Politics

ಬೆಳಗಾವಿಗೆ ಶೆಟ್ಟರ್‌ ಅಲ್ಲ, ಫೈರ್‌ ಬ್ರಾಂಡ್‌ ಯತ್ನಾಳ್‌ಗೆ ಟಿಕೆಟ್‌?; ಏನಿದು ಟ್ವಿಸ್ಟ್‌?

ಬೆಂಗಳೂರು; ಕಾಂಗ್ರೆಸ್‌ ಸೇರಿ ಬಿಜೆಪಿಗೆ ವಾಪಸ್ಸಾಗಿದ್ದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಧಾರವಾಡ ಅಥವಾ ಹಾವೇರಿ ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್‌ ಬಯಸಿದ್ದರು.. ಆದ್ರೆ ಬಿಜೆಪಿ ಹೈಕಮಾಂಡ್‌ ಬೆಳಗಾವಿಗೆ ಬೆರಳು ತೋರಿಸಿತ್ತು.. ಮೊದಲಿಗೆ ಜಗದೀಶ್‌ ಶೆಟ್ಟರ್‌ ಅವರು ಬೆಳಗಾವಿಗೆ ಹೋಗಲು ಒಪ್ಪಿರಲಿಲ್ಲ.. ಹೀಗಾಗಿ ಬೆಳಗಾವಿಯಲ್ಲಿ ಸ್ಪರ್ಧೆಗೆ ಒಪ್ಪಿದ್ದಾರೆ… ಆದ್ರೆ ಬದಲಾದ ರಾಜಕೀಯ ಲೆಕ್ಕಾಚಾರದಲ್ಲಿ ವಿಜಯಪುರ ಶಾಸಕ ಹಾಗೂ ಬಿಜೆಪಿ ಫೈರ್‌ ಬ್ರಾಂಡ್‌ ಬಸನಗೌಡ ಪಾಟೀಲ್‌ ಯತ್ನಾಳ್‌ ಹೆಸರು ಮುನ್ನೆಲೆಗೆ ಬಂದಿದೆ..

ಏನಿದು ಹೊಸ ಲೆಕ್ಕಾಚಾರ..?

ಬೆಳಗಾವಿಯಲ್ಲಿ ಕಾಂಗ್ರೆಸ್‌ನಿಂದ ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರ ಮೃಣಾಲ್‌ ಅಭ್ಯರ್ಥಿಯಾಗೋದು ಬಹುತೇಕ ಖಚಿತವಾಗಿದೆ.. ಯಾಕಂದ್ರೆ ಮೃಣಾಲ್‌ಗೆ ಅಡ್ಡಿಯಾಗಿದ್ದ ಸತೀಶ್‌ ಜಾರಕಿಹೊಳಿ ಮನವೊಲಿಸಿ ಅವರಿಗೆ ಮಗಳಿಗೆ ಚಿಕ್ಕೋಡಿಯಿಂದ ಟಿಕೆಟ್‌ ನೀಡಲಾಗುತ್ತಿದೆ.. ಇಲ್ಲಿ ಮೃಣಾಲ್‌ಗೆ ಟಿಕೆಟ್‌ ನೀಡಿದರೆ, ಬಿಜೆಪಿಯಿಂದ ಪಂಚಮಸಾಲಿ ಅಸ್ತ್ರ ಪ್ರಯೋಗಿಸೋಕೆ ಬಿಜೆಪಿ ಮುಂದಾಗಿದೆ.. ಪಂಚಮಸಾಲಿ ಸಮುದಾಯದ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಬೆಳಗಾವಿ ಕ್ಷೇತ್ರದ ಅಭ್ಯರ್ಥಿಯಾದರೆ ಗೆಲುವು ಸುಲಭವಾಗುತ್ತೆ ಅನ್ನೋ ಲೆಕ್ಕಾಚಾರಗಳು ಶುರುವಾಗಿವೆ..

ಶೆಟ್ಟರ್‌ ಅಭ್ಯರ್ಥಿಯಾಗೋದು ರಾಮೇಶ್‌ ಜಾರಕಿಹೊಳಿಗೆ ಇಷ್ಟವಿಲ್ಲ;

ಮೊದಲೇ ಶೆಟ್ಟರ್‌ ಬೆಳಗಾವಿಯಲ್ಲಿ ಅಭ್ಯರ್ಥಿಯಾಗುತ್ತಾರೆ ಎಂದು ತಿಳಿದಾಗ ಅಲ್ಲಿನ ಗೋಬ್ಯಾಕ್‌ ಶೆಟ್ಟರ್‌ ಅಭಿಯಾನ ಶುರು ಮಾಡಿದ್ದರು.. ಇದರಿಂದಾಗಿ ಶೆಟ್ಟರ್‌ ಅವರು ನನಗೆ ಬೆಳಗಾವಿ ಬೇಡ, ಧಾರವಾಡ ಅಥವಾ ಹಾವೇರಿ ಕೊಡಿ ಎಂದು ಕೇಳಿದ್ದರು.. ಆದ್ರೆ ಹೈಕಮಾಡ್‌ ಇದಕ್ಕೆ ಒಪ್ಪಿಲ್ಲ… ಬೆಳಗಾವಿಯಲ್ಲೇ ಸ್ಪರ್ಧೆ ಮಾಡಿ ಎಂದು ಹೇಳಿತ್ತು. ಈ ನಡುವೆ, ಸ್ಥಳೀಯ ನಾಯಕ ರಮೇಶ್‌ ಜಾರಕಿಹೊಳಿ, ಶೆಟ್ಟರ್‌ ಸ್ಪರ್ಧೆಗೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯರಿಗೇ ಟಿಕೆಟ್‌ ಕೊಡಿ ಎಂದು ಅವರು ಹೇಳುತ್ತಿದ್ದರು.. ಈಗ ರಮೇಶ್‌ ಜಾರಕಿಹೊಳಿಯವರು ಫೈರ್‌ ಬ್ರಾಂಡ್‌ ಬಸನಗೌಡ ಪಾಟೀಲ್‌ ಯತ್ನಾಳ್‌ ಪರ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. ದೆಹಲಿಯಲ್ಲಿ ಯತ್ನಾಳ್‌ ಪರ ರಮೇಶ್‌ ಜಾರಕಿಹೊಳಿ ಲಾಬಿ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ..

ದೆಹಲಿಯಲ್ಲೇ ಬೀಡುಬಿಟ್ಟ ಯತ್ನಾಳ್‌;

ಬಿಜೆಪಿ ಫೈರ್‌ ಬ್ರಾಂಡ್‌ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ.. ಇಂದು ಅವರು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೆಟಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ.. ರಮೇಶ್‌ ಜಾರಕಿಹೊಳಿಯವರ ಬೆಂಬಲವೂ ಅವರಿಗಿದೆ.. ಇತ್ತ ಶೆಟ್ಟರ್‌ಗೆ ಯಡಿಯೂರಪ್ಪ ಬೆಂಬಲಕ್ಕಿದ್ದಾರಾದರೂ, ಸಂತೋಷ್‌ ಅವರು ಬೆಂಬಲಿಸುತ್ತಿಲ್ಲ.. ಹೀಗಾಗಿ ಹೈಕಮಾಂಡ್‌ ಜಾತಿ ಲೆಕ್ಕಾಚಾರ ಮಾಡಿ ಯತ್ನಾಳ್‌ ಅವರಿಗೆ ಟಿಕೆಟ್‌ ಕೊಟ್ಟರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.

ನಾಳೆ ರಿಲೀಸ್‌ ಆಗಲಿರುವ ಬಿಜೆಪಿ ಮೂರನೇ ಪಟ್ಟಿ;

ನಾಳೆ ಬಿಜೆಪಿಯ ಮೂರನೇ ಪಟ್ಟಿ ರಿಲೀಸ್‌ ಆಗುವ ಎಲ್ಲಾ ಸಾಧ್ಯತೆಗಳೂ ಇವೆ… ಹೀಗಾಗಿ ಇಂದು ಸಾಕಷ್ಟು ಸರ್ಕಸ್‌ ನಡೆಸಲಾಗುತ್ತಿದೆ.. ಬೆಳಗಾವಿಯಲ್ಲಿ ರಮೇಶ್‌ ಜಾರಕಿಹೊಳಿ ಬೆಂಬಲವಿಲ್ಲದೆ ಬಿಜೆಪಿ ಗೆಲ್ಲೋದು ಕಷ್ಟವಾಗುತ್ತದೆ.. ಹೀಗಾಗಿ ಹೈಕಮಾಂಡ್‌ ಅವರ ಮಾತು ಕೇಳುವ ಎಲ್ಲಾ ಸಾಧ್ಯತೆ ಇದೆ.. ಹೀಗಾಗಿ ಎಲ್ಲರ ಕುತೂಹಲ ನಾಳೆ ಬಿಡುಗಡೆಯಾಗುವ ಲಿಸ್ಟ್‌ ಕಡೆ ನೆಟ್ಟಿದೆ.

ಟಿಕೆಟ್‌ ಸಿಗುವ ವಿಶ್ವಾಸದಲ್ಲಿರುವ ಜಗದೀಶ್‌ ಶೆಟ್ಟರ್‌;

ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಸಿಗುತ್ತದೆ ಎಂಬ ಆಸೆಯಿಂದಲೇ ಶೆಟ್ಟರ್‌ ಅವರು ಪಕ್ಷಕ್ಕೆ ವಾಪಸ್ಸಾಗಿದ್ದರು.. ಈಗ ಅವರಿಗೆ ಕೇಳಿದ ಕ್ಷೇತ್ರಕ್ಕೆ ಟಿಕೆಟ್‌ ಸಿಕ್ಕಿಲ್ಲ.. ಹೈಕಮಾಂಡ್‌ ಕೊಡುತ್ತೇನೆಂದು ಹೇಳಿರುವ ಕ್ಷೇತ್ರಕ್ಕೂ ಕೊನೆಯ ಕ್ಷಣದಲ್ಲಿ ಅಡ್ಡಿಯುಂಟಾಗುತ್ತಿದೆ.. ಆದರೂ ಕೂಡಾ ಶೆಟ್ಟರ್‌ ಅವರು ಬೆಳಗಾವಿ ಟಿಕೆಟ್‌ ನನಗೇ ಸಿಗುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಲಿಸ್ಟ್‌ ರಿಲೀಸ್‌ ಆದ ಮೇಲೆಯೇ ಯಾರಿಗೆ ಟಿಕೆಟ್‌ ಅನ್ನೋದು ಕನ್ಫರ್ಮ್‌ ಆಗುತ್ತೆ.

 

Share Post