BengaluruCrime

Big Breaking; ಬ್ಯಾಗ್‌ನಿಂದ ಸ್ಫೋಟ; ರಾಮೇಶ್ವರಂ ಕೆಫೆ ಎಂಡಿ ದಿವ್ಯಾ ಹೇಳಿಕೆ

ಬೆಂಗಳೂರು; ಬೆಂಗಳೂರಿನ ವೈಟ್‌ಫೀಲ್ಡ್‌ನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಫೆಯ ಮಾಲೀಕರಾದ ದಿವ್ಯಾ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಮ್ಮ ಕೆಫೆಯ ಕಿಚನ್‌ ಕಡೆಯಿಂದ ಯಾವುದೇ ಸ್ಫೋಟ ಸಂಭವಿಸಿಲ್ಲ. ಹೊರಗಡೆಯಿಂದ ಬಂದವರು ಬ್ಯಾಗ್‌ ಇಟ್ಟು ಹೋಗಿದ್ದು, ಅದರಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆಯೇ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.

ವಾಷ್‌ ಬೇಸಿನ್‌ ಬಳಿ ಯಾರೋ ಬ್ಯಾಗ್‌ ಇಟ್ಟಿದ್ದರು. ಅದರಿಂದಲೇ ಸ್ಫೋಟವಾಗಿದೆ ಎಂದು ದಿವ್ಯಾ ಹೇಳಿದ್ದಾರೆ. ಘಟನೆಯಲ್ಲಿ ಕೆಫೆಯ ಮೂವರು ಸಿಬ್ಬಂದಿ ಹಾಗೂ ಗ್ರಾಹಕರೊಬ್ಬರಿಗೆ ಗಾಯಗಳಾಗಿವೆ. ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಎಲ್ಲರೂ ಔಟ್‌ ಆಫ್‌ ಡೇಂಜರ್‌. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಈ ಹಿಂದೆ ರಾಜಾಜಿ ನಗರದ ರಾಮೇಶ್ವರಂ ಕೆಫೆಯಲ್ಲೂ ಕೂಡಾ ಒಂದು ಬ್ಯಾಗ್‌ ನ್ನು ಯಾರೋ ಇಟ್ಟು ಹೋಗಿದ್ದರು. ಅದನ್ನು ನಾವು ಪೊಲೀಸರುಗೆ ಒಪ್ಪಿಸಿದ್ದೆವು. ಇಂತಹ ಅನುಮಾನಾಸ್ಪದ ವಸ್ತುಗಳು ನಮಗೆ ಎರಡು ಮೂರು ಬಾರಿ ಸಿಕ್ಕಿದ್ದವು. ಈ ಬಗ್ಗೆ ಈ ಹಿಂದೆಯೇ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಆ ವಸ್ತುಗಳನ್ನು ಪೊಲೀಸರಿಗೆ ಒಪ್ಪಿಸಿದ್ದೆವು ಎಂದು ಕೆಫೆ ಎಂಡಿ ದಿವ್ಯಾ ಹೇಳಿದ್ದಾರೆ.

ನಮ್ಮ ಕೆಫೆ ಓಪನ್‌ ಏರಿಯಾ ಇರುವುದರಿಂದ ಹೆಚ್ಚಿನ ಅನಾಹುತ ಆಗಿಲ್ಲ. ಜೊತೆಗೆ ಡಸ್ಟ್‌ ಬಿನ್‌ ಇಡುವ ಸ್ಥಳದಲ್ಲಿ ಸ್ಫೋಟ ಆಗಿರುವುದರಿಂದ ದೊಡ್ಡ ಅನಾಹುತವಾಗಿಲ್ಲ. ಸ್ಥಳದಲ್ಲಿ ಎರಡು ಬಾರಿ ಸ್ಫೋಟ ಸಂಭವಿಸಿದೆ ಎಂದು ನಮ್ಮ ಸಿಬ್ಬಂದಿ ಹೇಳಿದ್ದಾರೆ ಎಂದು ದಿವ್ಯಾ ಹೇಳಿದ್ದಾರೆ.

 

Share Post