Big Breaking; ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ; ಏನಾಯ್ತು..?
ಬೆಂಗಳೂರು; ಬೆಂಗಳೂರಿನ ವೈಟ್ಫೀಲ್ಡ್ ನ ಕುಂದಲಹಳ್ಳಿರುವ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟವಾಗಿದೆ. ಹೋಟೆಲ್ನಲ್ಲಿ ಗ್ರಾಹಕರು ಊಟ ಮಾಡುವ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸ್ಫೋಟದ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ಎಫ್ಎಸ್ಎಲ್ ತಜ್ಞರು ಆಗಮಿಸುತ್ತಿದ್ದು, ಪೊಲೀಸರು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಫೋಟದ ಯಾವುದರಿಂದ ಆಗಿದೆ..? ಕಾರಣ ಏನು..? ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿದೆ. ಸಿಲಿಂಡರ್ ಅಥವಾ ಬಾಯ್ಲರ್ ಸ್ಫೋಟದಿಂದ ಘಟನೆ ಸಂಭವಿಸಿದ್ದರೆ, ಗಾಯಾಳುಗಳಿಗೆ ಸುಟ್ಟ ಗಾಯಗಳಾಗುತ್ತಿದ್ದವು. ಆದ್ರೆ, ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಅವರ ಮೈಮೇಲೆ ಸುಟ್ಟ ರೀತಿಯ ಕುರುಹುಗಳು ಕಾಣಿಸುತ್ತಿಲ್ಲ. ಹೀಗಾಗಿ ಯಾರಾದರೂ ಕಡಿಮೆ ತೀವ್ರತೆ ಸ್ಫೋಟಕ ತಂದು ಸ್ಫೋಟಿಸಿರಬಹುದು ಎಂದು ಶಂಕಿಸಲಾಗಿದೆ. ಆದ್ರೆ ಸೂಕ್ತ ತನಿಖೆಯಿಂದಷ್ಟೇ ನಿಜ ವಿಷಯ ಗೊತ್ತಾಗಲಿದೆ. ಈಗಾಗಲೇ ಪೊಲೀಸರು ಹಾಗೂ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಫೋಟದ ಸದ್ದು ಕೇಳಿ ಜನರು ಭಯಭೀತಿಯಿಂದ ಓಡಿದ್ದಾರೆ. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಕೂಡಾ ಉಂಟಾಗಿತ್ತು. ಸಿಲಿಂಡರ್ ಅಥವಾ ಬಾಯ್ಲರ್ ಸ್ಫೋಟದಿಂದ ಆಗಿರಬಹುದೆಂದು ಶಂಖಿಸಲಾಗಿದೆಯಾದರೂ, ಊಟ ಮಾಡುವ ಸ್ಥಳದಲ್ಲಿದ್ದ ಗ್ರಾಹಕರು ಹೇಗೆ ಗಾಯಗೊಂಡರು ಎಂಬುದರ ಬಗ್ಗೆ ಅನುಮಾನ ಮೂಡಿದೆ.
ವ್ಯಕ್ತಿಯೊಬ್ಬರ ಬ್ಯಾಗ್ ಸ್ಫೋಟದ ಸ್ಥಳದಲ್ಲಿದೆ. ಅದರಲ್ಲಿ ಕೆಲವು ಅನುಮಾನಾಸ್ಪದ ವಸ್ತುಗಳಿವೆ. ಹೀಗಾಗಿ, ಇದು ಬಾಂಬ್ ಸ್ಫೋಟ ಮಾಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.