Politics

ಶಾಸಕರಲ್ಲಿನ ಅಸಮಾಧಾನ ಒಪ್ಪಿಕೊಂಡ ಸಚಿವ ಸತೀಶ್‌ ಜಾರಕಿಹೊಳಿ

ಬೆಂಗಳೂರು; ಲೋಕಸಭಾ ಚುನಾವಣೆ ನಂತರ ಕರ್ನಾಟಕದ ಸರ್ಕಾರ ಪತನವಾಗಲಿದೆ.. ಮಹಾರಾಷ್ಟ್ರದಂತೆಯೇ ಕರ್ನಾಟಕದಲ್ಲೂ ಆಪರೇಷನ್‌ ನಡೆಯುತ್ತದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಹೇಳಿದ್ದರು.. ಹೀಗಿರುವಾಗಲೇ ಸಚಿವ ಸತೀಶ್‌ ಜಾರಕಿಹೊಳಿ ನೀಡಿರುವ ಹೇಳಿಕೆ ಕುತೂಹಲ ಕೆರಳಿಸಿದೆ..

ಸಚಿವ ಸತೀಶ್‌ ಜಾರಕಿಹೊಳಿಯವರು ಇಂದು ಗೃಹಸಚಿವ ಪರಮೇಶ್ವರ್‌ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.. ಅನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕರ ಅಸಮಾಧಾನ ಇದ್ದೇ ಇರುತ್ತದೆ.. ಆಡಳಿತ ಪಕ್ಷ ಅಂದ ಮೇಲೆ ಅಸಮಾಧಾನ ಸಹಜ ಎಂದು ಹೇಳಿದರು..

ಪರಮೇಶ್ವರ್‌ ಭೇಟಿ ಬಗ್ಗೆ ಮಾತನಾಡಿದ ಅವರು, ಎಷ್ಟು ಸೀಟು ಗೆಲ್ಲುತ್ತೇವೆ ಎಂಬುದರ ಬಗ್ಗೆ ಚರ್ಚೆ ನಡೆಸಲು ಭೆಟಿಯಾಗಿದ್ದೇನೆ.. ಇದರಲ್ಲೇನೂ ವಿಶೇಷತೆ ಇಲ್ಲ ಎಂದು ಹೇಳಿದ್ದಾರೆ.. ಚುನಾವಣೆ ವೇಳೆ ಡಿಸಿಎಂ ಕೂಗು ಇತ್ತು ಜಿನ.. ಚುನಾವಣೆಗೆ ಅನುಕೂಲ ಆಗಲಿ ಎಂದು ಆ ಕೂಗು ಎದ್ದಿತ್ತು.. ಈಗ ಆ ಕೂಗು ಇಲ್ಲ.. ಸರ್ಕಾರ ಬೀಳಿಸಲು ಈ ಕೂಗು ಎಂದು ಹೇಳುತ್ತಾರೆ.. ಆದ್ರೆ ಅದು ಆಗುತ್ತಾ ಎಂದು ಪ್ರಶ್ನಿಸಿದ ಸತೀಶ್‌ ಜಾರಕಿಹೊಳಿ,  ಸುಮ್ಮನೆ ಸರ್ಕಾರ ಬೀಳುತ್ತೆ ಅಂತಾರೆ. ಅದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.. ಹೀಗೆ ಹೇಳುತ್ತಲೇ ಶಾಸಕರಲ್ಲಿ ಅಸಮಾಧಾನ ಇರುವುದನ್ನೂ ಒಪ್ಪಿಕೊಂಡಿದ್ದಾರೆ..

 

Share Post