ಗುಜರಾತ್ನಲ್ಲಿ ಮೂರಕ್ಕೇರಿದ ಓಮಿಕ್ರಾನ್ ಪಾಸಿಟೀವ್ ಸಂಖ್ಯೆ
ಗಾಂಧೀನಗರ: ಜಿಂಬಾಬ್ವೆಯಿಂದ ಗುಜರಾತ್ಗೆ ವಾಪಸ್ಸಾಗಿದ್ದ ಎನ್ಆರ್ಐ ವ್ಯಕ್ತಿಯಲ್ಲಿ ಓಮಿಕ್ರಾನ್ ಪತ್ತೆಯಾಗಿತ್ತು. ಈಗ ಅವನ ಪತ್ನಿ ಮತ್ತು ಬಾಮೈದುನನಿಗೂ ಸೋಂಕು ದೃಢಪಟ್ಟಿದೆ.
ಸೋಂಕಿತನ ಪತ್ನಿ ಹಾಗೂ ಬಾಮೈದುನನನ್ನೂ ಪರೀಕ್ಷೆಗೆ ಒಳಪಡಿಸಿದಾಗ ಓಮಿಕ್ರಾನ್ ಇರುವುದು ಪತ್ತೆಯಾಗಿದೆ. ಸೋಂಕಿತರಿಬ್ಬರನ್ನೂ ನಗರದ ಗುರು ಗೋವಿಂದ ಸಿಂಗ್ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸ್ಥಳಾಂತರಿಸಲಾಗಿದೆ. ಈ ಮೂಲಕ ಗುಜರಾತ್ ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತ ಮೂರು ಪ್ರಕರಣಗಳು ವರದಿಯಾಗಿವೆ ಎಂದು ಜಾಮ್ನಗರ ಮುನಿಸಿಪಲ್ ಕಾರ್ಪೊರೇಷನ್ ತಿಳಿಸಿದೆ.
ದೇಶದಲ್ಲಿ ಈವರೆಗೆ ಒಟ್ಟು 25 ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿವೆ