ಮತದಾನ ಮಾಡಿ ಪ್ರಾಣ ಬಿಟ್ಟ 83ರ ಅಜ್ಜಿ!
ಉಡುಪಿ; ಲೋಕಸಭಾ ಚುನಾವಣೆಯಲ್ಲಿ ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ.. ಹೀಗಾಗಿ ಕಳೆದ ಕೆಲ ದಿನಗಳಿಂದ ಅಧಿಕಾರಿಗಳು ಮನೆಗಳಿಗೆ ಹೋಗಿ ಹಿರಿಯ ನಾಗರಿಕರಿಂದ ಮತ ಹಾಕಿಸುತ್ತಿದ್ದಾರೆ.. ಅದೇ ರೀತಿ ಉಡುಪಿಯ ವೃದ್ಧೆಯೊಬ್ಬರು ಮತ ಚಲಾವಣೆ ಮಾಡಿದ್ದು, ಅನಂತರ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾರೆ..
ಇದನ್ನೂ ಓದಿ; ವೋಟ್ ಕೊಟ್ರೆ ನೀರು, ಹಕ್ಕುಪತ್ರ ಎಂದ ಡಿಕೆಶಿ; ಕೊತ್ವಾಲ್ ಬ್ರದರ್ ಗೂಂಡಾಗಿರಿ ಎಂದ ಬಿಜೆಪಿ!
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲ್ಲೂಕಿನ ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದಲ್ಲಿ ಈ ಘಟನೆ ನಡೆದಿದೆ. 83 ವರ್ಷದ ಪಿ.ಯಶೋಧಾ ನಾರಾಯಣ ಉಪಾಧ್ಯ ಎಂಬುವವರೇ ಸಾವನ್ನಪ್ಪಿದ ವೃದ್ಧೆ. ಇವರು ಚಡಗರ ಅಗ್ರಹಾರದ ನಿವಾಸಿಯಾಗಿರುವ ನಿವೃತ್ತ ಗ್ರಾಮ ಲೆಕ್ಕಿಗ ದಿ.ನಾರಾಯಣ ಉಪಾಧ್ಯ ಅವರು ಪತ್ನಿಯಾಗಿದ್ದಾರೆ.
ಇಂದು ಬೆಳಗ್ಗೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು.. ಆದ್ರೆ ಚುನಾವಣಾ ಸಿಬ್ಬಂದಿ ಮನೆಗೆ ಬರುತ್ತಿರುವುದನ್ನು ತಿಳಿದಿದ್ದ ವೃದ್ಧೆ ಮೊದಲು ಮತ ಚಲಾಯಿಸುತ್ತೇನೆ. ಅನಂತರ ಆಸ್ಪತ್ರೆಗೆ ಹೋಗೋಣ ಎಂದು ಹೇಳಿದ್ದರು.. ಅದರಂತೆ ಅವರು ಮತ ಚಲಾವಣೆ ಮಾಡಿದರು.. ಅನಂತರ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ..
ಇದನ್ನೂ ಓದಿ; ಆಯೋಧ್ಯೆ ರಾಮಲಲ್ಲಾ ಹಣೆಗೆ ಸ್ಪರ್ಶಿಸಿದ ಸೂರ್ಯ ರಶ್ಮಿ