ರಾಜ್ಯ ಕಾಂಗ್ರೆಸ್ ನಾಯಕರಿಗೆ ಈಗಲೂ ʻಡಬಲ್ ಡಿಜಿಟ್ʼ ವಿಶ್ವಾಸ; Exit Poll ಸುಳ್ಳಾಗುತ್ತಾ..?
ಬೆಂಗಳೂರು; ರಾಜ್ಯದಲ್ಲಿ ಕಾಂಗ್ರೆಸ್‌ಗೆ 5-8 ಸ್ಥಾನಗಳು ಬರಲಿವೆ ಎಂದು ಎಲ್ಲಾ ಸಮೀಕ್ಷೆಗಳೂ ಹೇಳುತ್ತಿವೆ.. ಆದ್ರೆ ಕಾಂಗ್ರೆಸ್ ನಾಯಕರಿಗೆ ಈ ಸಮೀಕ್ಷೆಗಳ ಬಗ್ಗೆ ವಿಶ್ವಾಸವಿಲ್ಲ.. ಈಗಲೂ ಕೂಡಾ ರಾಜ್ಯ ಕಾಂಗ್ರೆಸ್ ನಾಯಕರು, ರಾಜ್ಯದಲ್ಲಿ ನಮಗೆ ಡಬಲ್ ಡಿಜಿಟ್ ಬಂದೇ ಬರುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.. ಕಡಿಮೆ ಅಂದರೂ 12-14 ಸೀಟುಗಳು ಬರಲಿವೆ ಎಂಬ ವಿಶ್ವಾಸದಲ್ಲೇ ರಾಜ್ಯ ಕಾಂಗ್ರೆಸ್ ನಾಯಕರಿದ್ದಾರೆ.. ಇದಕ್ಕೆ ಕಾರಣ ಆಂತರಿಕ ಸಮೀಕ್ಷೆ ಹಾಗೂ ರಾಜ್ಯ ಗುಪ್ತಚರ ಇಲಾಖೆಯ ನೀಡಿದ ವರದಿ.. ಬೂತ್ ಮಟ್ಟದ ಕಾರ್ಯಕರ್ತರಿಂದ ತರಿಸಿಕೊಂಡ ಮಾಹಿತಿ ಹಾಗೂ ಗುಪ್ತಚರ ಇಲಾಖೆ ಒಂದೇ ರೀತಿಯ ವರದಿ ಕೊಟ್ಟಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಕಡಿಮೆ ಎಂದರೂ 13 ಸ್ಥಾನಗಳು ಗೆಲ್ಲಬಹುದು ಎಂದು ಹೇಳಲಾಗಿದೆ.. ಹೀಗಾಗಿ ಎಕ್ಸಿಟ್ ಪೋಲ್ ಬಂದ ಮೇಲೂ ಕೂಡಾ ಕಾಂಗ್ರೆಸ್ ನಾಯಕರು ತಮ್ಮ ವಿಶ್ವಾಸವನ್ನು ಕಳೆದುಕೊಂಡಿಲ್ಲ.. ಜೂನ್ 4 ಬರಲಿ ನೋಡೋಣ ಎನ್ನುತ್ತಿದ್ದಾರೆ..
ಚುನಾವಣೋತ್ತರ ಸಮೀಕ್ಷೆಗಳು ಬಂದ ನಂತರ ಕಾಂಗ್ರೆಸ್ ನಾಯಕರು ನಮಗೆ ಅಷ್ಟು ಕಡಿಮೆ ಬರೋದಕ್ಕೆ ಚಾನ್ಸೇ ಇಲ್ಲ.. ಕನಿಷ್ಟ 12 ಸ್ಥಾನಗಳಾದರೂ ಬರುತ್ತವೆ.. ಗ್ಯಾರೆಂಟಿಗಳಿಗೆ ಜನ ಮತ ಹಾಕಿದ್ದರೆ ನಮ್ಮ ಗೆಲುವಿನ ಸಂಖ್ಯೆ 14-15ಕ್ಕೆ ಏರುತ್ತೆ ಎಂಬ ವಿಶ್ವಾಸದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇದ್ದಾರೆ.. ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲೂ ಎಲ್ಲಾ ಸಮೀಕ್ಷೆಗಳೂ ಕಾಂಗ್ರೆಸ್ ಪರವಾಗಿ ನೀಡಿರಲಿಲ್ಲ.. ಅದೂ ಕೂಡಾ ಕಾಂಗ್ರೆಸ್ 135 ಸ್ಥಾನ ಗಳಿಸುತ್ತೆ ಎಂದು ಹೇಳಿದ್ದು ಬೆರಳೆಣಿಕೆ ಸಮೀಕ್ಷೆಗಳು ಮಾತ್ರ.. ಬಹುತೇಕ ಸಮೀಕ್ಷೆಗಳು ಸುಳ್ಳಾಗಿದ್ದವು.. ಹೀಗಾಗಿ ಲೋಕಸಭಾ ಚುನಾವಣೆಯಲ್ಲೂ ಸಮೀಕ್ಷಾ ವರದಿಗಳು ಸುಳ್ಳಾಗುತ್ತವೆ.. ಕಾಂಗ್ರೆಸ್‌ಗೆ ಡಬಲ್ ಡಿಜಿಟ್ ಸ್ಥಾನಗಳು ಸಿಗುತ್ತವೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ..
ಕಾಂಗ್ರೆಸ್ ನಾಯಕರ ಪ್ರಕಾರ ಮೊದಲ ಹಂತದ 14 ಕ್ಷೇತ್ರಗಳ ಪೈಕಿ ಆರು ಹಾಗೂ ಎರಡನೇ ಹಂತದ 14 ಕ್ಷೇತ್ರಳ ಪೈಕಿ 8 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ.. ಹೀಗಾಗಿ ಅದೇ ವಿಶ್ವಾಸದಲ್ಲಿ ಈಗಲೂ ಇದ್ದಾರೆ.. ಸಮೀಕ್ಷೆಗಳು ಕಾಂಗ್ರೆಸ್ ನಾಯಕರನ್ನು ಕೊಂಚ ವಿಚಲಿತಗೊಳಿಸಿದ್ದರೂ, ಫಲಿತಾಂಶದಲ್ಲಿ ಬೇರೆಯದೇ ರಿಸಲ್ಟ್ ಬರುತ್ತೆ ಅನ್ನೋದು ವಿಶ್ವಾಸ ಅಂತೂ ಅವರಲ್ಲಿ ಇದ್ದೇ ಇದೆ..