HealthInternational

ಒಂದೇ ಬಾರಿಗೆ 6 ಮಕ್ಕಳನ್ನು ಹೆತ್ತ ಮಹಾತಾಯಿ!

ಪಾಕಿಸ್ತಾನ; ಮಹಾತಾಯಿಯೊಬ್ಬಳು ಒಂದೇ ಬಾರಿಗೆ 6 ಮಕ್ಕಳನ್ನು ಹೆತ್ತಿದ್ದು, ಕುಟುಂಬದವರು ಫುಲ್ ಖುಷ್ ಆಗಿದ್ದಾರೆ. ಪಾಕಿಸ್ತಾನದ ರಾವಲ್ಪಿಂಡಿ ಆಸ್ಪತ್ರೆಯಲ್ಲಿ ಮಹಿಳೆ ಆರು‌‌ ಮಕ್ಕಳಿಗೆ ಜನ್ಮ ನೀಡಿದ್ದಾಳೆ.. ಇದರಲ್ಲಿ 4 ಗಂಡು‌ಹಾಗೂ 2 ಹೆಣ್ಣು ಮಕ್ಕಳು ಸೇರಿದ್ದಾರೆ.

 27 ವರ್ಷದ ಜೀನತ್ ವಹೀದ್ ಎಂಬುವವರೇ 6 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ. ಎಲ್ಲಾ‌ ಮಕ್ಕಳೂ ಆರೋಗ್ಯವಾಗಿವೆ. ಆದರೆ ಎಲ್ಲಾ ಮಕ್ಕಳೂ ಕಡಿಮೆ‌ ತೂಕ ಹೊಂದಿವೆ. ಹೀಗಾಗಿ ಎಲ್ಲಾ ಶಿಶುಗಳನ್ನೂ ಆಸ್ಪತ್ರೆಯ ಇನ್ಕ್ಯುಬೇಟರ್‌ಗಳಲ್ಲಿ ಇರಿಸಲಾಗಿದೆ.

  ತಾಯಿ ಕೂಡಾ ಆರೋಗ್ಯವಾಗಿದ್ದಾರೆ.. ರಾವಲ್ಪಿಂಡಿಯ ಹಾಜಿರಾ ಕಾಲೋನಿಯ ನಿವಾಸಿ ಮೊಹಮ್ಮದ್ ವಹೀದ್ ಪತ್ನಿ ಜೀನತ್ ವಹೀದ್ ಎಂದು ತಿಳಿದುಬಂದಿದೆ.. ಇದೊಂದು ಮೆಡಿಕಲ್‌ ಮಿರಾಕಲ್ ಎಂದೇ ಕರೆಯಲಾಗುತ್ತಿದೆ.

 

Share Post