National

ತ್ರಿವಳಿ ತಲಾಖ್‌ ನೀಡಿದ ಗಂಡ; ಬೇಸತ್ತು ಹಿಂದೂ ಧರ್ಮ ಸ್ವೀಕರಿಸಿದ ಮಹಿಳೆ!

ಉತ್ತರ ಪ್ರದೇಶ; ಉತ್ತರ ಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ತ್ರಿವಳಿ ತಲಾಖ್‌ ನೀಡಿದ್ದಾನೆ.. ಹಲವು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದರೂ ಸಣ್ಣದೊಂದು ಕಾರಣಕ್ಕೆ ಹೆಂಡತಿಗೆ ತಲಾಖ್‌ ಕೊಟ್ಟಿದ್ದಾನೆ.. ಇದರಿಂದ ಬೇಸತ್ತ ಮಹಿಳೆ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾಳೆ.. ಜೊತೆಗೆ ದೇವಾಲಯವೊಂದರಲ್ಲಿ ಹಿಂದೂ ಯುವಕನ ಜೊತೆ ಸಪ್ತಪದಿ ತುಳಿದಿದ್ದಾರೆ.. 

ರುಬೀನಾ ಎಂಬಾಕೆಯೇ ಸಪ್ತಪದಿ ತುಳಿದ ಮಹಿಳೆಯಾಗಿದ್ದಾಳೆ.. ಈಕೆ ಈಗ ತನ್ನ ಹೆಸರನ್ನು ಪ್ರೀತಿ ಎಂದು ಬದಲಿಸಿಕೊಂಡಿದ್ದಾಳೆ..  ಉತ್ತರಾಖಂಡ್‌ನ ಹಲ್ದ್ವಾನಿಯ ವ್ಯಕ್ತಿಯ ಜೊತೆ ರುಬೀನಾ ಪ್ರೀತಿಸಿ ಮದುವೆಯಾಗಿದ್ದಳು.. ಸುಮಾರು 9 ವರ್ಷಗಳಿಂದ ಸಂಸಾರ ನಡೆಸಿದ್ದರು.. ಆದ್ರೆ ಕೆಲ ವರ್ಷಗಳ ನಂತರ ರುಬೀನಾ ಪತಿ ಕ್ರೂರವಾಗಿ ವರ್ತಿಸಲು ಶುರು ಮಾಡಿದ್ದನಂತೆ.. ಸಣ್ಣ ಸಣ್ಣ ವಿಷಯಕ್ಕೂ ಜಗಳ ತೆಗೆದು ಹೊಡೆಯುತ್ತಿದ್ದನಂತೆ.. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಕೂಡಾ ಇದ್ದಾರೆ.. ಆದ್ರೆ ಯಾವಾಗಲೂ ಪತ್ನಿ ಜೊತೆ ಜಗಳ ತೆಗೆಯುತ್ತಿದ್ದ ಪತಿ, ವಾರದ ಹಿಂದೆ ತಲಾಖ್‌ ನೀಡಿದ್ದಾನೆ..

ಬಳಿಕ ಬರೇಲಿಯ ಹೊರವಲಯದಲ್ಲಿರುವ ನವಾಬ್‌ಗಂಜ್‌ನ ನಿವಾಸಿ ಪ್ರಮೋದ್‌ ಕಶ್ಯಪ್​​ ಜೊತೆ ರುಬೀನಾಗೆ ಲವ್‌ ಆಗಿದೆ.. ಇದಾದ ಮೇಲೆ ರುಬೀನಾ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ಪ್ರೀತಿ ಎಂದು ಹೆಸರು ಬದಲಿಸಿಕೊಂಡಿದ್ದಾಳೆ.. ಇಬ್ಬರೂ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ..

 

Share Post