ATMನಲ್ಲಿ 500ರ ನೋಟಿಗೆ ಬದಲಾಗಿ ಬಂತು 20ರ ನೋಟು!; ಏನಿದು ವಿಚಿತ್ರ!
ರಾಮನಗರ; ATMಗಳಲ್ಲಿ 100 ರೂಪಾಯಿಯ ಮೇಲಿನ ನೋಟುಗಳನ್ನಷ್ಟೇ ತುಂಬುತ್ತಾರೆ.. ಹತ್ತು, ಇಪ್ಪತ್ತರ ನೋಟುಗಳು ATMಗಳಲ್ಲಿ ಸಿಗೋದಿಲ್ಲ.. ಆದ್ರೆ ಇಲ್ಲೊಂದು ಎಟಿಎಂನಲ್ಲಿ 500 ರೂಪಾಯಿ ನೋಟಿಗೆ ಬದಲಾಗಿ 20 ರೂಪಾಯಿ ನೋಟುಗಳು ಬರುತ್ತಿವೆ.. ಇದನ್ನು ನೋಡಿ ಗ್ರಾಹಕರು ಕಂಗಾಲಾಗಿದ್ದಾರೆ..
ರಾಮನಗರ KSRTC ಬಸ್ ನಿಲ್ದಾಣದಲ್ಲಿ ಇಂಡಿಯಾ 1 ಎಟಿಎಂನಿಂದ ಯುವತಿಯೊಬ್ಬರು 5 ಸಾವಿರ ರೂಪಾಯಿ ಡ್ರಾ ಮಾಡಿದ್ದಾರೆ.. ಈ ವೇಳೆ 4 ಸಾವಿರ ರೂಪಾಯಿಗೆ 500 ರೂಪಾಯಿಯ ನೋಟುಗಳೇ ಬಂದಿದೆ.. ಆದ್ರೆ ಉಳಿದ ಒಂದು ಸಾವಿರ ರೂಪಾಯಿಗೆ ಎರಡು 500 ರೂಪಾಯಿ ನೋಟುಗಳು ಬರುವ ಬದಲು ಎರಡು 20 ರೂಪಾಯಿ ನೋಟುಗಳು ಬಂದಿವೆ.. ಅಂದರೆ 5 ಸಾವಿರ ರೂಪಾಯಿ ಡ್ರಾ ಮಾಡಿದ್ದರೆ, ಎಂಟು 500 ರೂಪಾಯಿ ನೋಟುಗಳು ಹಾಗೂ ಎರಡು 20 ರೂಪಾಯಿ ನೋಟುಗಳು ಬಂದಿದೆ.. ಅಂದರೆ 4 ಸಾವಿರದ 40 ರೂಪಾಯಿ ಮಾತ್ರ ಬಂದಿದೆ..
ಮಷಿನ್ 20 ರೂಪಾಯಿ ನೋಟುಗಳನ್ನು ಕೂಡಾ 500 ರೂಪಾಯಿ ಎಂದು ಲೆಕ್ಕಹಾಕಿ ಕೊಟ್ಟಿದೆ.. ಎಟಿಎಂಗೆ ಹಣ ತುಂಬಿಸುವಾಗ 500 ರೂಪಾಯಿಯ ಟ್ರೇನಲ್ಲಿ 20 ರೂಪಾಯಿ ನೋಟುಗಳನ್ನೂ ಸೇರಿಸಿದ ಕಾರಣದಿಂದ ಹೀಗೆ ಆಗಿದೆ ಎಂದು ಹೇಳಲಾಗುತ್ತಿದೆ.. ನೋಟು ತುಂಬಿಸುವ ಸಿಬ್ಬಂದಿ ಬೇಕಂತಾನೇ ಹೀಗೆ ಮಾಡಿರಬಹುದು ಎಂದು ಆರೋಪಿಸಲಾಗುತ್ತಿದೆ..
ಅಂದಹಾಗೆ, ಎಟಿಎಂಗಳಲ್ಲಿ ಕನಿಷ್ಟ 100 ರೂಪಾಯಿ ನೋಟುಗಳನ್ನು ತುಂಬಿಸಲಾಗುತ್ತದೆ.. 100, 200 ಹಾಗೂ 500 ರೂಪಾಯಿ ನೋಟುಗಳು ಮಾತ್ರ ಎಟಿಎಂನಲ್ಲಿರುತ್ತವೆ.. ಆದ್ರೆ ಅದರ ಮಧ್ಯೆ 20 ರೂಪಾಯಿ ನೋಟುಗಳು ಹೇಗೆ ಬಂದವು ಅನ್ನೋದೇ ಕುತೂಹಲ.. ಎಟಿಂಎಂಗೆ ನೋಟು ತುಂಬಿಸುವವರು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಎತ್ತಿಕೊಂಡು ಅದರ ಸ್ಥಳದಲ್ಲಿ ಕೆಲ 20 ರೂಪಾಯಿ ನೋಟುಗಳನ್ನು ತುಂಬಿಸಿದ್ದಾರಾ ಎಂದು ಅನುಮಾನ ವ್ಯಕ್ತಪಡಿಸಲಾಗುತ್ತಿದೆ..