Politics

ಇದು ಪುಷ್ಪ-2 ಅಲ್ಲ, ಬಾಜ್ಪ-2; ಮೋದಿ ಪೋಸ್ಟರ್‌ ಫುಲ್‌ ವೈರಲ್‌

ಲೋಕಸಭಾ ಚುನಾವಣೆ ಕಾವು ಜೋರಾಗುತ್ತಿದೆ.. ಎಲ್ಲೆಡೆ ಪ್ರಚಾರದ ಅಬ್ಬರ ನಡೆಯುತ್ತಿದೆ.. ಇತ್ತ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಬಿಡುವಿಲ್ಲದೆ ಸುತ್ತಾಟ ನಡೆಸುತ್ತಿದ್ದಾರೆ.. ಬಿಜೆಪಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.. ಇದರ ನಡುವೆ ಅವರ ಅಭಿಮಾನಿಗಳು ಮೋದಿ ಫೋಟೋಗೆ ವಿಶೇಷ ಟಚ್‌ ನೀಡಿದ್ದಾರೆ..

ತೆಲುಗಿನ ಸ್ಟಾರ್‌ ನಟ ಅಲ್ಲು ಅರ್ಜುನ್‌ ಅವರ ನಟನೆ ಪುಷ್ಪ -೨ ಚಿತ್ರದ ಪೋಸ್ಟರ್‌ ಒಂದು ಇತ್ತೀಚೆಗೆ ರಿಲೀಸ್‌ ಆಗಿತ್ತು. ಅದನ್ನೇ ಬಳಸಿಕೊಂಡಿರುವ ಮೋದಿ ಅಭಿಮಾನಿಗಳು ಅದೇ ರೀತಿ ಮೋದಿಯವರನ್ನು ಚಿತ್ರಿಸಿದ್ದಾರೆ.. ಪುಷ್ಪ-೨ ಪೋಸ್ಟರ್‌ನಲ್ಲಿದ್ದಂತೆ ಮೋದಿಯವರನ್ನು ಚಿತ್ರಿಸಲಾಗಿದ್ದು, ಆ ಪೋಸ್ಟರ್‌ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ..

ಅಲ್ಲು ಅರ್ಜುನ್‌ ಚಿತ್ರಕ್ಕೆ ಮೋದಿ ಮುಖ ಅಂಟಿಸಿ ಹೊಸ ಪೋಸ್ಟರ್‌ ತಯಾರು ಮಾಡಲಾಗಿದೆ.. ಎಲ್ಲೆಡೆ ಸಾಕಷ್ಟು ವೈರಲ್‌ ಆಗುತ್ತಿದೆ..

 

Share Post