ಕಾಂಗ್ರೆಸ್‌ಗೆ 100 ಸೀಟಿಗಿಂತ ಜಾಸ್ತಿ ಬಂದರೆ ಕೇಂದ್ರದಲ್ಲಿ ಅತಂತ್ರ ಸ್ಥಿತಿ ಏರ್ಪಡುತ್ತಾ..?
ನವದೆಹಲಿ; ಲೋಕಸಭಾ ಚುನಾವಣೆಯ ಏಳು ಹಾಗೂ ಕೊನೆಯ ಹಂತದ ಮತದಾನ ಇಂದು ನಡೆಯುತ್ತಿದೆ.. ಆರು ಗಂಟೆಗೆ ಮತದಾನ ಮುಕ್ತಾಯವಾಗಲಿದೆ.. ಅನಂತರ ಬರುವ ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳುತ್ತವೆ ಎಂದು ಎಲ್ಲರೂ ಕಾಯುತ್ತಿದ್ದಾರೆ.. ಈ ನಡುವೆ ಬಿಜೆಪಿಗೆ ಈ ಬಾರಿ ಕಡಿಮೆ ಸ್ಥಾನಗಳು ಬರಬಹುದು ಎಂದು ಕೆಲವರು ಹೇಳುತ್ತಿದ್ದಾರೆ.. ಮಿತ್ರಪಕ್ಷಗಳ ಬೆಂಬಲದ ಹೊರತು ಬಿಜೆಪಿಗೆ ಅಧಿಕಾರ ಹಿಡಿಯೋದಕ್ಕೆ ಆಗೋದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.. ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ನೂರು ಸ್ಥಾನಗಳಿಗೂ ಹೆಚ್ಚು ತೆಗೆದುಕೊಂಡರೆ ಕೇಂದ್ರದಲ್ಲಿ ಅತಂತ್ರ ಸ್ಥಿತಿ ಉಂಟಾಗಬಹುದು ಅನ್ನೋದು ಕೆಲವರ ಲೆಕ್ಕಾಚಾರ..
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳು ಲಬಿಸಿದ್ದವು.. ಆಗ ಕರ್ನಾಟಕದಲ್ಲಿ ಕೇವಲ ಒಂದು ಸ್ಥಾನ ಸಿಕ್ಕಿತ್ತು.. ಆದ್ರೆ ಈ ಬಾರಿ 12ಕ್ಕಿಂತ ಹೆಚ್ಚು ಸ್ಥಾನಗಳು ಕಾಂಗ್ರೆಸ್‌ಗೆ ಬರಬಹುದು ಎಂದು ಹೇಳಲಾಗುತ್ತಿದೆ.. ಜೊತೆಗೆ ತೆಲಂಗಾಣದಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಹಲವು ಸ್ಥಾನಗಳು ಸಿಗಲಿವೆ.. ಇದಲ್ಲದೆ ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.. ಕಾಂಗ್ರೆಸ್‌ನ ನಾಯಕರ ನಿರೀಕ್ಷೆಯಂತೆ ಕಾಂಗ್ರೆಸ್‌ಗೆ 100ಕ್ಕಿಂತ ಹೆಚ್ಚು ಸ್ಥಾನಗಳು ಸಿಕ್ಕರೆ, ಬಿಜೆಪಿ 250ಕ್ಕಿಂತ ಕಡಿಮೆ ಸ್ಥಾನಗಳಿಗೆ ಕುಸಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ..
ಒಂದು ವೇಳೆ ಬಿಜೆಪಿಗೆ 250 ಸ್ಥಾನಗಳಿಗೂ ಕಡಿಮೆ ಸಿಕ್ಕಿ, ಕಾಂಗ್ರೆಸ್ 100ಕ್ಕಿಂತ ಹೆಚ್ಚು ಸ್ಥಾನಗಳು ಗಳಿಸಿದರೆ ಕೇಂದ್ರದಲ್ಲಿ ಅತಂತ್ರ ಸ್ಥಿತಿ ಏರ್ಪಡಬಹುದು ಎಂದು ಹೇಳಲಾಗುತ್ತಿದೆ.. ಸರಳ ಬಹುಮತಕ್ಕೆ 272 ಸೀಟು ಬೇಕು.. ಸದ್ಯದ ಪರಿಸ್ಥಿತಿಯಲ್ಲಿ ಕೇವಲ ಬಿಜೆಪಿ ಇಷ್ಟು ಸ್ಥಾನ ಗಳಿಸೋದು ಕಷ್ಟ.. ಮಿತ್ರಪಕ್ಷಗಳ ಸೀಟುಗಳೂ ಸೇರಿದರೆ 300 ದಾಟಬಹುದು ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ.. ಹಾಗೇನಾದರೂ ಆದರೆ ಮೋದಿ ಮೂರನೇ ಬಾರಿ ಪ್ರಧಾನಿಯಾಗುತ್ತಾರೆ.. ಆದ್ರೆ ಒಂದಷ್ಟು ಸೀಟುಗಳ ವ್ಯತ್ಯಾಸವಾದರೂ ಸರ್ಕಾರ ರಚನೆಗೆ ಕಸರತ್ತು ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು..