Cinema

ಪ್ರಶಸ್ತಿಗಳಲ್ಲಿ ಚಿನ್ನ ಇದೆ ಎಂದು ಭಾವಿಸಿ ಎ.ಆರ್‌.ರೆಹಮಾನ್‌ ತಾಯಿ ಮಾಡಿದ್ದೇನು ಗೊತ್ತೇ..?

ಬೆಂಗಳೂರು; ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಆಸ್ಕರ್‌ ಸೇರಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.. ಅವರು ಈ ಪ್ರಶಸ್ತಿಗಳನ್ನೆಲ್ಲಾ ಅವರ ಅಮ್ಮನ ಬಳಿ ಕೊಟ್ಟಿದ್ದರಂತೆ.. ಎ.ಆರ್‌.ರೆಹಮಾನ್‌ ಅವರ ಅಮ್ಮ ಆ ಪ್ರಶಸ್ತಿಗಳೆಲ್ಲಾ ಚಿನ್ನದಿಂದ ಕೂಡಿವೆ ಎಂದೇ ನಂಬಿದ್ದರಂತೆ.. ಹೀಗಾಗಿ ರೆಹಮಾನ್‌ ಅವರ ಅಮ್ಮ ಆ ಪ್ರಶಸ್ತಿಗಳನ್ನೆಲ್ಲಾ ಬಟ್ಟೆಯಲ್ಲಿ ಸುತ್ತಿ ಭದ್ರವಾಗಿ ಬಚ್ಚಿಟ್ಟಿದ್ದರಂತೆ.. ಈ ವಿಚಾರವನ್ನು ಸಂಗೀತ ನಿರ್ದೇಶಕ ರೆಹಮಾನ್‌ ಅವರೇ ಬಿಚ್ಚಿಟ್ಟಿದ್ದಾರೆ..
ಈ ಬಗ್ಗೆ ಮಾತನಾಡಿರುವ ಎ.ಆರ್‌.ರೆಹಮಾನ್‌, ನನ್ನ ತಾಯಿ ಕರೀಮಾ ಬೇಗಂ ಅವರು ನನ್ನ ಪ್ರಶಸ್ತಿಗಳನ್ನೆಲ್ಲಾ ದುಬೈನ ಮನೆಯಲ್ಲಿ ಇಟ್ಟುಕೊಂಡಿದ್ದರು.. ಅವು ಚಿನ್ನದಿಂದ ಮಾಡಿದ್ದು ಎಂದು ಅವರು ನಂಬಿದ್ದರು.. ಹೀಗಾಗಿ ಅವರು ಅವುಗಳನ್ನು ಬಟ್ಟೆಯಿಂದ ಸುತ್ತಿ ಭದ್ರವಾಗಿ ಯಾರಿಗೂ ಸಿಗದಂತೆ ಬಚ್ಚಿಟ್ಟಿದ್ದರು ಎಂದು ರೆಹಮಾನ್‌ ಹೇಳಿಕೊಂಡಿದ್ದಾರೆ.. ಅಮ್ಮ ತೀರಿಹೋದ ಮೇಲೆ ಆ ಅವಾರ್ಡ್‌ಗಳನ್ನು ನಾನು ದುಬೈ ಫಿರ್ಧೋಸ್‌ ಸ್ಟುಡಿಯೋಗೆ ಕೊಟ್ಟಿದ್ದೇನೆ.. ಇದೊಂದು ಒಳ್ಳೆಯ ಶೋಕೇಸ್‌ ಎಂದೂ ರೆಹಮಾನ್‌ ಹೇಳಿಕೊಂಡಿದ್ದಾರೆ..
ರೆಹಮಾನ್‌ ಅವರಿಗೆ 2ಆಸ್ಕರ್, 2 ಗ್ರ್ಯಾಮಿ, 1 BAFTA, 1 ಗೋಲ್ಡನ್ ಗ್ಲೋಬ್, 6 ರಾಷ್ಟ್ರ ಪ್ರಶಸ್ತಿ, 32 ಫಿಲ್ಮ್​ಫೇರ್ ಅವಾರ್ಡ್​ಗಳು ಬಂದಿವೆ. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿವೆ.. ಈ ಪ್ರಶಸ್ತಿಗಳನ್ನೆಲ್ಲಾ ಎಲ್ಲಿಟ್ಟಿದ್ದಾರೆ ಎಂಬ ಕುತೂಹಲದ ಪ್ರಶ್ನೆಗೆ ರೆಹಮಾನ್‌ ಮೇಲಿನಂತೆ ಉತ್ತರ ಕೊಟ್ಟಿದ್ದಾರೆ..

Share Post