ್ಟ್ರದ ಕೊಲ್ಲಾಪುರದ ಜೈಲಿನಲ್ಲಿ ಮುಂಬೈ ಸ್ಫೋಟ ಪ್ರಕರಣದ ಅಪರಾಧಿಯೊಬ್ಬನ ತಲೆ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.. 1993ರ ಮುಂಬೈ ಸರಣಿ ಸ್ಫೋಟದ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಮೊಹಮ್ಮದ್ ಅಲಿ ಖಾನ್ ಎಂಬಾತನನ್ನು ಜೈಲಿನಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ.. ನ್ಯಾಯಾಂಗ ಬಂಧನದಲ್ಲಿದ್ದ ಐವರು ವಿಚಾರಣಾಧೀನ ಖೈದಿಗಳು ಈ ಕೃತ್ಯ ಎಸಗಿದ್ದಾರೆ..
1993ರಲ್ಲಿ ಮುಂಬೈನಲ್ಲಿ ಸರಣಿ ಸ್ಫೋಟ ಸಂಭವಿಸಿತ್ತು.. ಈ ಪ್ರಕರಣ ಅಪರಾಧಿಗಳಲ್ಲಿ ನಾಲ್ವರನ್ನು ಕೊಲ್ಲಾಪುರದ ಜೈಲಿನಲ್ಲಿ ಇಡಲಾಗಿದೆ.. ಇದರಲ್ಲೊಬ್ಬನಾದ ಮೊಹಮ್ಮದ್ ಅಲಿ ಖಾನ್ ನ ತಲೆ ಕತ್ತರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ.. ಪ್ರತೀಕ್ ಪಾಟೀಲ್, ದೀಪಕ್ ಖೋಟ್, ಸಂದೀಪ್ ಚವ್ಹಾಣ್, ರಿತುರಾಜ್ ಇನಾಮದಾರ್ ಮತ್ತು ಸೌರಭ್ ಸಿದ್ಧ ವಿಚಾರಣಾಧೀನ ಖೈದಿಗಳು ಈ ಕೃತ್ಯ ಎಸಗಿದ್ದಾರೆ.. ಈ ಐವರು ಆರೋಪಿಗಳನ್ನು ಇದೇ ಮೊಹಮ್ಮದ್ ಅಲಿ ಖಾನ್ ಇರುವ ಬ್ಯಾರಕ್‌ನಲ್ಲಿ ಇರಿಸಲಾಗಿತ್ತು.. ಅಲ್ಲೇನಾಯ್ತೋ ಗೊತ್ತಿಲ್ಲ.. ಐವರೂ ಸೇರಿ ಮೊಹಮ್ಮದ್ ಅಲಿ ಖಾನ್‌ನನ್ನು ಕೊಲೆ ಮಾಡಿದ್ದಾರೆ..
ಮಾರ್ಚ್ 12, 1993 ರಂದು, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ 28 ಅಂತಸ್ತಿನ ಕಟ್ಟಡದ ನೆಲಮಾಳಿಗೆಯಲ್ಲಿ ಬಾಂಬ್ ಸ್ಫೋಟಿಸಲಾಗಿತ್ತು.. ಇದರಲ್ಲಿ 50 ಮಂದಿ ಸಾವನ್ನಪ್ಪುದ್ದರು.. ಅನಂತರ ಮುಂಬೈನ ಹಲವು ಕಡೆ ಸ್ಫೋಟಗಳು ಸಂಭವಿಸಿದ್ದವು.. ಸುಮಾರು 257 ಮಂದಿ ಸಾವನ್ನಪ್ಪಿದ್ದರು.. ಈ ಪ್ರಕರಣದಲ್ಲಿ ಕೊಲೆಯಾದ ಮೊಹಮ್ಮದ್ ಅಲಿ ಖಾನ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಎಂದು ತಿಳಿದುಬಂದಿದೆ..