ರೇವಣ್ಣ ಜಾಮೀನು ರದ್ದಾಗುತ್ತಾ..?; ಭವಾನಿ ರೇವಣ್ಣಗೆ ಜೈಲಾ, ಬೇಲಾ..?
ಬೆಂಗಳೂರು; ಇಂದು ಮಾಜಿ ಸಚಿವ ರೇವಣ್ಣ ಕುಟುಂಬಕ್ಕೆ ಆತಂಕದ ದಿನ.. ಈಗಾಗಲೇ ಲೈಂಗಿಕ ದೌರ್ಜನ್ಯ ಪ್ರಕರಣದಡಿಯಲ್ಲಿ ಪ್ರಜ್ವಲ್ ರೇವಣ್ಣನ ಬಂಧನವಾದೆ.. ಇನ್ನು ಇವತ್ತೇ ಮಾಜಿ ಸಚಿವ ರೇವಣ್ಣ ಹಾಗೂ ಅವರ ಪತ್ನಿ ಭವಾನಿ ರೇವಣ್ಣ ಕಾನೂನು ಹೋರಾಟ ಎದುರಿಸಬೇಕಾಗಿದೆ.. ಕೆಆರ್ ನಗರದ ಮಹಿಳೆಯ ಅಪಹರಣ ಕೇಸ್‌ನಲ್ಲಿ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಇಂದು ಈ ಬಗ್ಗೆ ಕೋರ್ಟ್ ನಿರ್ಧಾರ ಪ್ರಕಟಿಸಲಿದೆ.. ಇನ್ನೊಂದೆಡೆ ರೇವಣ್ಣ ಅವರಿಗೆ ನೀಡಿರುವ ಜಾಮೀನು ರದ್ದು ಮಾಡುವಂತೆ ಎಸ್‌ಐಟಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು ಅದೂ ಕೂಡಾ ಇಂದೇ ವಿಚಾರಣೆಗೆ ಬರಲಿದೆ.. ಎರಡರಲ್ಲೂ ವ್ಯತಿರಿಕ್ತ ಆದೇಶ ಬಂದರೆ, ಇಬ್ಬರಿಗೂ ಬಂಧನದ ಭೀತಿ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ..
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆ ಎಂದು ಹೇಳಲಾಗುತ್ತಿರುವ ಕೆಆರ್ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣಗೆ ಬಂಧನದ ಭೀತಿ ಇದೆ.. ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಿದೆ.. ಇದರ ಬೆನ್ನಲ್ಲೇ ಭವಾನಿಯವರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.. ಇಂದು ಕೋರ್ಟ್ ನೀಡುವ ಆದೇಶದ ಮೇಲೆ ಭವಾನಿಯವರ ಭವಿಷ್ಯ ನಿಂತಿದೆ.. ಜಾಮೀನು ನಿರಾಕರಿಸಿದರೆ ಭವಾನಿ ರೇವಣ್ಣ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ..
ಇತ್ತ ಇದೇ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಜಾಮೀನಿನ ಮೇಲೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬಿಡುಗಡೆಯಾಗಿದ್ದಾರೆ.. ಆದ್ರೆ ಎಸ್‌ಐಟಿ ಅಧಿಕಾರಿಗಳು ಜಾಮೀನು ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.. ತನಿಖೆ ಮುಗಿಯುವವರೇ ರೇವಣ್ಣ ಬಂಧನದಲ್ಲೇ ಮುಂದುವರೆಯಬೇಕಾಗಿದ್ದು, ಜಾಮೀನು ರದ್ದು ಮಾಡುವಂತೆ ಕೋರ್ಟ್‌ಗೆ ಮನವಿ ಮಾಡಲಾಗಿದೆ.. ಹೀಗಾಗಿ ಇಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಪೀಠದಲ್ಲಿ ಇದರ ವಿಚಾರಣೆ ನಡೆಯಲಿದೆ.. ಒಂದು ಎಸ್‌ಐಟಿ ಮನವಿಯನ್ನು ಹೈಕೋರ್ಟ್ ಪುರಸ್ಕಿರಿಸಿದರೆ ರೇವಣ್ಣ ಅವರು ಮತ್ತೆ ಬಂಧನವಾಗುವ ಸಾಧ್ಯತೆ ಇದೆ..