CinemaNational

ರೇವ್‌ ಪಾರ್ಟಿ ಪ್ರಕರಣ; ನಾನು ಬೆಂಗಳೂರಿಗೆ ಬಂದೇ ಇಲ್ಲ ಎಂದ ನಟಿ ಹೇಮಾ!

ಬೆಂಗಳೂರು; ಬೆಂಗಳೂರಿನ ಜಿಆರ್ ಫಾರ್ಮ್ ಹೌಸ್ ನಲ್ಲಿ ನಿನ್ನೆ ರೇವ್‌ ಪಾರ್ಟಿ ನಡೆದಿತ್ತು.. ಇಲ್ಲಿ ತೆಲುಗಿನ ಖ್ಯಾತ ನಟಿ ಹೇಮಾ ಅವರು ಇದ್ದರು ಎಂದು ಸುದ್ದಿಯಾಗಿತ್ತು.. ಇದಕ್ಕೆ ಸ್ವತಃ ಹೇಮಾ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.. ನನ್ನ ಬಗ್ಗೆ ಹರಿದಾಡುತ್ತಿರುವುದೆಲ್ಲಾ ಸುಳ್ಳು ಸುದ್ದಿ.. ನಾನು ಅಲ್ಲಿ ಇರಲೇ ಇಲ್ಲ.. ನಾನು ಹೈದರಾಬಾದ್‌ ನಲ್ಲೇ ಇದ್ದೇನೆ ಎಂದು ನಟಿ ಹೇಮಾ ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ..
ಬರ್ತ್​​ಡೇ ಪಾರ್ಟಿ ಹೆಸರಿನಲ್ಲಿ ಜಿಆರ್ ಫಾರ್ಮ್ ಹೌಸ್ ನಲ್ಲಿ ರೇವ್​ ಪಾರ್ಟಿ ಆಯೋಜನೆ ಮಾಡಲಾಗಿದ್ದು, ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು.. ಈ ವೇಳೆ ನಿಷೇಧಿತ ಮಾದಕ ವಸ್ತುಗಳು ಸಿಕ್ಕಿದ್ದವು.. ಈ ಸಂಬಂಧ ಡ್ರಗ್​ ಪೆಡ್ಲರ್, ಪಾರ್ಟಿ ಆಯೋಜಕ ವಾಸು​ ಸೇರಿ ಐವರನ್ನು ಬಂಧಿಸಲಾಗಿದೆ.. ಈ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಕೂಡಾ ಇದ್ದರು ಎಂಬ ಸುದ್ದಿ ಹಬ್ಬಿತ್ತು.. ಆದ್ರೆ ಈ ಮಾಹಿತಿ ತಿಳಿಯುತ್ತಿದ್ದಂತೆ ನಟಿ ಹೇಮಾ ಹೈದರಾಬಾದ್‌ನಿಂದಲೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ..
ನಾನು ಬೆಂಗಳೂರು ಸೇರಿ ಎಲ್ಲಿಗೂ ಹೋಗಿಲ್ಲ.. ಹೈದರಾಬಾದ್‌ನ ನಮ್ಮ ಫಾರ್ಮ್‌ ಹೌಸ್‌ನಲ್ಲೇ ಎಂಜಾಯ್‌ ಮಾಡುತ್ತಿದ್ದೇನೆ.. ನನ್ನ ಬಗ್ಗೆ ಬರುತ್ತಿರುವ ಸುದ್ದಿಗಳೆಲ್ಲಾ ಸುಳ್ಳು ಎಂದು ಅವರು ಹೇಳಿಕೊಂಡಿದ್ದಾರೆ.. ಇದು ಫೇಕ್‌ ನ್ಯೂಸ್‌.. ಇದನ್ನು ಯಾರೂ ನಂಬಬೇಡಿ ಎಂದೂ ಆಕೆ ಹೇಳಿಕೊಂಡಿದ್ದಾರೆ..
ನಾನು ಒಂದು ವಾರದಿಂದ ಹೈದರಾಬಾದ್‌ನಲ್ಲೇ ಇದ್ದೇನೆ.. ಎಲ್ಲೂ ಹೋಗಿಲ್ಲ.. ಇನ್ನೂ ಒಂದು ವಾರ ಹೈದರಾಬಾದ್‌ನಲ್ಲೇ ಇರುತ್ತೇನೆ.. ಸೆಲೆಬ್ರಿಟಿಗಳು ಇದ್ದರು ಅನ್ನೋ ಕಾರಣಕ್ಕೆ ನನ್ನ ಹೆಸರು ಬಂದಿರಬಹುದು.. ಆದ್ರೆ ನಾನು ಬೆಂಗಳೂರಿಗೆ ಬಂದೇ ಇಲ್ಲ ಎಂದು ನಟಿ ಹೇಮಾ ಸ್ಪಷ್ಟನೆ ಕೊಟ್ಟಿದ್ದಾರೆ..

Share Post