Politics

Mysore Loksabha; ಮೈಸೂರಲ್ಲಿ ಯತೀಂದ್ರ-ಯದುವೀರ ಯುದ್ಧ ಫಿಕ್ಸ್‌!

ಮೈಸೂರು; ಬೆಂಗಳೂರು-ಮೈಸೂರು ರೂಟ್‌ನಲ್ಲಿ ಬರುವ ಮೂರು ಲೋಕಸಭಾ ಕ್ಷೇತ್ರಗಳು ರಾಜ್ಯದಲ್ಲೇ ಭಾರಿ ಕುತೂಹಲ ಕೆರಳಿಸಿರುವ ಲೋಕಸಭಾ ಕ್ಷೇತ್ರಗಳು.. ಯಾಕಂದ್ರೆ, ಬೆಂಗಳೂರು ಗ್ರಾಮಾಂತರದಲ್ಲಿ ಡಿಸಿಎಂ ಸಹೋದರ ಡಿ.ಕೆ.ಸುರೇಶ್‌ ಅಭ್ಯರ್ಥಿ, ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಅಭ್ಯರ್ಥಿಯಾಗೋದು ಬಹುತೇಕ ಫಿಕ್ಸ್‌ ಆಗಿದೆ.. ಇನ್ನು ಕೊನೇ ಹಂತದಲ್ಲಿ ಮೈಸೂರು-ಕೊಡಗು ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಕಣಕ್ಕಿಳಿಯುತ್ತಾರೆ ಎಂದು ಹೇಳಲಾಗುತ್ತಿದೆ.. ಹೀಗಾಗಿಯೇ ಈ ಕ್ಷೇತ್ರಗಳು ಭಾರೀ ಕುತೂಹಲ ಕೆರಳಿಸಿವೆ..

ಇದನ್ನೂ ಓದಿ; ಯಡಿಯೂರಪ್ಪ ಪುತ್ರನ ವಿರುದ್ಧ ಈಶ್ವರಪ್ಪ ಸ್ಪರ್ಧೆ; ಘೋಷಣೆ

ಕಾಂಗ್ರೆಸ್‌ ಅಭ್ಯರ್ಥಿಯಾಗ್ತಾರಾ ಯತೀಂದ್ರ ಸಿದ್ದರಾಮಯ್ಯ..?;

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮುಗಿದ ಮೇಲೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ ಅಭ್ಯರ್ಥಿ ಎಂದು ಬಂಬಿಸಲಾಗಿತ್ತು.. ಆದ್ರೆ ಬರಬರುತ್ತಾ ಅವರ ಹೆಸರೇ ರೇಸ್‌ನಲ್ಲಿ ಇಲ್ಲದಾಯ್ತು.. ಯತೀಂದ್ರ ಅವರಿಗೆ ಟಿಕೆಟ್‌ ಕೊಡಿ ಎಂದು ಕೇಳ್ತಿದ್ದವರೇ ಸೈಲೆಂಟ್‌ ಆಗಿಬಿಟ್ಟರು.. ಯತೀಂದ್ರ ಸಿದ್ದರಾಮಯ್ಯ ಅವರು ಕೂಡಾ ನಾನೇ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಂಡು ಓಡಾಡುವುದಕ್ಕೂ ಕಡಿಮೆ ಮಾಡಿದ್ದರು.. ಆದ್ರೆ ಯಾವಾಗ ಯದುವೀರ್‌ ಅವರು ಬಿಜೆಪಿ ಅಭ್ಯರ್ಥಿಯಾದರೋ ಮತ್ತೆ ಯತೀಂದ್ರ ಹೆಸರು ಮುನ್ನೆಲೆಗೆ ಬಂದಿದೆ.. ಯದುವೀರ್‌ಗೆ ಪ್ರಬಲ ಪೈಪೋಟಿ ನೀಡುವ ತಾಕತ್ತು ಯತೀಂದ್ರಗೆ ಮಾತ್ರ ಇರೋದು.. ಹೀಗಾಗಿ ಯತೀಂದ್ರ ಅವರನ್ನೇ ಅಭ್ಯರ್ಥಿ ಮಾಡಿ ಎಂಬ ಒತ್ತಡಗಳು ಹೆಚ್ಚಾಗುತ್ತಿವೆ.. ಹೀಗಾಗಿ ಕಾಂಗ್ರೆಸ್‌ ನಾಯಕರು ಈ ಬಗ್ಗೆ ಚಿಂತನೆ ಶುರು ಮಾಡಿದ್ದಾರೆ ಎನ್ನಲಾಗ್ತಿದೆ…

ಇದನ್ನೂ ಓದಿ; ಮಂಡ್ಯದಲ್ಲಿ‌‌ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್

ಮೊದಲು ಯಾಕೆ ಯತೀಂದ್ರ ಹೆಸರು ಕೈಬಿಡಲಾಗಿತ್ತು..?

ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರವನ್ನು ಯತೀಂದ್ರ ಅವರು ತಮ್ಮ ತಂದೆಗೆ ಬಿಟ್ಟುಕೊಟ್ಟಿದ್ದರು.. ಈ ಕಾರಣಕ್ಕಾಗಿ ಅವರನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಮಾಡೋದಕ್ಕೆ ಚಿಂತನೆ ನಡೆದಿತ್ತು.. ಮೈಸೂರು ಭಾಗದ ಮುಖಂಡರ ಬಾಯಿಂದಲೂ ಇದೇ ಹೆಸರು ಹೆಚ್ಚು ಹೇಳಿಸಲಾಗಿತ್ತು. ಟಿಕೆಟ್‌ ಆಕಾಂಕ್ಷಿಗಳು ಕೂಡಾ ಯತೀಂದ್ರ ಅವರಿಗೆ ಟಿಕೆಟ್‌ ಕೊಡೋದಾದರೆ ನಮ್ಮ ಬೆಂಬಲವಿದೆ ಎಂದು ಹೇಳಿಕೊಂಡು ಬಂದಿದ್ದರು.. ಆದ್ರೆ ಕಾಂಗ್ರೆಸ್‌ ಪಕ್ಷದ ಆತಂರಿಕ ಸಮೀಕ್ಷೆಯಲ್ಲಿ ಯತೀಂದ್ರ ಬಗ್ಗೆ ಮತದಾರರಲ್ಲಿ ಅಷ್ಟೊಂದು ಒಲವಿಲ್ಲ ಎಂದು ವರದಿ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಹೆಸರು ಕೈಬಿಡಲಾಗಿತ್ತು ಎನ್ನಲಾಗಿದೆ.. ಇದೀಗ ಬಿಜೆಪಿ ಅಭ್ಯರ್ಥಿ ಬದಲಾಗಿದ್ದಾರೆ.. ಯದುವೀರ್‌ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.. ಹೀಗಾಗಿ, ಆಕಾಂಕ್ಷಿಗಳು ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ.. ಜೊತೆಗೆ ಯತೀಂದ್ರ ಅವರೇ ಸೂಕ್ತ ಅಭ್ಯರ್ಥಿ ಎಂದು ಹೇಳಲಾರಂಭಿಸಿದ್ದಾರೆ..

ಇದನ್ನೂ ಓದಿ; ದೆಹಲಿ ಮದ್ಯ ಹಗರಣ; ಕೆಸಿಆರ್ ಪುತ್ರಿ ಕವಿತಾ ಅರೆಸ್ಟ್

ಯದುವೀರ್‌ ವಿರುದ್ಧ ಯತೀಂದ್ರ ಗೆಲ್ಲೋದಕ್ಕೆ ಆಗುತ್ತಾ..?

ರಾಜ ವಂಶಸ್ಥ ಯದುವೀರ್‌ ಅವರಿಗೆ ಬಿಜೆಪಿ ಟಿಕೆಟ್‌ ಕೊಟ್ಟಿದೆ… ಜೆಡಿಎಸ್‌ ಕೂಡಾ ಅವರಿಗೆ ಬೆಂಬಲ ಕೊಡುತ್ತಿದೆ.. ಈಗಾಗಲೇ ಎರಡೂ ಪಾರ್ಟಿಯ ನಾಯಕರು ಪ್ರಚಾರ ಶುರು ಮಾಡಿದ್ದಾರೆ.. ಇದರ ನಡುವೆ ಯದುವೀರ್‌ ರಾಜಕೀಯಕ್ಕೆ ಬರಬಾರದಿತ್ತು ಎಂಬ ಕೂಗು ಕೂಡಾ ಎದ್ದಿದೆ.. ಕೆಲವರು ಅರಮನೆಯಲ್ಲಿರುವ ಯದುವೀರ್‌ ಅವರನ್ನು ಭೇಟಿ ಮಾಡೋದಕ್ಕೆ ಕಷ್ಟವಾಗುತ್ತದೆ… ಹೀಗಾಗಿ ಅವರಿಗೆ ಮತ ನೀಡಿದರೆ ಸಮಸ್ಯೆ ಯಾರಿಗೆ ಹೇಳೋದು ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಲಾಗಿದೆ… ಇದರ ನಡುವೆ ಹಾಲಿ ಸಂಸದ ಪ್ರತಾಪ ಸಿಂಹ ಮುನಿಸಿಕೊಂಡಿದ್ದಾರೆ… ಯದುವೀರ್‌ಗೆ ಟಿಕೆಟ್‌ ಘೋಷಣೆಯಾದ ಮೇಲೆ ಸೈಲೆಂಟ್‌ ಆಗಿದ್ದಾರೆ.. ಪ್ರತಾಪ ಸಿಂಹ ಅವರ ಬೆಂಬಲಿಗರು ಕೂಡಾ ಆಕ್ರೋಶಗೊಂಡಿದ್ದಾರೆ… ಅವರ ಮತಗಳ ಸೆಳೆದರೆ ಕಾಂಗ್ರೆಸ್‌ಗೆ ಲಾಭವಾಗುತ್ತದೆ.. ಯತೀಂದ್ರ ಸ್ಪರ್ಧೆ ಮಾಡಿದರೆ ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸಿನಿಂದ ಗೆಲ್ಲೋದಕ್ಕೆ ಸಾಧ್ಯ ಎಂಬ ಮಾತುಗಳು ಕೇಳಿಬರುತ್ತಿವೆ..

ಇದನ್ನೂ ಓದಿ; Bommai; ಪಕ್ಷ ಎಲ್ಲ ನಿಷ್ಠಾವಂತರಿಗೆ ಟಿಕೆಟ್ ಕೊಟ್ಟಿದೆ; ಬಸವರಾಜ ಬೊಮ್ಮಾಯಿ

ಲಕ್ಷ್ಮಣ್‌ಗೆ ಟಿಕೆಟ್‌ ಕೊಟ್ಟರೆ ಗೆಲ್ಲೋದು ಕಷ್ಟವೇ..?

ಇದಕ್ಕೂ ಮೊದಲು ಕಾಂಗ್ರೆಸ್‌ ಸ್ಥಳೀಯ ನಾಯಕ ಲಕ್ಷ್ಮಣ್‌ ಅವರಿಗೆ ಟಿಕೆಟ್‌ ನೀಡಲು ಕಾಂಗ್ರೆಸ್‌ ಬಹುತೇಕ ನಿರ್ಧಾರ ಮಾಡಿತ್ತು.. ಈಗಲೂ ಕೂಡಾ ಯತೀಂದ್ರ ಅಲ್ಲದಿದ್ದರೆ ನೆಕ್ಸ್ಟ್‌ ಕಾಣಿಸೋ ಹೆಸರೇ ಲಕ್ಷ್ಮಣ್‌… ಕಳೆದ ಕೆಲ ವರ್ಷಗಳಿಂದ ಅವರು ಮೈಸೂರು ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು… ಹೀಗಾಗಿ ಅವರಿಗೆ ಟಿಕೆಟ್‌ ಕೊಡಬೇಕೆಂಬ ಕೂಗೂ ಇದೆ.. ಆದ್ರೆ ಯದುವೀರ್‌ ವಿರುದ್ಧ ಸೆಣಸೋದಕ್ಕೆ ಅವರಿಂದ ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.. ಈ ಹಿಂದೆ ಎರಡು ಬಾರಿ ಪರಿಷತ್‌ ಚುನಾವಣೆ ಸೋತಿರುವ ಲಕ್ಷ್ಮಣ್‌ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲೋದು ಕಷ್ಟ ಎಂಬುದು ಕೆಲವರ ವಾದ.. ಹೀಗಾಗಿ, ಯತೀಂದ್ರ ಅವರಿಗೆ ಟಿಕೆಟ್‌ ಕೊಡಬೇಕೆಂದು ಕೇಳುವವರು ಜಾಸ್ತಿಯಾಗುತ್ತಿದ್ದಾರೆ..

ಇದನ್ನೂ ಓದಿ; BSY ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ!

ಸೋತರೆ  ಸಿಎಂಗೆ ಅವಮಾನವಾಗುತ್ತದೆ ಎಂಬ ಭಯ..!;

ಮೈಸೂರು ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರ.. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ.. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ.. ಹೀಗಾಗಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಗೆಲ್ಲಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಸಿದ್ದರಾಮಯ್ಯ ಅವರಿಗಿದೆ.. ಸೋತರೆ  ಸ್ವಕ್ಷೇತ್ರದಲ್ಲೇ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ ಎಂದು ವಿಪಕ್ಷಗಳು ಲೇವಡಿ ಮಾಡುತ್ತವೆ.ಇದರಿಂದ ಅವಮಾನವಾಗುತ್ತದೆ ಎಂಬ ಭಯ ಕೂಡಾ ಇದೆ.. ಇನ್ನು ಸ್ವಂತ ಪುತ್ರನನ್ನೇ ನಿಲ್ಲಿಸಿ ಸೋಲಾದರೆ ಇನ್ನೂ ಅವಮಾನ.. ಹೀಗಾಗಿ, ಯತೀಂದ್ರ ಅವರನ್ನು ಕಣಕ್ಕಿಳಿಸಬೇಕೇ ಬೇಡವೇ ಎಂಬುದರ ಬಗ್ಗೆ ಇನ್ನೂ ಯಾವುದೇ ತೀರ್ಮಾನಕ್ಕೆ ಬರಲಾಗುತ್ತಿಲ್ಲ..

ಇಂದು ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.. ಅಂತಿಮ ಹಂತದಲ್ಲಿ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಅಲ್ಲದೆ, ಕೊನೇ ಕ್ಷಣದಲ್ಲಿ ಯತೀಂದ್ರ ಅವರನ್ನೇ ಕಣಕ್ಕಿಳಿಸಿದರೂ ಅಚ್ಚರಿ ಪಡಬೇಕಿಲ್ಲ.

ಇದನ್ನೂ ಓದಿ; ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷನ ಮೇಲೆ ಮಾರಣಾಂತಿಕ ಹಲ್ಲೆ; ತುಮಕೂರಲ್ಲಿ ನಡೆದಿದ್ದಾದ್ರೂ ಏನು..?

Share Post