CrimeDistrictsHealth

ಮೇಕೆ ಮೇಯಿಸುತ್ತಿದ್ದಾಗ ಹುಲಿ ದಾಳಿ; ಮಹಿಳೆಯ ಕಾಲು ಮಾತ್ರ ಪತ್ತೆ, ಇನ್ನೂ ಸಿಗದ ದೇಹ!

ಮೈಸೂರು; ಮೈಸೂರು ಜಿಲ್ಲೆಯಲ್ಲಿ ಹುಲಿ, ಚಿರತೆಗಳ ದಾಳಿ ಹೆಚ್ಚಾಗುತ್ತಿದೆ.. ಇದೀಗ ಹುಲಿ ದಾಳಿಗೆ ಮತ್ತೊಬ್ಬ ಮಹಿಳೆ ಸಾವನ್ನಪ್ಪಿದ್ದಾರೆ.. ಎಚ್.ಡಿ.ಕೋಟೆ ತಾಲ್ಲೂಕು ಎನ್.ಬೇಗೂರು ಸಮೀಪದ ಮಾಳದ ಹಾಡಿ ನಿವಾಸಿ ಚಿಕ್ಕಿ ಎಂಬ 48 ವರ್ಷದ ಮಹಿಳೆ ಹುಲಿ ದಾಳಿಯಿಂದ ಮೃತಪಟ್ಟಿದ್ದಾಳೆ..

ಮೂರ್ಬಾಂದ್ ಬೆಟ್ಟದ ಸಮೀಪ ಚಿಕ್ಕಿ ಎಂಬ ಮಹಿಳೆ ಮೇಕೆಗಳನ್ನು ಮೇಯಿಸುತ್ತಿದ್ದಳು.. ಈ ವೇಳೆ ಹುಲಿಯೊಂದು ಹಠಾತ್‌ ದಾಳಿ ಮಾಡಿದೆ.. ಮೃತದೇಹವನ್ನು ಹುಲಿ ಎಳೆದುಕೊಂಡು ಹೋಗಿವೆ.. ಇನ್ನೂ ಮೃತದೇಹ ಸಿಕ್ಕಿಲ್ಲ.. ಅರಣ್ಯ ಸಿಬ್ಬಂದಿ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.. ಮಹಿಳೆಯ ಕಾಲು ಮಾತ್ರ ಸಿಕ್ಕಿದೆ ಎಂದು ತಿಳಿದುಬಂದಿದೆ..

ಅಂತರ ಸಂತೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ..

 

Share Post