ಬಿಸಿಲಿಗೆ ಹೋಗುವ ಮುನ್ನ ಎಚ್ಚರ; ಬಿಸಿಲಲ್ಲಿ ಕಾರು ನಿಲ್ಲಿಸಿ ಕೂತರೆ ಡೇಂಜರ್!
ಬಿಸಿಲು ಹೆಚ್ಚಾಗುತ್ತಿದೆ.. ದೊಡ್ಡವರಿಗೇ ಬಿಸಿಲಲ್ಲಿ ಇರೋದಕ್ಕೆ ಆಗುತ್ತಿಲ್ಲ.. ಇನ್ನು ಮಕ್ಕಳು ಬಿಸಿಲಿಗೆ ಹೋದರಂತೂ ಸಮಸ್ಯೆ ಕಟ್ಟಿಟ್ಟ ಬುತ್ತಿ.. ಈಗ ಶಾಲೆಗಳಿಗೆ ರಜೆ ಇದೆ.. ಅಲ್ಲಿ ಇಲ್ಲಿ ಅಂತ ಮಕ್ಕಳನ್ನು ಪೋಷಕರು ಕರೆದುಕೊಂಡು ಹೋಗುತ್ತಿರುತ್ತಾರೆ.. ಈ ವೇಳೆ ಎಚ್ಚರಿಕೆಯಿಂದ ಇರುವುದು ಅಗತ್ಯ.. ಯಾಕಂದ್ರೆ, ಈ ಬಾರಿ ವಿಪರೀತ ಬಿಸಿಲಿದೆ..
ಇದನ್ನೂ ಓದಿ; ಮಹಿಳಾ ಸಮ್ಮಾನ್; ಅತಿ ಹೆಚ್ಚು ಬಡ್ಡಿ ಸಿಗುವ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು..?
ಬಿಸಿಲಿಗೆ ಹೋಗುವಾಗ ಮುಂಜಾಗ್ರತೆ ಅತ್ಯಗತ್ಯ;
ಬೆಳಗ್ಗೆ 10 ಗಂಟೆಯ ನಂತರ ಮನೆಯಿಂದ ಹೊರಗೆ ಕಾಲಿಡುವುದಕ್ಕೂ ಆಗುತ್ತಿಲ್ಲ.. ತಾಪಮಾನ ಹೆಚ್ಚಿದ್ದರಿಂದ ಕಾಯಿಲೆಗಳು ಹೆಚ್ಚಾಗುತ್ತಿವೆ.. ಹೀಗಾಗಿ ಅನಗತ್ಯವಾಗಿ ತಿರುಗಾಟು ಮಾಡುವುದನ್ನು ಕಡಿಮೆ ಮಾಡಬೇಕು.. ಒಂದು ವೇಳೆ ಹೋಗಲೇಬೇಕು ಎಂದಾಗ ಆದಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಿ.. ನೀರಿನ ಬಾಟೆಲ್ಗಳನ್ನು ತೆಗೆದುಕೊಂಡು ಹೋಗಿ.. ಬಿಸಿಲಲ್ಲಿ ತಿರುಗಾಡುವಾಗ ಕೊಡೆ ಹಿಡಿಯುವುದನ್ನು ಮರೆಯಬೇಡಿ, ಆದಷ್ಟು ತೆಳುವಾದ ಹಾಗೂ ಕಾಟನ್ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು..
ಇದನ್ನೂ ಓದಿ; ಮೇಷರಾಶಿಯಲ್ಲಿ ಗುರು-ಶುಕ್ರರ ಸಂಗಮ; ದಿಢೀರ್ ಧನಾಗಮ ಪಕ್ಕಾ..?
ಮಕ್ಕಳು, ವೃದ್ಧರ ಬಗ್ಗೆ ಹೆಚ್ಚು ಗಮನವಿರಲಿ;
ಮಕ್ಕಳಿಗೆ ಈ ರಜೆಗಳಿವೆ.. ಹೀಗಾಗಿ ಮಕ್ಕಳು ಟ್ರಿಪ್ಗೆ ಹೋಗೋಣ ಎಂದು ಹಠ ಹಿಡಿಯುತ್ತಿರುತ್ತಾರೆ.. ಒಂದು ವೇಳೆ ಅವರನ್ನು ಹೊರಗೆ ಕರೆದುಕೊಂಡು ಹೋದರೂ ಆದಷ್ಟು ಕಾಡಿನ ಪ್ರದೇಶಕ್ಕೆ, ಕೊಂಚ ನೆರಳಿರುವ ಪ್ರದೇಶಗಳಿಗೆ ಕರೆದುಕೊಂಡು ಹೋಗಿ, ಬೀಚ್, ಮರಳುಗಾಡು ಮುಂತಾದ ಅತಿ ಹೆಚ್ಚು ಬಿಸಿಲಿರುವ ಪ್ರದೇಶಗಳಿಗೆ ಕರೆದುಕೊಂಡು ಹೋಗಬೇಡಿ..
ಇನ್ನು ಯಾವಾಗಲೂ ನೀರು ನಿಮ್ಮ ಜೊತೆಗಿರಲಿ.. ಮಕ್ಕಳು ಬೇಡ ಎಂದರೂ ಆಗಾಗಿ ನೀರು ಕುಡಿಸುತ್ತಿರಿ.. ಇನ್ನು ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ಮಾತ್ರ ತಿರುಗಾಡಲು ಹೋಗುವುದು ಒಳ್ಳೆಯದು.. ಹೊರಗಡೆ ಇರುವಾಗ ಮಕ್ಕಳಿಗೆ ನೀರಿನಂಶ ಹೆಚ್ಚಿರುವ ಆಹಾರಗಳನ್ನೇ ಹೆಚ್ಚಾಗಿ ತಿನ್ನಿ.. ಜ್ಯೂಸ್ಗಳನ್ನು ಕೂಡಾ ಕುಡಿಸುವುದು ಒಳ್ಳೆಯದು.. ಇನ್ನು ವೃದ್ಧರಿಗೆ ಕೂಡಾ ಬಿಸಿಲಿನಿಂದ ಸಮಸ್ಯೆಯಾಗುತ್ತದೆ.. ಹೀಗಾಗಿ ವೃದ್ಧರನ್ನು ಹೊರಗೆ ಕರೆದುಕೊಂಡು ಹೋಗುವಾಗ ಆದಷ್ಟು ಮುಂಜಾಗ್ರತೆ ವಹಿಸುವುದು ಒಳ್ಳೆಯದು..
ಇದನ್ನೂ ಓದಿ; ಸಿಎಂ ಸಿದ್ದರಾಮಯ್ಯ ಅವರಿಗೆ ಫ್ರೀ ಟಿಕೆಟ್ ಹಾರ ಅರ್ಪಣೆ
ಬಿಸಿಲು ನಿರ್ಲಕ್ಷಿಸಿದರೆ ಏನಾಗುತ್ತದೆ..?
ಬಿಸಿಲಿನಲ್ಲಿ ಓಡಾಡುವುದರಿಂದ ತಲೆನೋವು ಶುರುವಾಗುತ್ತದೆ.. ತಲೆ ತಿರುಗುವಿಕೆ, ಸ್ನಾಯು ಸೆಳೆತ ಹೆಚ್ಚಾಗುತ್ತದೆ. ಹೃದಯ ಬಡಿತ ಹೆಚ್ಚಾಗುವುದು, ವಾಕರಿಕೆ ಅಥವಾ ವಾಂತಿ ಬರುವುದು, ರಕ್ತದೊತ್ತಡ ಕಡಿಮೆಯಾಗುವುದು, ಪ್ರಜ್ಞೆ ತಪ್ಪುವುದು ಮುಂತಾದುವುದು ನಡೆಯುತ್ತದೆ.. ಹೀಗಾಗಿ ಆದಷ್ಟು ಬಿಸಿಲಿನಿಂದ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು..
ಇದನ್ನೂ ಓದಿ; ಬಂಡಾಯ ಸ್ಪರ್ಧೆ ಹಿನ್ನೆಲೆ; ಈಶ್ವರಪ್ಪ ಬಿಜೆಪಿಯಿಂದ ಉಚ್ಛಾಟನೆ
ಬಿಸಿಲಿನಲ್ಲಿ ಕಾರು ನಿಲ್ಲಿಸಿ ಅದರಲ್ಲಿ ಕೂರಬೇಡಿ;
ಇತ್ತೀಚೆಗೆ ಎಲ್ಲರ ಬಳಿ ವಾಹನಗಳಿವೆ.. ಎಲ್ಲಿ ಹೋದರೂ ಕಾರಿನಲ್ಲೇ ಹೋಗುತ್ತಾರೆ.. ಆದ್ರೆ ಕಾರುಗಳನ್ನು ಪಾರ್ಕ್ ಮಾಡೋದಕ್ಕೆ ಜಾಗವಿರೋದಿಲ್ಲ… ಆಗ ಬಿಸಿಲಿನಲ್ಲೇ ಪಾರ್ಕ್ ಮಾಡಲಾಗಿರುತ್ತದೆ.. ಕೆಲವೊಮ್ಮೆ ಬಿಸಿಲಲ್ಲಿ ನಿಲ್ಲಿಸಿದ ಕಾರಿನಲ್ಲೇ ಮಕ್ಕಳು, ವಯೋವೃದ್ಧರನ್ನು ಕೂರಿಸಲಾಗಿರುತ್ತದೆ.. ಹಾಗೆ ಮಾಡಿದರೆ ಕಾರಿನಲ್ಲಿ ಹಬೆ ಹೆಚ್ಚಾಗಿರುತ್ತದೆ.. ಇದರಿಂದ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ.. ಹೀಗಾಗಿ ಆದಷ್ಟು ಮರದ ಕೆಳಗೆ ಕಾರುಗಳನ್ನು ನಿಲ್ಲಿಸಿ..