Politics

ನಾಳೆ 25 ಕ್ಷೇತ್ರಗಳಿಗೆ ವಿಧಾನ ಪರಿಷತ್‌ ಚುನಾವಣೆ

ಬೆಂಗಳೂರು: ೨೦೨೧ರ ಕರ್ನಾಟಕ ರಾಜ್ಯ ವಿಧಾನಪರಿಷತ್‌ಗೆ ನಾಳೆ ಚುನಾವಣೆ ನಡೆಯಲಿದೆ. ೨೫ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಬೀದರ್-೧, ಕಲಬುರ್ಗಿ-೧, ವಿಜಯಪುರ-೨, ಉತ್ತರ ಕನ್ನಡ-೧, ಧಾರವಾಡ-೨, ರಾಯಚೂರು-೧, ಬಳ್ಳಾರಿ-೧, ಶಿವಮೊಗ್ಗ-೧, ಚಿತ್ರದುರ್ಗ-೧, ದ.ಕನ್ನಡ-೨, ಮೈಸೂರು-೨, ಚಿಕ್ಕಮಗಳೂರು-೧, ಹಾಸನ-೧, ತುಮಕೂರು-೧, ಮಂಡ್ಯ-೧, ಬೆಂಗಳೂರು-೧, ಬೆ.ಗ್ರಾಮಾಂತರ-೧, ಕೋಲಾರ-೧, ಕೊಡಗು-೧ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ. ಒಟ್ಟು ೨೨೮ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಡಿ.೧೦ರಂದು ಬೆಳಗ್ಗೆ ೮ಗಂಟೆಯಿಂದ ಸಂಜೆ ೪ರವರೆಗೆ ಮತದಾನ ನಡೆಯಲಿದೆ. ಎಲ್ಲಾ ಮತಗಟ್ಟೆಗಳಲ್ಲೂ ಬಿಗಿ ಪೊಲೀಸ್‌ ಬಂದೋಬಸ್ತ್‌, ಸಿಸಿ ಕ್ಯಾಮರಾಗಳ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಸಂಜೆಯಿಂದಲೇ ನಿಷೇಧಾಜ್ಞೆ ಜಾರಿಮಾಡಲಾಗಿದ್ದು, ಮದ್ಯಮಾರಾಟ ಮಾಡದಂತೆ ಆದೇಶಿಸಲಾಗಿದೆ. ಮತದಾನ ಮುಗಿಯುವವರೆಗೆ ಗುಂಪುಗೂಡುವಿಕೆ, ಸಭೆ ಸಮಾರಂಭಗಳನ್ನು ಮಾಡಿದ್ರೆ ದಂಡ ತೆರಬೇಕಾಗುತ್ತದೆ.

Share Post