CinemaCrime

ನಾನು ಬೆಂಗಳೂರಿನ ರೇವ್‌ ಪಾರ್ಟಿಯಲ್ಲಿದ್ದೆ; ತೆಲುಗು ನಟಿ ಆಶಿ ರಾಯ್‌ ವಿಡಿಯೋ ವೈರಲ್‌

ಬೆಂಗಳೂರು; ಮೊನ್ನೆ ಬೆಂಗೂರಿನ ಎಲೆಕ್ಟ್ರಾನಿಕ್‌ ಸಿಟಿಯ ಫಾರ್ಮ್‌ ಹೌಸ್‌ನಲ್ಲಿ ರೇವ್‌ ಪಾರ್ಟಿ ನಡೆದಿತ್ತು.. ಇದರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು.. ಈ ವೇಳೆ ತೆಲುಗು ಚಿತ್ರರಂಗ ಹಲವು ನಟ ನಟಿಯರು ಇದ್ದರು ಎಂದು ಹೇಳಲಾಗಿತ್ತು.. ಖ್ಯಾತ ನಟಿ ಹೇಮಾ ಹಾಗೂ ನಟ ಶ್ರೀಕಾಂತ್‌ ಹೆಸರುಗಳು ಕೇಳಿಬಂದಿದ್ದರು.. ಆದ್ರೆ ಇಬ್ಬರೂ ನಾವು ಅಲ್ಲಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.. ಆದ್ರೆ ಮತ್ತೊಬ್ಬ ತೆಲುಗು ನಟಿ ಆಶಿ ರಾಯ್‌ ಮಾತ್ರ ನಾನು ಪಾರ್ಟಿಯಲ್ಲಿ ಇದ್ದೆ ಎಂದು ಹೇಳಿಕೊಂಡು ವಿಡಿಯೋ ಮಾಡಿದ್ದಾರೆ..
ನಾನು ಆ ಪಾರ್ಟಿಗೆ ಹೋಗಿದ್ದೆ.. ಅದೊಂದು ಬರ್ತ್‌ ಡೇ ಪಾರ್ಟಿಯಾಗಿತ್ತು.. ಆದ್ರೆ ಒಳಗೆ ಏನು ನಡೆಯುತ್ತಿತ್ತು ಎಂಬುದು ನನಗೆ ಗೊತ್ತಿರಲಿಲ್ಲ.. ಈ ವಿಷಯದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ.. ನಾನು ಇನ್ನೂ ಉದ್ಯಮದಲ್ಲಿ ಬೆಳೆಯುತ್ತಿದ್ದೇನೆ.. ಹೀಗಾಗಿ ದಯವಿಟ್ಟು ನನ್ನನ್ನು ಬೆಂಬಲಿಸಿ ಎಂದು ನಟಿ ಆಶಿ ರಾಯ್‌ ಕೇಳಿಕೊಂಡಿದ್ದಾರೆ..

 

Share Post