ಇದೆಂಥಾ ನೀರು..?; ಇವರೆಲ್ಲಾ ಕಪ್ಪಗಿರೋ ನೀರು ಕುಡೀತಾರಂತೆ..!
ಬೆಂಗಳೂರು; ಸಿನಿಮಾ ಮಂದಿ, ಕ್ರಿಕೆಟ್ ಆಟಗಾರರು ಕಪ್ಪು ನೀರು ಕುಡಿಯುವುದನ್ನು ನೀವು ನೋಡೇ ಇರುತ್ತೀರಿ. ವಿಮಾನ ನಿಲ್ದಾಣದಲ್ಲಿ, ಜಿಮ್ ಮಾಡುವಾಗ ಕಪ್ಪು ನೀರಿನ ಬಾಟಲ್ ಹಿಡಿದಿರುವ ಸೆಲೆಬ್ರಿಟಿಗಳ ಫೋಟೋಗಳು ಆಗಾಗ ಹರಿದಾಡುತ್ತಲೇ ಇರುತ್ತವೆ. ಹೀಗಾಗಿ ಎಷ್ಟೋ ಜನಕ್ಕೆ ಈ ಬ್ಲ್ಯಾಕ್ ವಾಟರ್ ಬಗ್ಗೆ ಹೆಚ್ಚು ಕುತೂಹಲ ಇದೆ. ಏನು ಈ ನೀರು..? ಇದನ್ನು ಕುಡಿದರೆ ಏನು ಪ್ರಯೋಜನ..? ನೋಡೋಣ ಬನ್ನಿ..
ನಿಮಗೆ ಎಂದಾದರೂ ಈ ಅನುಮಾನ ಬಂದಿದೆಯಾ..? ಸೆಲೆಬ್ರಿಟಿಗಳು ಏಕೆ ಕಪ್ಪು ನೀರು ಕುಡಿಯುತ್ತಾರೆ ಅಂತ..? ಅದರಿಂದ ಏನಾದರೂ ಉಪಯೋಗವಿದೆಯೇ ಮತ್ತು ಸಾಮಾನ್ಯ ನೀರಿಗಿಂತ ಈ ಕಪ್ಪು ನೀರಿನಲ್ಲಿ ಏನು ವಿಶೇಷತೆ ಇದೆ..? ಅನ್ನೋ ಪ್ರಶ್ನೆಗಳು ನಿಮ್ಮಲ್ಲಿ ಮೂಡಿವೆಯೇ..? ಹಾಗಾದ್ರೆ ಇದಕ್ಕೆ ಇಲ್ಲಿದೆ ಉತ್ತರ. ವಾಸ್ತವವಾಗಿ, ಕಪ್ಪು ನೀರು ಕೂಡಾ ಸಾಮಾನ್ಯ ನೀರಿನಂತೆಯೇ ರುಚಿ ಇರುತ್ತದೆ. ಆದ್ರೆ ಈ ಕಪ್ಪು ನೀರು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದಂತೆ. ಅದರಲ್ಲೂ ಕಪ್ಪು ನೀರು ಮೊಡವೆಯಂತಹ ಸಮಸ್ಯೆಗಳಿಂದ ದೂರ ಇಡುತ್ತದಂತೆ. ಹೀಗಾಗಿಯೇ ಸೆಲೆಬ್ರಿಟಿಗಳು ಈ ನೀರನ್ನು ಹೆಚ್ಚು ಕುಡಿಯುತ್ತಾರೆ. ಸಾಮಾನ್ಯ ನೀರಿನಂತೆಯೇ ಈ ಕಪ್ಪು ನೀರನ್ನು ಯಾವಾಗಲೂ ಉಪಯೋಗಿಸುತ್ತಾರೆ.
ಅದೇ ರೀತಿ ಕಪ್ಪು ನೀರು ಅಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ. ಮಧುಮೇಹದಂತಹ ಸಮಸ್ಯೆಗಳಿಂದ ಬಳಲುತ್ತಿರುವವರೂ ಕಪ್ಪು ನೀರನ್ನು ಕುಡಿಯುತ್ತಾರೆ. ಬ್ಲ್ಯಾಕ್ ವಾಟರ್ ಸುಮಾರು ವರ್ಷಗಳಿಂದಲೂ ಇದೆ. ಕಪ್ಪು ನೀರು ಕ್ಷಾರೀಯ ನೀರು. ಇದು ಸಾಮಾನ್ಯ ನೀರಿಗಿಂತ ಹೆಚ್ಚಿನ pH ಮೌಲ್ಯವನ್ನು ಹೊಂದಿದೆ. ಕಪ್ಪು ನೀರನ್ನು ಸೇವಿಸುವುದರಿಂದ ಕರುಳಿನ ಆರೋಗ್ಯ ಸುಧಾರಿಸುತ್ತದೆ.
ಇದಕ್ಕೆ ಆ್ಯಂಟಿಆಕ್ಸಿಡೆಂಟ್‌ಗಳನ್ನು ಕೂಡ ಸೇರಿಸಲಾಗುತ್ತದೆ. ಇದು ಮಲದಲ್ಲಿರುವ ಕೆಟ್ಟ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಧೂಮಪಾನ ಮತ್ತು ಮದ್ಯಪಾನ ಮಾಡುವವರಿಗೆ ಈ ಕಪ್ಪು ನೀರು ತುಂಬಾ ಸಹಾಯಕವಾಗಿದೆ. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜಿಮ್‌ಗಳು ಕಪ್ಪು ನೀರು ಉಪಯುಕ್ತ ಎಂದು ಹೇಳುತ್ತಿವೆ, ಆದ್ದರಿಂದ ಅನೇಕ ಜಿಮ್‌ಗೆ ಹೋಗುವವರು ಕಪ್ಪು ನೀರಿಗೆ ಆದ್ಯತೆ ನೀಡುತ್ತಿದ್ದಾರೆ.