Health

ಮಹಿಳೆಯ ಮೂಗಿನಲ್ಲಿ 100ಕ್ಕೂ ಹೆಚ್ಚು ಜೀವಂತ ಕೀಟಗಳು!

ಒಮ್ಮೊಮ್ಮೆ ಆಪರೇಷನ್‌ ಥಿಯೇಟರ್‌ನಲ್ಲಿ ವೈದ್ಯರನ್ನೇ ಬೆಚ್ಚಿಬೀಳಿಸುವ ಸಂಗತಿಗಳು ಹೊರಬರುತ್ತವೆ.. ಅಂಥಹದ್ದೇ ಒಂದು ಸಂಗತಿ ಇದು.. ಥಾಯ್ಲೆಂಡ್‌ನಲ್ಲಿ 59ವರ್ಷದ ಮಹಿಳೆಯೊಬ್ಬರು ಮೂಗಿನ ಸಮಸ್ಯೆಯಿಂದ ಬಳಲುತ್ತಿದ್ದಳು.. ಶೀತ ಇರಬಹುದು ಎಂದೇ ಆಕೆ ಭಾವಿಸಿದ್ದಳು.. ಆದ್ರೆ, ಕೆಲ ದಿನಗಳ ನಂತರ ಸಮಸ್ಯೆ ಹೆಚ್ಚಾಗಿತ್ತು.. ಹೀಗಾಗಿ, ವೈದ್ಯರ ಬಳಿ ಬಂದಿದ್ದಾಳೆ.. ಈ ವೇಳೆ ಪರೀಕ್ಷೆ ಮಾಡಿದ ವೈದ್ಯರಿಗೆ ಅಚ್ಚರಿಯಾಗಿದೆ.. ಯಾಕಂದ್ರೆ ಆಕೆಯ ಮೂಗಿನಲ್ಲಿ 100ಕ್ಕೂ ಹೆಚ್ಚು ಜೀವಂತ ಕೀಟಗಳು ಪತ್ತೆಯಾಗಿವೆ..

ಚಿಯಾಂಗ್ ಮಾಯ್ ಎಂಬ ಥೈಲ್ಯಾಂಡ್​​ನ 59 ವರ್ಷದ ಮಹಿಳೆಗೆ  ಕೆಲ ದಿನಗಳಿಂದ ಪದೇ ಪದೇ ಮೂಗು ಕಟ್ಟುತ್ತಿತ್ತು.. ಉಸಿರಾಡುವುದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು..  ರಕ್ತಸ್ರಾವ ಹಾಗೂ ನೋವು ವಿಪರೀತವಾಗಿತ್ತು.. ತಡೆಯಲಾಗದೇ ನಾಕಾರ್ನ್‌ಪಿಂಗ್ ಆಸ್ಪತ್ರೆಗೆ ಮಹಿಳೆ ದಾಖಲಾಗಿದ್ದರು.. ಡಾ.ಪಾಟಿಮೋನ್ ತಂಚೈಖಾನ್ ಅವರು ಮಹಿಳೆಯ ಮೂಗಿನ  ಎಂಡೋಸ್ಕೋಪಿ ಮಾಡಿದ್ದಾರೆ.. ಈ ವೇಳೆ ಮೂಗಿನಲ್ಲಿ ಜೀವಂತ ಕೀಟಗಳಿರುವುದು ಪತ್ತೆಯಾಗಿದೆ..

ತಕ್ಷಣ ಮಹಿಳೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು, ಚಿಕಿತ್ಸೆ ಪ್ರಾರಂಭಿಸಲಾಯಿತು ಮತ್ತು ಎಲ್ಲಾ ಜೀವಂತ ಕೀಟಗಳನ್ನು ತೆಗೆದುಹಾಕಲಾಯಿತು. ಇದೀಗ ಈ ಮಹಿಳೆ ಸಾಕಷ್ಟು ಗುಣಮುಖರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.. ಸ್ವಲ್ಪ ದಿನ ಹಾಗೆಯೇ ಬಿಟ್ಟಿದ್ದರೆ ಆ ಕೀಟಗಳು ಮೆದಳು ಸೇರುತ್ತಿದ್ದವು ಎಂದು ವೈದ್ಯರು ಹೇಳಿದ್ದಾರೆ..

Share Post