ಪೊಲೀಸ್ ಇನ್ಸ್‌ಪೆಕ್ಟರ್ ಎಂದು ಹೇಳಿಕೊಂಡು ವಂಚಿಸುತ್ತಿದ್ದ ಬೆಸ್ಕಾಂ ಅಧಿಕಾರಿ ಅರೆಸ್ಟ್
ಬೆಂಗಳೂರು; ಬೆಸ್ಕಾಂ ಇಲಾಖೆ ಸಹಾಯಕ ಎಂಜಿನಿಯರ್ ಒಬ್ಬರು ಪೊಲೀಸ್ ಇನ್ಸ್‌ಪೆಕ್ಟರ್ ಎಂದು ಹೇಳಿಕೊಂಡು ಹಲವು ಕಡೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪೀಣ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.. ಮಲ್ಲೇಶ್ವರಂ ಬೆಸ್ಕಾಂ ಸಹಾಯಕ ಎಂಜಿನಿಯರ್ ಗಂಗಾಧರ್ ಎಂಬಾತನೇ ಬಂದಿತ ಆರೋಪಿಯಾಗಿದ್ದಾನೆ.
ಕೆಐಎಡಿಬಿಯಿಂದ ರೈತರಿಗೆ ಹಣ ಕೊಡಿಸುತ್ತೇನೆ ಎಂದು ಲಕ್ಷ ಲಕ್ಷ ಕಮೀಷನ್ ಪಡೆದ ಗಂಗಾಧರ್ ವಂಚನೆ ಮಾಡಿದ್ದ ಎಂದು ಹೇಳಲಾಗುತ್ತಿದೆ.. ಇದೇ ಗಂಗಾಧರ್ KA 09 MF 0656 ನಂಬರ್‌ನ ರೆನಾಲ್ಟ್ ಕ್ವಿಡ್ ಕಾರು ಬಳಸುತ್ತಿದ್ದು, ಅದಕ್ಕೆ ಅಕ್ರಮವಾಗಿ ಪೊಲೀಸ್ ಜಾಗೃತದಳದ ಬೋರ್ಡ್ ಅಳವಡಿಕೆ ಮಾಡಿದ್ದ ಎಂದು ತಿಳಿದುಬಂದಿದೆ..
ಈ ಬೋರ್ಡ್ ಅಳವಡಿಸಿದ್ದರಿಂದ ಹೆದ್ದಾರಿ ಟೋಲ್ ಕಟ್ಟುತ್ತಿರಲಿಲ್ಲ. ಇನ್ನು ಪ್ರವಾಸಿ ಸ್ಥಳದಲ್ಲಿ ವಿಐಪಿ ಗೌರವ ಸಿಗುತ್ತಿತ್ತು.. ಜೊತೆಗೆ ಯಾರಾದರೂ ಕೇಳಿದರೆ ಪೊಲೀಸ್ ಇನ್ಸ್‌ಪೆಕ್ಟರ್ ಐಡಿ ಕಾರ್ಡ್ ತೋರಿಸುತ್ತಿದ್ದ ಎಂದು ತಿಳಿದುಬಂದಿದೆ.. ಜೊತೆಗೆ ಬೆಸ್ಕಾಂ ಇಲಾಖೆಯಿಂದ ನೀಡಿದ್ದ ವಾಕಿಟಾಕಿಯನ್ನೂ ಗಂಗಾಧರ್ ದುರ್ಬಳಕೆ ಮಾಡಿಕೊಂಡಿದ್ದ ಎಂದು ಹೇಳಲಾಗುತ್ತಿದೆ..