HealthInternational

ಯೂಟ್ಯೂಬ್ ಮನೆ ಮದ್ದು ನಂಬಿ ಕೆಟ್ಟ ಕ್ಯಾನ್ಸರ್ ಪೀಡಿತ ಮಹಿಳೆ

ಯುಕೆ; ಇತ್ತೀಚೆಗೆ ಜನರಲ್ಲಿ ಸ್ವಯಂ ಚಿಕಿತ್ಸೆ ಹೆಚ್ಚಾಗಿದೆ.. ಏನಾದರೂ ಆರೋಗ್ಯ ಸಮಸ್ಯೆಯಾದರೆ, ಸಾಮಾಜಿಕ ಜಾಲತಾಣದಲ್ಲಿ ಯಾರೋ ಹಾಕಿದ ಮನೆಮದ್ದುಗಳನ್ನು ಜನ ನಂಬುತ್ತಿದ್ದಾರೆ.. ಹೀಗೆಯೇ ಯೂಟ್ಯೂಬ್ ವಿಡಿಯೋ ಒಂದರಲ್ಲಿ ಹೇಳಲಾದ ಮನೆಮದ್ದು ತೆಗೆದುಕೊಂಡು ಕ್ಯಾನ್ಸರ್ ಪೀಡಿತ ಮಹಿಳೆಯೊಬ್ಬರು ಮತ್ತಷ್ಟು ಆರೋಗ್ಯ ಹದಗೆಡಿಸಿಕೊಂಡಿದ್ದಾರೆ..

  ಸೋಷಿಯಲ್‌ ಮೀಡಿಯಾದಲ್ಲಿ ಜನಪ್ರಿಯ ವ್ಯಕ್ತಿಯೊಬ್ಬರು ಕ್ಯಾನ್ಸರ್ ಗೆ ಕ್ಯಾರೆಟ್ ಜ್ಯೂಸ್ ಕುಡಿಯುವಂತೆ ಹೇಳಿದ್ದರು.. ಇದನ್ನು ನಂಬಿದ ಯುನೈಟೆಡ್ ಕಿಂಗ್ ಡಮ್ ನ ಐರಿನಾ ಸ್ಟೊಯ್ನೋವಾ ಎಂಬ ಮಹಿಳೆ ಕ್ಯಾರೆಟ್ ಜ್ಯೂಸ್ ದಿನವೂ ಕುಡಿದಿದ್ದಾಳೆ. ಇದರಿಂದ ಆಕೆಯ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ.. ಆಕೆಯ ಜೀವಕ್ಕೇ ಕಂಟಕವಾಗಿದೆ ಎಂದು ಹೇಳಲಾಗುತ್ತಿದೆ..

 ಯುನೈಟೆಡ್ ಕಿಂಗ್‌ಡಮ್‌ನ ಐರಿನಾ ಸ್ಟೊಯ್ನೋವಾ 3 ವರ್ಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇವರು ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ.. ಇದರ ನಡುವೆ ಯೂಟ್ಯೂಬ್ ನಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ಅದನ್ನು ನಂಬಿ ಈಕೆ ಪ್ರತಿದಿನ‌ 13 ಕಪ್ ನಷ್ಟು ಕ್ಯಾರೆಟ್ ಜ್ಯೂಸ್ ಕುಡಿಯುತ್ತಾ ಬಂದಿದ್ದಾಳೆ. ಇದರಿಂದ ಆರೋಗ್ಯವಾಗುವ ಬದಲು ಆರೋಗ್ಯ ಹದಗೆಡುತ್ತಾ ಬಂದಿದೆ.. ವೈದ್ಯರ ಸಲಹೆ ಕೂಡಾ ಪಡೆಯದೇ ಈಕೆ ಕ್ಯಾರೆಟ್ ಜ್ಯೂಸ್ ಕುಡಿದಿದ್ದಾಳೆ.

ಇದರಿಂದಾಗಿ ಮಹಿಳೆಯ ಹೊಟ್ಟೆಯ ಕೆಳಭಾಗ, ಕಾಲುಗಳು ಮತ್ತು ಶ್ವಾಸಕೋಶಗಳಲ್ಲಿ ದ್ರವ ತುಂಬಿದೆ. ದೇಹದ ತುಂಬೆಲ್ಲಾ ಗಡ್ಡೆಗಳಾಗಿವೆ ಎಂದು ತಿಳಿದುಬಂದಿದೆ.

 

Share Post