Politics

ಬೆಂಗಳೂರು ಪರಿಷತ್‌ ಚುನಾವಣಾ ಫಲಿತಾಂಶಕ್ಕೆ ತಡೆಯಿಲ್ಲ: ಹೈಕೋರ್ಟ್

ಬೆಂಗಳೂರು: ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್‌ ಚುನಾವಣಾ ಫಲಿತಾಂಶಕ್ಕಿದ್ದ ಅಡಚಣೆಯನ್ನು ಕೋರ್ಟ್‌ ತೊಲಗಿಸಿದೆ. ಹೈಕೋರ್ಟ್‌ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ತಡೆದು ಹೈಕೋರ್ಟ್‌ ವಿಭಾಗೀಯ ಪೀಠ ಫಲಿತಾಂಶ ಪ್ರಕಟಣೆಗೆ ಅನುಮತಿ ನೀಡಿದೆ. ಆನೇಕಲ್, ಅತ್ತಿಬೆಲೆ ಹಾಗೂ ಮಹದೇವಪುರ ಪುರಸಭೆಗಳ ನಾಮನಿರ್ದೇಶತ ಸದಸ್ಯರನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ನಾಮ ನಿರ್ದೇಶಿತ ಸದಸ್ಯರು ಮತದಾನ ಮಾಡಬಹುದು ಆದ್ರೆ ಅವರ ಮತಗಳು ಪ್ರತ್ಯೇಕವಾಗಿರಬೇಕು ಎಂದು ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶಿಸಿತ್ತು ಜೊತೆಗೆ ಫಲಿತಾಂಶ ಪ್ರಕಟ ಮಾಡದಂತೆಯೂ ತಾಕೀತು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಚುನಾವಣಾ ಆಯೋಗ ಹೈಕೋರ್ಟ್‌ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಹಾಗೂ ನ್ಯಾಯಮೂರ್ತಿ ಶಂಕರ್‌ ಮಗದಮ್‌ ವೀಭಾಗೀಯ ಪೀಠ, ಹೈಕೋರ್ಟ್‌ ಏಕಸದಸ್ಯ ಪೀಠ ನೀಡಿರುವ ಆದೇಶವನ್ನು ತೆರವುಗೊಳಿಸಿದೆ. ಜೊತೆಗೆ ಪರಿಷತ್‌ ಚುನಾವಣಾ ಫಲಿತಾಂಶ ಘೋಷಿಸಬಹುದೆಂದು ಆದೇಶ ನೀಡಿದೆ. ಇದರಿಂದ ಬೆಂಗಳೂರು ಚುನಾವಣೆ ಫಲಿತಾಂಶಕ್ಕಿದ್ದ ತಡೆ ನಿವಾರಣೆಯಾಗಿದೆ.

Share Post