ರೇವ್ ಪಾರ್ಟಿ ಕೇಸ್ ; ನಟಿ ಹೇಮಾಗೆ ನೋಟೀಸ್
ಬೆಂಗಳೂರು ರೇವ್ ಪಾರ್ಟಿ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಚಿತ್ರನಟಿ ಹೇಮಾಗೆ ಬೆಂಗಳೂರು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಇದೇ ತಿಂಗಳ 27ರಂದು ತನಿಖೆಗೆ ಬರಬೇಕು ಎಂದು ಪೊಲೀಸರು ನೀಡಿರುವ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಸುಮಾರು 86 ಮಂದಿಗೆ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ…
ಈ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಾದಕ ದ್ರವ್ಯ ಸೇವನೆ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಡ್ರಗ್ಸ್ ಸೇವಿಸಿದವರಿಗೆ ಕೌನ್ಸೆಲಿಂಗ್ ನೀಡಲು ಪೊಲೀಸರು ನಿರ್ಧರಿಸಿದ್ದಾರೆ. ಹೇಮಾ ಜೊತೆಗೆ ಆಶಿರಾಯ್, ರಿಷಿ ಚೌಧರಿ, ವರುಣ್ ಚೈದರಿ, ಚಿರಂಜೀವಿ, ಕಾಂತಿ, ರಾಜಶೇಖರ್, ಪ್ರಸನ್ನ, ಶಿವಾನಿ, ಜೈಶ್ವಾಲ್ ಮತ್ತು ಸುಜಾತಾ ಅವರಿಗೂ ಬೆಂಗಳೂರು ಪೊಲೀಸರಿಂದ ನೋಟಿಸ್ ಬಂದಿದೆ.