Oral hygiene; ಟೂತ್ ಬ್ರಷ್ ಎಷ್ಟು ದಿನಕ್ಕೊಮ್ಮೆ ಬದಲಿಸಬೇಕು?; ಬದಲಿಸದಿದ್ದರೆ ಏನಾಗುತ್ತೆ..?
ಬೆಂಗಳೂರು; ತುಂಬಾನೇ ಜನ ಏನೇನಕ್ಕೋ ಹಣ ನೀರಿನಂತೆ ಖರ್ಚು ಮಾಡುತ್ತಿರುತ್ತಾರೆ. ಆದ್ರೆ ಕೆಲವು ಅಗತ್ಯಗಳಿಗೆ ಮಾತ್ರ ಸೋಮಾರಿತನ ತೋರಿಸುತ್ತಾರೆ.. ಅದಕ್ಕೊಂದು ಉದಾಹರಣೆ ಟೂತ್ ಬ್ರಷ್.. ಹಲ್ಲುಜ್ಜುವ ಬ್ರಷ್ ಸವೆದು ಹೋದರೂ ಕೂಡಾ ತುಂಬಾ ಜನ ಹಾಗೆಯೇ ಉಪಯೋಗಿಸುತ್ತಿರುತ್ತಾರೆ.. ನಿಜ ಹೇಳಬೇಕು ಅಂದ್ರೆ ಪ್ರತಿದಿನ ಸ್ವಚ್ಛವಾಗಿ ಹಲ್ಲುಜ್ಜುವುದು ಎಷ್ಟು ಮುಖ್ಯವೋ, ಕಾಲಕಾಲಕ್ಕೆ ಹಲ್ಲುಜ್ಜುವ ಬ್ರಷ್ ಬದಲಾಯಿಸುವುದು ಕೂಡಾ ಅಷ್ಟೇ ಮುಖ್ಯವಾಗುತ್ತದೆ.
ಸ್ವಚ್ಛತೆಗೆ ಒತ್ತು ಕೊಡುವ ಜನ ಕೂಡಾ ಒಳ್ಳೆಯ ಟೂತ್ ಬ್ರಶ್ ಬಳಸುವುದು, ಒಳ್ಳೆಯ ಸಾಬೂನು ಬಳಸುವುದರಲ್ಲಿ ಯಾಕೋ ನಿರ್ಲಕ್ಷ್ಯ ತೋರುತ್ತಾರೆ. ಇದರಿಂದ ಸಮಸ್ಯೆಯೇ ಹೆಚ್ಚು. ಬಾಯಿಯನ್ನು ಆರೋಗ್ಯವಾಗಿಡಲು ಮತ್ತು ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ನಿಯಮಿತವಾಗಿ ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸುವುದು ಬಹಳ ಮುಖ್ಯ. ನಿಮ್ಮ ಟೂತ್ ಬ್ರಷ್ ಸವೆಯುತ್ತಿದ್ದರೆ, ಬಣ್ಣ ಕಳೆದುಕೊಂಡಿದ್ದರೆ ತಕ್ಷಣ ಅದನ್ನು ಬದಲಿಸಬೇಕು. ಬ್ರಷ್ ಅನ್ನು ಧೀರ್ಘವಾಗಿ ಬಳಸುವುದರಿಂದ ಬಾಯಿಯಿಂದ ಪ್ಲೇಕ್ ಮತ್ತು ಬ್ಯಾಕ್ಟೀರಿಯಾವನ್ನು ತೆಗೆದುಹಾಕುವುದು ಕಷ್ಟವಾಗುತ್ತದೆ. ಇದರಿಂದಾಗಿ ಬಾಯಿಯ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ.
ನಾಲ್ಕು ತಿಂಗಳಿಗೊಮ್ಮೆ ಬ್ರಷ್ ಬದಲಾಯಿಸಿ;
ನಾಲ್ಕು ತಿಂಗಳಿಗೊಮ್ಮೆ ಬ್ರಷ್ ಬದಲಾಯಿಸಿ; ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಟೂತ್ ಬ್ರಷ್ ಅನ್ನು ಬದಲಾಯಿಸಬೇಕು. ಅದಕ್ಕಿಂತ ಹೆಚ್ಚು ಸಮಯ ಬ್ರಷ್ ಬಳಸಿದರೆ ಸವೆದು ಒಸಡುಗಳಿಗೆ ಹಾನಿಯಾಗುತ್ತದೆ. ಪ್ರತಿನಿತ್ಯ ಹಲ್ಲುಜ್ಜಿದರೂ ಹಲ್ಲು ಸರಿಯಾಗಿ ಶುಚಿಯಾಗುವುದಿಲ್ಲ. ಇದು ದಂತಕ್ಷಯ ಮತ್ತು ವಸಡು ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಅನಾರೋಗ್ಯದ ನಂತರ ಬ್ರಷ್ ಬದಲಿಸಿ;
ಅನಾರೋಗ್ಯದ ನಂತರ ಬ್ರಷ್ ಬದಲಿಸಿ; ಶೀತ, ಜ್ವರ, ವೈರಲ್ ಸೋಂಕಿನಂತಹ ಕಾಯಿಲೆಗಳಿಂದ ಚೇತರಿಸಿಕೊಂಡ ನಂತರ ನೀವು ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸಬೇಕು. ನಿಮ್ಮ ಟೂತ್ ಬ್ರಷ್ ಮೇಲೆ ಬ್ಯಾಕ್ಟೀರಿಯಾ ಮತ್ತು ವೈರಸ್ಗಳು ಇರುತ್ತವೆ. ಇದು ಮರು-ಸೋಂಕಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅನಾರೋಗ್ಯದ ನಂತರ ನಿಮ್ಮ ಬ್ರಷ್ ಅನ್ನು ಬದಲಾಯಿಸುವುದು ಸೂಕ್ಷ್ಮಜೀವಿಗಳನ್ನು ಹರಡುವ ಅಪಾಯವನ್ನು ಕಡಿಮೆ ಮಾಡುತ್ತದೆ. ಬಾಯಿಯ ಆರೋಗ್ಯವನ್ನು ರಕ್ಷಿಸುತ್ತದೆ.
12 ವಾರಕೊಮ್ಮೆ ಎಲೆಕ್ಟ್ರಿಕ್ ಬ್ರಷ್ ಬದಲಿಸಿ;
12 ವಾರಕೊಮ್ಮೆ ಎಲೆಕ್ಟ್ರಿಕ್ ಬ್ರಷ್ ಬದಲಿಸಿ; ಸಾಮಾನ್ಯವಾಗಿ, ಎಲೆಕ್ಟ್ರಿಕ್ ಟೂತ್ ಬ್ರಷ್ ಹೆಡ್ ಅನ್ನು ಪ್ರತಿ 12 ವಾರಗಳಿಗೊಮ್ಮೆ ಬದಲಾಯಿಸಬೇಕು. ಎಲೆಕ್ಟ್ರಿಕ್ ಬ್ರಷ್ ಹೆಡ್ ಸಣ್ಣ ಬಿರುಗೂದಲುಗಳನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ, ಅವು ಬೇಗನೆ ಸವೆಯುತ್ತವೆ.
ಹಲ್ಲಿನ ಚಿಕಿತ್ಸೆಯ ನಂತರ ಬ್ರಷ್ ಬದಲಿಸಿ;
ಹಲ್ಲಿನ ಚಿಕಿತ್ಸೆಯ ನಂತರ ಬ್ರಷ್ ಬದಲಿಸಿ; ಬಾಯಿಯ ಶಸ್ತ್ರಚಿಕಿತ್ಸೆ, ರೂಟ್ ಕೆನಾಲ್ ಥೆರಪಿ, ವಸಡು ಕಾಯಿಲೆಯ ಚಿಕಿತ್ಸೆ, ಇತ್ಯಾದಿ ದಂತ ಚಿಕಿತ್ಸೆಗಳ ನಂತರ ಬ್ರಷ್ ಬದಲಿಸಬೇಕು. ಬಾಯಿಯ ಶಸ್ತ್ರಚಿಕಿತ್ಸೆ, ರೂಟ್ ಕೆನಾಲ್ ಥೆರಪಿ, ವಸಡಿನ ಕಾಯಿಲೆಯ ಚಿಕಿತ್ಸೆ ಮುಂತಾದ ದಂತ ಚಿಕಿತ್ಸೆಗಳ ನಂತರ ಬ್ರಷ್ ಅನ್ನು ಬದಲಾಯಿಸಬೇಕು ಎಂದು ತಜ್ಞರು ಹೇಳುತ್ತಾರೆ. ಚಿಕಿತ್ಸೆ ನೀಡಿದ ಪ್ರದೇಶದಲ್ಲಿ ಬ್ಯಾಕ್ಟೀರಿಯಾದ ಸೋಂಕಿನ ಅಪಾಯ ಹೆಚ್ಚು. ಹೀಗಾಗಿ ಸಮಸ್ಯೆ ಬರದಂತೆ ತಡೆಯಲು ಹೊಸ ಬ್ರಷ್ ಅನ್ನು ಬಳಸುವುದು ಉತ್ತಮ.