Politics

ಇಂಡಿಯಾ ಒಕ್ಕೂಟಕ್ಕೆ 295ಕ್ಕೂ ಹೆಚ್ಚು ಸ್ಥಾನ; ಅಧಿಕಾರ ನಮ್ಮದೇ ಎನ್ನುತ್ತಿರುವ ಖರ್ಗೆ!

ನವದೆಹಲಿ; ಎಲ್ಲಾ ಹಂತದ ಮತದಾನ ಮುಗಿದ ಮೇಲೆ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟಕ್ಕೆ 295ಕ್ಕೂ ಹೆಚ್ಚು ಸ್ಥಾನಗಳು ಬರಲಿವೆ.. ಹೀಗಾಗಿ ನಾವೇ ಅಧಿಕಾರ ಹಿಡಿಯುತ್ತೇವೆ ಎಂಬ ಆತ್ಮವಿಶ್ವಾಸ ವಿಶ್ವಾಸ ವ್ಯಕ್ತಪಡಿಸಿದ್ದಾರೆ.. ದೆಹಲಿಯಲ್ಲಿ ಮಾತನಾಡಿರುವ ಅವರು, ಈ ಬಾರಿ ನಮಗೇ ಅಧಿಕಾರ ಎಂದು ಹೇಳಿದ್ದಾರೆ..

ಇಂದು ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ನಾಯಕರ ಸಭೆ ನಡೆಯಿತು.. ಎರಡೂವರೆ ಗಂಟೆಗಳ ಕಾಲ ಈ ಸಭೆ ನಡೆಸಲಾಗಿದೆ.. ಎಕ್ಸಿಟ್ ಪೋಲ್ ರಿಸಲ್ಟ್ ಬಳಿಕ ಮೈತ್ರಿಕೂಟದ ನಾಯಕರು ಮತ್ತೊಮ್ಮೆ ಚರ್ಚಿಸುತ್ತೇವೆ ಎಂದು ಖರ್ಗೆ ಹೇಳಿದ್ದಾರೆ. ನಾವು ಸತ್ಯವನ್ನು ಹೇಳುತ್ತೇವೆ. ಮತದಾರರ ಸರ್ವೇ ಪ್ರಕಾರ ಇಂಡಿಯಾ ಮೈತ್ರಿಕೂಟ 295 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಜೂನ್ 4ರ ಚುನಾವಣಾ ಫಲಿತಾಂಶಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಖರ್ಗೆ ವಿಶ್ವಾಸದಿಂದ ಹೇಳಿದ್ದಾರೆ..

 

Share Post