CrimeNational

ಅನಾರೋಗ್ಯದಿಂದ ಮೃತಪಟ್ಟ ಪತ್ನಿಯ ಶವವನ್ನು ರಸ್ತೆ ಬದಿ ಎಸೆದುಹೋದ ಪತಿ!

ಮಧ್ಯಪ್ರದೇಶ; ಅನಾರೋಗ್ಯದಿಂದ ಮೃತಪಟ್ಟಿದ್ದ ಪತ್ನಿಯ ಶವವನ್ನು ಮೂಟೆಕಟ್ಟಿದ ಪತಿಯೊಬ್ಬ ಅದನ್ನು ರಸ್ತೆ ಬದಿ ಎಸೆದು ಹೋಗಿದ್ದಾರೆ.. ಅದು ಕೊಳೆತು ನಾರಿದ್ದು, ದುರ್ವಾಸನೆ ಬಂದಿದೆ.. ಈ ವೇಳೆ ಪೊಲೀಸರು ಬಂದು ಪರಿಶೀಲನೆ ಮಾಡಿದಾಗ ಮಹಿಳೆಯ ಮೃತದೇಹ ಪತ್ತೆಯಾಗಿದೆ.. ತನಿಖೆ ಮಾಡಿದಾಗ ಅಂತ್ಯಸಂಸ್ಕಾರ ನಡೆಸಲು ಹಣವಿಲ್ಲದೆ ಪತ್ನಿಯ ದೇಹವನ್ನು ರಸ್ತೆ ಬದಿ ಬಿಸಾಕಿ ಹೋಗಿದ್ಧಾಗಿ ಗಂಡ ಹೇಳಿಕೊಂಡಿದ್ದಾನೆ..

ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದೆ.. 53 ವರ್ಷದ ವ್ಯಕ್ತಿಯ ಪತ್ನಿ ಅನಾರೋಗ್ಯದಿಂದ ಐದಾರು ದಿನಗಳ ಹಿಂದೆ ಮೃತಪಟ್ಟಿದ್ದಳು.. ಆದ್ರೆ, ಆಕೆಯ ಗಂಡನ ಬಳಿ ಅಂತ್ಯಸಂಸ್ಕಾರಕ್ಕೂ ಹಣವಿರಲಿಲ್ಲ.. ಹೀಗಾಗಿ ರಾತ್ರಿ ವೇಳೆ ಪತ್ನಿಯ ಮೃತದೇಹವನ್ನು ಗೋಣಿ ಚೀಲಕ್ಕೆ ಹಾಕಿ ಮೂಟೆ ಕಟ್ಟಿದ್ದಾನೆ. ಅನಂತರ ರಾತ್ರಿ ಸಮಯದಲ್ಲಿ ಅದನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ರಸ್ತೆ ಬದಿ ಬಿಸಾಕಿ ಬಂದಿದ್ದಾನೆ.. ದುರ್ವಾಸನೆ ಬರುತ್ತಿದ್ದುದನ್ನು ನೋಡಿ ಅಕ್ಕಪಕ್ಕದ ಮನೆಯರು ಪೊಲೀಸರಿಗೆ ಮಾಹಿತಿ ನೀಡಿದ್ದರು..

ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದಾಗ ಮಹಿಳೆ ಶವವಿದ್ದ ಗೋಣಿ ಚೀಲ ಸಿಕ್ಕಿದೆ.. ಆಕೆ ಯಕೃತ್ತಿನ ಕಾಯಿಲೆಯಿಂದ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.. ಪೊಲೀಸರು ತನಿಖೆ ನಡೆಸಿ ಮಹಿಳೆಯ ಗಂಡನನ್ನು ಹಿಡಿದು ತಂದಿದ್ದಾರೆ.. ಈ ವೇಳೆ ಆತ ಅಂತ್ಯಸಂಸ್ಕಾರಕ್ಕೆ ಹಣವಿಲ್ಲದಿದ್ದರಿಂದ ಹೀಗೆ ಮಾಡಿದೆ ಎಂದು ಹೇಳಿದ್ದಾರೆ.. ಆ ವ್ಯಕ್ತಿ ಮಾನಸಿಕ ಅಸ್ವಸ್ಥನೂ ಆಗಿದ್ದಾನೆ ಎಂದು ತಿಳಿದುಬಂದಿದೆ.

 

 

Share Post