BengaluruCrime

ಮನೆ ಮಾಲಕಿಯನ್ನೇ ಕೊಲೆ ಮಾಡಿದ್ದ ಶೋಕಿಲಾಲ ಯುವತಿ ಅರೆಸ್ಟ್

ಬೆಂಗಳೂರು; ಶೋಕಿಗಾಗಿ ಸಾಲ‌ ಮಾಡಿ, ಕೊನೆಗೆ ವಾಸವಿದ್ದ ಮನೆಯ ಮಾಲಕಿಯನ್ನೇ ಕೊಲೆ ಮಾಡಿದ್ದ ಯುವತಿ ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಮೇ 10 ರಂದು ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ದಿವ್ಯಾ ಎಂಬ ಮನೆ ಮಾಲಕಿಯ ಕೊಲೆಯಾಗಿತ್ತು. ಇಂದು ಕೊಲೆಗಾತಿಯನ್ನು ಅರೆಸ್ಟ್ ಮಾಡಲಾಗಿದೆ.

  ದಿವ್ಯಾ ಅವರ ಮನೆಯಲ್ಲಿ ಮೋನಿಯಾ ಎಂಬ 24 ವರ್ಷದ ಯುವತಿ ಬಾಡಿಗೆಗಿದ್ದಳು. ಶೋಕಿ ಜೀವನ ನಡೆಸುತ್ತಿದ್ದ ಮೋನಿಕಾ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಳು. ಕೋಲಾರ ಮೂಲದವಳಾದ ಮೋನಿಕಾ, ಕಂಪನಿಯೊಂದರಲ್ಲಿ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದಳು.. ಈಕೆಗೆ ಪ್ರಿಯಕರ ಕೂಡಾ ಇದ್ದು ಆತನನ್ನು ಗಂಡ ಎಂದೇ ಪರಿಚಯಿಸಿದ್ದಳು. ಶೋಕಿಗಾಗಿ ಸಾಕಷ್ಟು ಸಾಲ‌ ಮಾಡಿದ್ದ ಮೋನಿಕಾ, ಪ್ರಿಯಕರನಿಗೆ ವಾಹನವೊಂದು ಕೊಡಿಸಲು ಕೂಡಾ ಸಾಲ ಮಾಡಿದ್ದಳು.

  ಸಾಲಗಾರರ ಕಾಟ ಹೆಚ್ಚಾದಾಗ ಮನೆ ಮಾಲಕಿ ದಿವ್ಯಾ ಮೈಮೇಲಿದ್ದ ಚಿನ್ನದ ಮೇಲೆ ಆಕೆಗೆ ಕಣ್ಣು ಬಿದ್ದಿದೆ. ದಿವ್ಯಾ ಒಬ್ಬರೇ ಇರುವುದನ್ನು ನೋಡಿಕೊಂಡು ಆರೋಪಿ ಕತ್ತು ಹಿಸುಕಿ ದಿವ್ಯಾಳನ್ನು ಕೊಲೆ ಮಾಡಿ ಚಿನ್ನಾಭರಣ ಕದ್ದೊಯ್ದಿದ್ದಳು.

 

Share Post