ಕುಮಾರಸ್ವಾಮಿ ವಿರುದ್ಧವೇ ಎಸ್ಐಟಿಗೆ ದೂರು ಕೊಟ್ಟ ಕಾಂಗ್ರೆಸ್
ಬೆಂಗಳೂರು; ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧವೇ ಎಸ್ಐಟಿ ದೂರು ನೀಡಿದ್ದಾರೆ.. ಸಂತ್ರಸ್ತೆಯರಿಗೆ ಬೆದರಿಕೆ ಹಾಕಿ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿ ದೂರು ನೀಡಿದ್ದಾರೆ.. ಕುಮಾರಸ್ವಾಮಿಯವರು ಸಂತ್ರಸ್ತೆಯರ ಸ್ಥಳವನ್ನು ಬಹಿರಂಗ ಮಾಡುತ್ತಿದ್ದಾರೆ.. ಇದರಿಂದಾಗಿ ಸಂತ್ರಸ್ತೆಯರು ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ..
ಪ್ರಕರಣದಲ್ಲಿ ಭಾಗಿಯಾದವರನ್ನು ಪರೋಕ್ಷ ರಕ್ಷಣೆ ಮಾಡುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದ್ದಾರೆ.. ಪ್ರಕರಣದ ಕುರಿತು ಹೆಚ್ಚಿನ ವಿವರಗಳು ಕುಮಾರಸ್ವಾಮಿಯವರ ಬಳಿ ಇವೆ ಎಂದಿರುವ ಕಾಂಗ್ರೆಸ್ ನಾಯಕರು, ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಎಸ್ಐಟಿಯನ್ನು ಕಾಂಗ್ರೆಸ್ ನಾಐಕರು ಒತ್ತಾಯ ಮಾಡಿದ್ದಾರೆ.. ಬಿಜೆಪಿ ಮುಖಂಡ ದೇವರಾಜೇಗೌಡ ಅವರು ತಮ್ಮ ಪಕ್ಷದ ನಾಯಕರಿಗೆ ವಿವರಗಳನ್ನು ರವಾನಿಸಿದ್ದಾರೆ. ಆದರೆ, ಅವರು ಪೊಲೀಸರನ್ನು ಏಕೆ ಸಂಪರ್ಕಿಸಲಿಲ್ಲ? ಎಂದೂ ಪ್ರಶ್ನೆ ಮಾಡಲಾಗಿದೆ..