LifestyleNational

ಲವ್‌ ಬ್ರೇಕ್‌ ಅಪ್‌ ಆಗಿದ್ದಕ್ಕೆ ಕುಟುಂಬದೊಂದಿಗೆ ಸಂಭ್ರಮಿಸಿದ ಯುವತಿ!

ಲವರ್‌ ಕೈಕೊಟ್ರೆ ಅದೇ ನೋವಲ್ಲಿ ಜೀವನವಿಡೀ ಕೊರಗುವವರಿದ್ದಾರೆ.. ಆತ್ಮಹತ್ಯೆ ಮಾಡಿಕೊಳ್ಳುವವರಿದ್ದಾರೆ.. ದಾಳಿ ಮಾಡಿ ಕೊಲೆ ಮಾಡುವವರೂ ಇದ್ದಾರೆ.. ಆದ್ರೆ ಇಲ್ಲೊಬ್ಬಳು ಯುವತಿ ಲವರ್‌ ಬ್ರೇಕ್‌ ಅಪ್‌ ಮಾಡಿಕೊಂಡು ಸಂಭ್ರಮಿಸಿದ್ದಾಳೆ.. ಮನೆಯವರ ಜೊತೆ ಈ ವಿಚಾರ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾಳೆ.. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..

ಈ ಕುರಿತ ವಿಡಿಯೋವನ್ನು @FadeHubb ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ  “ಕುಟುಂಬದೊಂದಿಗೆ ಬ್ರೇಕ್‌ ಅಪ್‌ ಸಂಭ್ರಮಾಚರಣೆ” ಎಂಬ ಟ್ಯಾಗ್‌ಲೈನ್‌  ನೀಡಲಾಗಿದೆ..

ವೈರಲ್‌ ವಿಡಿಯೋದಲ್ಲಿ ಯುವತಿಯೊಬ್ಬಳು ಬ್ರೇಕ್‌ಅಪ್‌ ಮೆಸೇಜ್‌ ಅನ್ನು ತನ್ನ ಬಾಯ್‌ಫ್ರೆಂಡ್‌ಗೆ ಕಳುಹಿಸಿದ್ದಾಳೆ.. ನಂತರ ತನ್ನ ಕುಟುಂಬ ಸದಸ್ಯರ ಜೊತೆ ಸೇರಿ ಚಪ್ಪಾಳೆ ತಟ್ಟುತ್ತಾ ಎಲ್ಲೂ ಖುಷಿಯಿಂದ ಆಚರಿಸಿದ್ದಾರೆ..

 

Share Post