ಮಶ್ರೂಮ್ ಕಾಫಿ; ಇದು ಕಷಾಯವೂ ಹೌದು, ರುಚಿಕರವೂ ಹೌದು..!
ಭಾರತ ಏಕೆ ಇಡೀ ವಿಶ್ವದಲ್ಲಿ ಕಾಫಿ ಪ್ರಿಯರು ಕೋಟ್ಯಂತರ ಮಂದಿ ಇದ್ದಾರೆ.. ಕೆಲಸದ ಒತ್ತಡ ಹೆಚ್ಚಾಯ್ತು ಅಂದ್ರೆ ನಮ್ಮ ದೇಹ ಕಾಫಿ ಬಯಸುತ್ತದೆ.. ಕೆಲಸದ ನಡುವೆ ಒಂದು ಕಾಫಿ ಕುಡಿದು ಬಂದರೆ ನಮ್ಮ ಮೈಂಡ್ ಫ್ರೆಶ್ ಆಗುತ್ತದೆ.. ಏನೂ ಐಡಿಯಾ ಹೊಳೆಯುತ್ತಿಲ್ಲ, ಮೈಂಡ್ ಬ್ಲಾಂಕ್ ಆಗಿದೆ ಅನಿಸಿದರೆ ಆಗ ಕಾಫಿ ಕುಡಿದರೆ ನಮ್ಮ ಮೆದುಳು ಮತ್ತೆ ಸಕ್ರಿಯಗೊಳ್ಳುತ್ತದೆ.. ಹೀಗೆ ನಮ್ಮನ್ನು ಜಾಗೃತಗೊಳಿಸುವ ತಾಕತ್ತು ಕಾಫಿಗಿದೆ.. ಹೀಗಾಗಿಯೇ ಎಷ್ಟೋ ಜನ ಗಂಟೆಗೊಮ್ಮೆ ಕಾಫಿ ಕುಡಿಯುವವರಿದ್ದಾರೆ.. ಬಹುತೇಕ ಬೆಳಗ್ಗೆ ಹಾಗೂ ಸಂಜೆ ಕಾಫಿ ಕುಡಿಯುವುದನ್ನು ಎಂದಿಗೂ ಮಿಸ್ ಮಾಡಿಕೊಳ್ಳುವುದಿಲ್ಲ..
ಈಗ ಕಾಫಿಯಲ್ಲೂ ಹಲವಾರು ವಿಧದ ಕಾಫಿಗಳು ಬಂದಿವೆ.. ಎಸ್ಪ್ರೆಸೊ, ಡಬಲ್ ಶಾಟ್ ಎಸ್ಪ್ರೆಸೊ, ಲ್ಯಾಟೆ, ಮ್ಯಾಕ್ ಕಾಟೊ, ಫ್ರಾಪ್ಪೆ, ಕ್ಯಾಪಚಿನೋ, ಮೋಚಾ ಹೀಗೆ ತುಂಬಾನೇ ಡಿಫರೆಂಟ್ ಕಾಫಿಗಳು ಮಾರುಕಟ್ಟೆಯಲ್ಲಿವೆ… ಈಗ ಇವೆಲ್ಲವುಗಳಿಗಿಂತ ಹೆಚ್ಚು ಜನಪ್ರಿಯವಾಗ್ತಿರೋದು ಮಶ್ರೂಮ್ ಕಾಫಿ..!. ಮಶ್ರೂಮ್ ಕಾಫಿನಾ ಎಂದು ನೀವು ಹೀಗಳೆಬಹುದು.. ಆದ್ರೆ ಮಶ್ರೂಮ್ ಕಾಫಿ ಇತಿಹಾಸ, ಅದರ ರುಚಿ ಹಾಗೂ ಆರೋಗ್ಯಕ್ಕಾಗಿ ಅನುಕೂಲ ನೋಡಿದರೂ ನೀವೂ ಇವತ್ತಿನಿಂದಲೇ ಮಾಶ್ರೂಮ್ ಕಾಫಿ ಕುಡಿಯೋಕೆ ಶುರು ಮಾಡ್ತೀರಿ.. ಯಾಕಂದ್ರೆ ಇದು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ನೀವು ಅದನ್ನು ದಿನದ ಸಾಮಾನ್ಯ ಕಾಫಿ ಪಾನೀಯವಾಗಿ ಪರಿವರ್ತಿಸಬಹುದು.
ಹಿಂದಿನ ಕಾಲದಲ್ಲಿ ಔಷಧವಾಗಿ ಮಶ್ರೂಮ್ ಕಾಫಿ ಸೇವನೆ;
ಐತಿಹಾಸಿಕವಾಗಿ, ಮಶ್ರೂಮ್ ಕಾಫಿಯನ್ನು 1930 – 1940 ರ ನಡುವೆ ಜನರಿಗೆ ಪರಿಚಯಿಸಲಾಗಿದೆ.. ಹೀಗಾಗಿ ಇದಕ್ಕೊಂದು ಇತಿಹಾಸವೇ ಇದೆ.. ಹಿಂದೆ ಈ ಮಶ್ರೂಮ್ ಕಾಫಿಯನ್ನು ಔಷಧೀಯ ಪಾನೀಯವಾಗಿ ಬಳಸಲಾಗುತ್ತಿತ್ತು.. ಇದು ನಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಮಶ್ರೂಮ್ ಕಾಫಿ ತಯಾರಿಸುವುದು ಹೇಗೆ..?
ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಅಣಬೆಗಳು ಸಿಗುತ್ತವೆ.. ಆದ್ರೆ ಮಶ್ರೂಮ್ ಕಾಫಿಗೆ ಲಯನ್ಸ್ ಮೇನ್, ರಿಷಿ, ಕಾರ್ಡಿಸೆಪ್ಸ್ ಮುಂತಾದ ಮಶ್ರೂಮ್ ತಳಿಗಳನ್ನು ಮಾತ್ರ ಬಳಸಲಾಗುತ್ತದೆ.. ಮಶ್ರೂಮ್‌ಗಳನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಕೊಳ್ಳಲಾಗುತ್ತದೆ.. ಮಶ್ರೂಮ್ ಕಾಫಿ ಮಾಡಲು ಮೊದಲಿಗೆ ನೀರು ಬಿಸಿ ಮಾಡಲಾಗುತ್ತದೆ.. ಅದಕ್ಕೆ ಇನ್ ಸ್ಟಂಟ್ ಕಾಫಿ ಪುಡಿ ಹಾಗೂ ಮಶ್ರೂಮ್ ಪೌಡರ್ ಸೇರಿಸಲಾಗುತ್ತದೆ.. ಜೊತೆ ಹಾಲು ಹಾಗೂ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಸೇರಿಸಲಾಗುತ್ತದೆ.. ಆಗ ಮಶ್ರೂಮ್ ಕಾಫಿ ಕುಡಿಯಲು ರೆಡಿಯಾಗುತ್ತದೆ..
ಮಶ್ರೂಮ್ ಕಾಫಿಯಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿದೆ.. ಹೀಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದನ್ನು ಔಷಧವಾಗಿಯೂ ಬಳಸಲಾಗುತ್ತದೆ.. ಅಣಬೆಗಳಲ್ಲಿ ಫೈಬರ್ ಹೆಚ್ಚಾಗಿರುತ್ತದೆ.. ಇದರಿಂದಾಗಿ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.. ಈ ಅಣಬೆ ಕಾಫಿ ಕುಡಿಯುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ..
ಮಶ್ರೂಮ್ ಕಾಫಿಯ ಪ್ರಯೋಜನಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ಯಾವುದೇ ನಿಖರವಾದ ಅಧ್ಯಯನ ಲಭ್ಯವಿಲ್ಲದಿದ್ದರೂ, ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮುಂತಾದವರು ಯಾವುದೇ ಆರೋಗ್ಯ ಸಮಸ್ಯೆಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸಿದ ನಂತರವೇ ಅಣಬೆ ಕಾಫಿಯನ್ನು ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ..