BengaluruCrime

ವಕೀಲೆ ಚೈತ್ರಾ ಗೌಡ ಸಾವಿನ ರಹಸ್ಯ ಅವರ ಮೊಬೈಲ್‌ನಲ್ಲಿ ಅಡಗಿದೆಯಾ..?; ಇದ್ದಕ್ಕಿದ್ದಂತೆ ಅಲ್ಲೇನು ನಡೀತು..?

ಬೆಂಗಳೂರು; ಮೊನ್ನೆ ಅಂದರೆ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ವಕೀಲೆ ಹಾಗೂ ರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದ ಅಸ್ಟಿಸೆಂಟ್ ಕಮೀಷನರ್ ಶಿವಕುಮಾರ್‌ ಪತ್ನಿ ಚೈತ್ರಾ ಗೌಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.. ಇದಕ್ಕೂ ಮೊದಲು ಆಕೆ ತನ್ನ ಪತಿಯ ಜತೆ ಮೊಬೈಲ್‌ನಲ್ಲಿ ಮಾತನಾಡಿದ್ದಳು.. ಜೊತೆಗೆ ಡೆತ್‌ ನೋಟ್‌ ಕೂಡಾ ಬರೆದಿಟ್ಟಿದ್ದಾರೆ.. ಹೀಗಾಗಿ ಚೈತ್ರಾ ಸಾವಿನ ರಹಸ್ಯ ಅವರ ಮೊಬೈಲ್‌ನಲ್ಲಿ ಅಡಗಿದೆ ಎಂದು ಹೇಳಲಾಗುತ್ತಿದೆ.. ಮೊಬೈಲ್‌ ಕಾಲ್‌ ಡಿಟೇಲ್ಸ್‌ ಹಾಗೂ ಗಂಡನ ಜೊತೆ ಏನು ಮಾತನಾಡಿದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ..

ಬೆಂಗಳೂರಿನ ಅಣ್ಣಯ್ಯಪ್ಪ ಲೇಔಟ್​ನಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಚೈತ್ರಾಗೌಡ ಹಾಗೂ ಪತಿ ಶಿವಕುಮಾರ್‌ ವಾಸವಿದ್ದರು.. ಚೈತ್ರಾ ಗೌಡ ಹೈಕೋರ್ಟ್‌ ಅಡ್ವೊಕೇಟ್‌ ಆಗಿದ್ದರೆ, ಪತಿ ಶಿವಕುಮಾರ್‌ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದಲ್ಲಿ ಅಸ್ಟಿಸೆಂಟ್ ಕಮೀಷನರ್ ಆಗಿದ್ದಾರೆ.. ಇಬ್ಬರಿಗೂ ಒಂದು ಗಂಡು ಮಗುವಿದೆ.. ಆದ್ರೆ ಅದೇನಾಯ್ತೋ ಏನೋ ಶನಿವಾರ ಬೆಳಗ್ಗೆ ಚೈತ್ರಾಗೌಡ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂಜಯ್‌ನಗರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.. ಪೊಲೀಸರು ಚೈತ್ರಾ ಮೊಬೈಲ್‌ ವಶಪಡಿಸಿಕೊಂಡಿದ್ದು, ಆಕೆಯ ಕಾಲ್‌ ಡಿಟೇಲ್ಸ್‌, ವಾಟ್ಸ್‌ ಆಪ್‌ ಮೆಸೇಜ್‌ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.. ಮೇಲ್ನೋಟಕ್ಕೆ ಆತ್ಮಹತ್ಯೆ ಎಂಬಂತೆ ಕಂಡುಬಂದರೂ ಇದರ ಹಿಂದಿನ ಕಾರಣದ ಬಗ್ಗೆ ತನಿಖೆ ತೀವ್ರಗೊಂಡಿದೆ..

 

Share Post